ETV Bharat / jagte-raho

ಪತ್ನಿ ಕೊಂದು ಶವದ ಮುಂದೆ ಮೊಬೈಲ್​​ನಲ್ಲಿ ಗೇಮ್​ ಆಡುತ್ತಾ ಕುಳಿತ ಘಾತುಕ ಪತಿ.. - ರಾಜಸ್ಥಾನದ ಜೋಧ್ಪುರ

ಬಹಳ ಸಮಯದಿಂದ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ವಿಕ್ರಮ್ ಮಾನಸಿಕವಾಗಿ ಕುಗ್ಗಿದ್ದ ಎಂದು ಹೇಳಲಾಗಿದೆ. ಭಾನುವಾರ ರಾತ್ರಿ ನಿದ್ರೆಯಿಂದ ಎಚ್ಚರಗೊಂಡ ವಿಕ್ರಮ್​​ ಈ ಕೃತ್ಯ ಎಸಗಿದ್ದಾನೆ..

After stabbing wife, killer husband found playing game on mobile near body
ಪತ್ನಿಯನ್ನ ಕೊಂದು ಶವದ ಮುಂದೆ ಮೊಬೈಲ್​​ನಲ್ಲಿ ಗೇಮ್​ ಆಡುತ್ತಾ ಕುಳಿತ ಪತಿರಾಯ
author img

By

Published : Dec 7, 2020, 1:34 PM IST

ಜೋಧ್ಪುರ (ರಾಜಸ್ಥಾನ) : ಚೂರಿ ಇರಿದು ಹೆಂಡತಿಯನ್ನ ಕೊಲೆ ಮಾಡಿ ಆಕೆಯ ಮೃತದೇಹದ ಮುಂದೆ ಮೊಬೈಲ್​​ನಲ್ಲಿ ಗೇಮ್​ ಆಡುತ್ತಾ ಕುಳಿತ ಪಾತಕಿ ಪತಿರಾಯನನ್ನು ಕಂಡು ಪೊಲೀಸರು ದಂಗಾಗಿದ್ದಾರೆ.

ರಾಜಸ್ಥಾನದ ಜೋಧ್ಪುರದ ಮಹಾಮಂದಿರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೆಎಸ್ ಕಾಲೋನಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಮನೆಯಲ್ಲಿ ಪತ್ನಿಯನ್ನು ಕೊಂದ ಭೂಪ ಪೊಲೀಸರಿಗೆ ಹಾಗೂ ಅತ್ತೆ-ಮಾವನಿಗೆ ಕರೆ ಮಾಡಿದ್ದಾನೆ. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ ಆತ ಶವದ ಪಕ್ಕದಲ್ಲಿ ಕುಳಿತು ಮೊಬೈಲ್​​ನಲ್ಲಿ ಗೇಮ್​ ಆಡುತ್ತಾ ಕುಳಿತಿದ್ದಾನೆ.

ಇದನ್ನೂ ಓದಿ: ಬುದ್ಧಿವಾದ ಹೇಳಿದರೂ ಚಟ ಬಿಡದ ಪತ್ನಿ; ಪರಲೋಕಕ್ಕೆ ಕಳಿಸಿದ ಪತಿ

ಮೃತಳ ಪತಿ ವಿಕ್ರಮ್ ಸಿಂಗ್​​ ಎಂಬಾತ ಕೊಲೆಗೈದ ಆರೋಪಿ. 2008ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ವಿಕ್ರಮ್​ ಕೆಲ ವರ್ಷಗಳಿಂದ ಬಿಜೆಎಸ್ ಕಾಲೋನಿಯಲ್ಲಿ ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸವಿದ್ದ.

ಬಹಳ ಸಮಯದಿಂದ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ವಿಕ್ರಮ್ ಮಾನಸಿಕವಾಗಿ ಕುಗ್ಗಿದ್ದ ಎಂದು ಹೇಳಲಾಗಿದೆ. ಭಾನುವಾರ ರಾತ್ರಿ ನಿದ್ರೆಯಿಂದ ಎಚ್ಚರಗೊಂಡ ವಿಕ್ರಮ್​​ ಈ ಕೃತ್ಯ ಎಸಗಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಹಾಮಂದಿರ ಠಾಣಾ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಅಮ್ಮ ಇಹಲೋಕ ತ್ಯಜಿಸಿದ್ರೆ, ಅಪ್ಪ ಜೈಲು ಪಾಲಾಗಿದ್ದರಿಂದ ಮಕ್ಕಳು ಮಾತ್ರ ಅನಾಥರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.