ಹೈದರಾಬಾದ್(ತೆಲಂಗಾಣ): ವಿಯೆಟ್ನಾಂನ ವ್ಯಕ್ತಿಯೊಬ್ಬರು ತಮ್ಮ ಮನೆಯೊಳಗೆ ಮತ್ತು ಹೊರಗೆ ಚಿನ್ನದಿಂದ ಮನೆ ನಿರ್ಮಿಸಿದ್ದಾರೆ, ರಿಯಲ್ ಎಸ್ಟೇಟ್ ವಿಯೆಟ್ನಾಂ ಉದ್ಯಮಿಯಾಗಿರುವ ವ್ಯಾನ್ ಟ್ರುಂಗ್ ಅವರು ಪ್ರಪಂಚದಾದ್ಯಂತದ ಅನೇಕ ದೇಶಗಳಿಗೆ ಭೇಟಿ ನೀಡಿದ ನಂತರ ತಮ್ಮದೇ ದೇಶದಲ್ಲಿ ನೆಲೆಸಲು ಮತ್ತು ತನಗಾಗಿ ವಿಶೇಷ ಮನೆ ನಿರ್ಮಿಸಲು ನಿರ್ಧರಿಸಿದ್ದಾರೆ.
ಇಂಟೀರಿಯರ್ ಡಿಸೈನರ್‌ಗಳೊಂದಿಗೆ ಮಾತನಾಡಿ, ಟ್ರುಂಗ್ರವರು ವಿವಿಧ ಆಲೋಚನೆಗಳೊಂದಿಗೆ ಚಿನ್ನದಿಂದ ಮನೆ ನಿರ್ಮಿಸಲು ನಿರ್ಧರಿಸಿದರು. ವ್ಯಾನ್ ಟ್ರುಂಗ್ ಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಸುಮಾರು ಮೂರು ವರ್ಷಗಳನ್ನು ತೆಗೆದುಕೊಂಡಿತು. ಮೊದಲು ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ನಂತರ ಒಳಗೆ ಮತ್ತು ಹೊರಗೆ ಚಿನ್ನದಿಂದ ಅಥವಾ ಕನಿಷ್ಠ ಚಿನ್ನದ ಲೇಪಿತ ಬಣ್ಣದಿಂದ ಸುಂದರವಾಗಿ ತಮ್ಮ ಮನೆ ಅಲಂಕರಿಸಿದರು. ಮನೆಯೊಳಗಿನ ವಸ್ತುಗಳು ಮತ್ತು ಸಾಮಗ್ರಿಗಳು ಚಿನ್ನದ ಲೇಪಿತವಾಗಿವೆ. ಚಿನ್ನದ ಮನೆಯನ್ನು ನೋಡಲು ಪ್ರವಾಸಿಗರು ಕಾಯುತ್ತಿದ್ದಾರೆ.
ಮನೆ ಪ್ರವಾಸಕ್ಕೆ ಸುಮಾರು 400ರೂ ಪ್ರವೇಶ ಶುಲ್ಕವನ್ನು ವಿಧಿಸಿದ್ದಾರೆ. ಪ್ರವಾಸಿಗರ ಆಹಾರದ ಅಗತ್ಯತೆಗಳನ್ನು ಪೂರೈಸಲು ಮನೆಯ ಪಕ್ಕದಲ್ಲಿ ಕೆಫೆ ಸಹ ತೆರೆದಿದ್ದಾರೆ. ಗೇಟ್‌ನಿಂದ ಗೋಡೆಯವರೆಗೆ, ದೀಪಗಳಿಂದ ಅಡುಗೆ ಪಾತ್ರೆಗಳವರೆಗೆ, ಮನೆಯ ಪ್ರತಿಯೊಂದು ವಸ್ತುವು ಚಿನ್ನದಿಂದ ಹೊಳೆಯುತ್ತದೆ. "ಇದು ನಿಜವೋ ನಕಲಿ ಚಿನ್ನವೋ ಗೊತ್ತಿಲ್ಲ. ಆದರೆ, ಇಷ್ಟು ಚಿನ್ನ ಹೊದಿಸಿರುವ ಮನೆ ನೋಡಿ ನನಗೆ ಆಶ್ಚರ್ಯವಾಗಿದೆ" ಎಂದು ಪ್ರವಾಸಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: 40 ವರ್ಷಗಳ ನಂತರ ಮತ್ತೆ ಸ್ಫೋಟಗೊಂಡ ವಿಶ್ವದ ಅತಿದೊಡ್ಡ ಸಕ್ರಿಯ ಜ್ವಾಲಾಮುಖಿ!