ETV Bharat / jagte-raho

ಸೋಂಕಿತರಿಗೆ ಸಿಗದ ಆ್ಯಂಬುಲೆನ್ಸ್​​: ರಕ್ತಚಂದನ ಕಳ್ಳ ಸಾಗಾಟ್ಟಕ್ಕೆ ಬಳಕೆ... ಓರ್ವ ಬಂಧನ - Ambulance

ಹೊಸಕೋಟೆಯ ಟೋಲ್​ ಬಳಿ ಪೊಲೀಸರ ಕಣ್ತಪ್ಪಿಸಲು ಆ್ಯಂಬುಲೆನ್ಸ್​ನಲ್ಲಿ ಆಂಧ್ರದ ಕಡಪದಿಂದ ಬೆಂಗಳೂರಿಗೆ ರಕ್ತಚಂದನವನ್ನ ಸಾಗಾಟ ಮಾಡಲಾಗುತ್ತಿತ್ತು. ಇದೇ ವೇಳೆ ಪೊಲೀಸರು ಹೊಸಕೋಟೆ ಬಳಿ ತಡೆದು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ambulance
ಆ್ಯಂಬುಲೆನ್ಸ್
author img

By

Published : Aug 4, 2020, 5:42 AM IST

ಹೊಸಕೋಟೆ: ಚಿಕಿತ್ಸೆಗೆಂದು ಆಸ್ಪತ್ರೆ ಸೇರಲು ಕೊರೊನಾ ಸೋಂಕಿತರು ಆ್ಯಂಬುಲೆನ್ಸ್​ಗಳಿಲ್ಲದೆ ಪರದಾಡುತ್ತಿದ್ದಾರೆ. ಇತ್ತ ನೋಡಿದರೆ ಕೆಲವು ಖದೀಮರು ಆಂಬುಲೆನ್ಸ್​ನಲ್ಲಿ ರಕ್ತಚಂದನ ಸಾಗಾಟಕ್ಕೆ ಮುಂದಾಗಿದ್ದಾರೆ.

ಈ ಘಟನೆ ನಡೆದಿರುವುದು ಹೊಸಕೋಟೆಯ ಟೋಲ್​ ಬಳಿ, ಪೊಲೀಸರ ಕಣ್ತಪ್ಪಿಸಲು ಆ್ಯಂಬುಲೆನ್ಸ್​ನಲ್ಲಿ ಆಂಧ್ರದ ಕಡಪದಿಂದ ಬೆಂಗಳೂರಿಗೆ ರಕ್ತಚಂದನವನ್ನ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಇದೇ ವೇಳೆ ಪೊಲೀಸರು ಹೊಸಕೋಟೆ ಬಳಿ ತಡೆದು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಹೊಸಕೋಟೆ ಪೊಲೀಸ್​ ಠಾಣೆ

ಪೊಲೀಸರು ಇದೀಗ ಆ್ಯಂಬುಲೆನ್ಸ್ ವಶಕ್ಕೆ ಪಡೆದಿದ್ದು ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿ ನರಸಯ್ಯನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ, ಆ್ಯಂಬುಲೆನ್ಸ್​ನಲ್ಲಿದ್ದ 10 ಲಕ್ಷ ರೂ. ಮೌಲ್ಯದ 137 ಕೆಜಿ ರಕ್ತ ಚಂದನವನ್ನು ಜಪ್ತಿ ಮಾಡಿದ್ದಾರೆ.

ಹೊಸಕೋಟೆ ಪೊಲೀಸ್​ ಠಾಣೆ

ನರಸಯ್ಯ ಕೆಆರ್ ಪುರದ ರವಿ ಎಂಬುವವರಿಗೆ ಸಾಗಾಟ ಮಾಡುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ರವಿ ಎಂಬಾತ ನಾಪತ್ತೆ ಆಗಿದ್ದು, ಪೊಲೀಸರು ಆತನ ಹುಡುಕಾಟ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.