ವಿಜಯಪುರ: ಎರಡು ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೋಲ್ಹಾರ ಪಟ್ಟಣದ ಗರಸಂಗಿ ಕ್ರಾಸ್ ಬಳಿ ನಡೆದಿದೆ.
![accident-between-two-lorries-in-vijayapura](https://etvbharatimages.akamaized.net/etvbharat/prod-images/6090759_thum.jpg)
ವಿಜಯಪುರ-ಹುಬ್ಬಳ್ಳಿ ರಾಜ್ಯ ಹೆದ್ದಾರಿ 218ರಲ್ಲಿ ಅವಘಡ ಉಂಟಾಗಿದೆ. ಹುಬ್ಬಳ್ಳಿ ಕಡೆಯಿಂದ ವಿಜಯಪುರ ಕಡೆಗೆ ಹಾಗೂ ವಿಜಯಪುರದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಲಾರಿಗಳ ಮಧ್ಯೆ ಡಿಕ್ಕಿಯಾಗಿದೆ.
ಮೃತರ ಊರು ಹಾಗೂ ಹೆಸರುಗಳು ಸದ್ಯಕ್ಕೆ ತಿಳಿದು ಬಂದಿಲ್ಲ. ಸ್ಥಳಕ್ಕೆ ಕೋಲ್ಹಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.