ETV Bharat / jagte-raho

ಗಂಡು ಮಗು ಇಲ್ಲ ಎಂದು ಮಾವನಿಂದಲೇ ಸೊಸೆಗೆ ಲೈಂಗಿಕ ಕಿರುಕುಳ.. ಇವೆಲ್ಲಾ ಕಾಮನ್​ ಅಂದ್ಲು ಅತ್ತೆ - ಲೈಂಗಿಕ ಕಿರುಕುಳ

ಪ್ರೀತಿಸಿ ಮದುವೆಯಾಗಿದ್ದ ಪತಿ ಗಂಡು ಮಗು ಬೇಕೆಂದು ಪತ್ನಿಗೆ ಕಿರುಕುಳ ನೀಡಿದರೆ, ನಮ್ಮ ಮನೆಗೆ ವಾರಸ್ದಾರ ಬೇಕೆಂದು ಮಾವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Father-in-law sexually abused daughter-in-law
ಮಾವನಿಂದಲೇ ಸೊಸೆಗೆ ಲೈಂಗಿಕ ಕಿರುಕು
author img

By

Published : Sep 29, 2020, 6:02 PM IST

ಗುಂಟೂರು (ಆಂಧ್ರಪ್ರದೇಶ): ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಸೊಸೆ ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂದು ಮಾವನೇ ಆಕೆ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

ಜವಳಿ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗುಂಟೂರು ಮೂಲದ ಯುವತಿ, ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರಂಭದಲ್ಲಿ ಪತ್ನಿಯನ್ನು ಚೆನ್ನಾಗೇ ನೋಡಿಕೊಳ್ಳುತ್ತಿದ್ದ ಆತ ಬಳಿಕ ಗಂಡು ಮಗು ಬೇಕೆಂದು ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಈ ಬಗ್ಗೆ ಮಾವನ ಬಳಿ ನೋವು ತೋಡಿಕೊಂಡರೆ ಮಾವನೇ ಆಕೆಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ.

"ನಮ್ಮ ಮನೆಗೆ ವಾರಸ್ದಾರ ಬೇಕು, ನೀನು ನನ್ನೊಂದಿಗೆ ಇರು. ನಾನು ನಿನ್ನನ್ನ ನೋಡಿಕೊಳ್ಳುತ್ತೇನೆ ಎಂದ ನನ್ನ ಮಾವ ಅಂದಿನಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಹಿಂಸೆ ತಾಳಲಾರದೇ ನಾನು ನನ್ನ ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಬಂದೆನು. ಆದರೆ ಒಂದು ದಿನ ಮೊಮ್ಮಕ್ಕಳನ್ನು ನೋಡುವ ನೆಪದಲ್ಲಿ ನಮ್ಮ ಮನೆಗೆ ಬಂದ ಮಾವ, ನನ್ನ ತಂದೆ - ತಾಯಿ ಮನೆಯಲ್ಲಿರದ ಸಂದರ್ಭದಲ್ಲಿ ನನ್ನ ಬಳಿ ಅಸಭ್ಯವಾಗಿ ನಡೆಸಿಕೊಂಡಿದ್ದಾರೆ. ಈ ಬಗ್ಗೆ ನನ್ನ ಪತಿ, ಅತ್ತೆಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಂದಿನ ದಿನಗಳಲ್ಲಿ ಇವೆಲ್ಲಾ ಕಾಮನ್​ ಅಂತಾ ಅತ್ತೆ ಹೇಳೋದನ್ನ ಕೇಳಿ ಶಾಕ್​ ಆಯ್ತು" ಎಂದು ಸಂತ್ರಸ್ತೆ ತನ್ನ ಅಳಲು ತೋಡಿಕೊಂಡಿದ್ದಾರೆ.

ಇದೀಗ ಸಂತ್ರಸ್ತೆ ತನ್ನ ಪತಿ ಹಾಗೂ ಮಾವನ ವಿರುದ್ಧ ಗುಂಟೂರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.