ETV Bharat / international

ದೆಹಲಿ ಜಿ20 ವಿಶ್ವದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಪ್ರಮುಖ ಹೆಜ್ಜೆ: ಶ್ವೇತಭವನ - ದೆಹಲಿ ಶೃಂಗ ಸಭೆ

2026ರ ಜಿ20 ಶೃಂಗಸಭೆ ಅಮೆರಿಕದಲ್ಲಿ ನಡೆಯಲಿದೆ. ದೆಹಲಿಯಲ್ಲಿ ಕೈಗೊಂಡಿರುವ ನಿರ್ಧಾರಗಳಿಗೆ 2024 ಮತ್ತು 2025ರಲ್ಲಿ ಕ್ರಮವಾಗಿ ಬ್ರೆಜಿಲ್​ ಹಾಗು ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಶೃಂಗಸಭೆ ಬದ್ಧವಾಗಿರುತ್ತದೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.

ಜಿ 20 ಶೃಂಗ ಸಭೆ
ಜಿ 20 ಶೃಂಗ ಸಭೆ
author img

By ETV Bharat Karnataka Team

Published : Sep 10, 2023, 1:40 PM IST

ವಾಷಿಂಗ್ಟನ್ (ಅಮೆರಿಕ): 2026ರ ಜಿ20 ಶೃಂಗಸಭೆ ಅಧ್ಯಕ್ಷತೆಯನ್ನು ಅಮೆರಿಕ ವಹಿಸಲಿದೆ. ಈ ಕುರಿತು ಅಮೆರಿಕದ ಶ್ವೇತಭವನ ಪ್ರಕಟಣೆ ಬಿಡುಗಡೆ ಮಾಡಿದೆ. 'ದೆಹಲಿಯ ಜಿ20 ಶೃಂಗಸಭೆಯು ವಿಶ್ವದಲ್ಲಿನ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಪ್ರಮುಖ ಹೆಜ್ಜೆ' ಎಂದು ಬಣ್ಣಿಸಿದೆ.

ಶ್ವೇತಭವನದ ಪ್ರಕಟಣೆ: ಹವಾಮಾನ ಬಿಕ್ಕಟ್ಟು, ರಾಷ್ಟ್ರಗಳ ನಡುವಿನ ಸಂಘರ್ಷಗಳು, ಅತಿಕ್ರಮಣ ದಾಳಿಗಳು, ಜಾಗತಿಕ ಆರ್ಥಿಕತೆಯ ಸಮಸ್ಯೆ, ಉಕ್ರೇನ್‌ನಲ್ಲಿ ರಷ್ಯಾ ಯುದ್ಧದಿಂದ ಉಂಟಾದ ಅಪಾರ ಸಾವು-ನೋವು ಸೇರಿದಂತೆ ಇತರ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಈ ವರ್ಷದ ನವದೆಹಲಿ ಜಿ20 ಶೃಂಗಸಭೆಯು ಮೊದಲ ಹೆಜ್ಜೆ ಇಟ್ಟಿದೆ ಎಂದು ಶ್ವೇತಭವನ ಕೊಂಡಾಡಿದೆ.

  • .@POTUS committed to restore our nation's leadership role in the world and champion an economic agenda that delivers sustainable and inclusive growth for American families — and families everywhere.

    At this year's G20 Summit, he continued to deliver on those commitments. pic.twitter.com/mLTJGhtAOD

    — The White House (@WhiteHouse) September 9, 2023 " class="align-text-top noRightClick twitterSection" data=" ">

2024ರ ಜಿ20 ಶೃಂಗಸಭೆ ಬ್ರೆಜಿಲ್‌ನಲ್ಲಿ​ಯೂ 2025ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ನಮ್ಮ ಬದ್ಧತೆಯನ್ನು ಮುಂದುವರೆಸುತ್ತೇವೆ. ಅಮೆರಿಕ ಕೂಡ ಆಫ್ರಿಕನ್ ಯೂನಿಯನ್ ಅನ್ನು ಜಿ20ಯ ಖಾಯಂ ಸದಸ್ಯನಾಗಿ ಆಹ್ವಾನಿಸಲು ಮತ್ತು ಬೆಂಬಲಿಸಲು ಸಂತೋಷಪಡುತ್ತಿದೆ. ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಜೋ ಬೈಡನ್​ ಸೇರಿದಂತೆ ಉಳಿದೆಲ್ಲ ನಾಯಕರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವೇಗಗೊಳಿಸಲು ಮತ್ತು ಅದನ್ನು ಕಾರ್ಯಗತಗೊಳಿಸಲು ಬದ್ಧರಾಗಿದ್ದಾರೆ ಎಂದಿದೆ.

ಮುಖ್ಯವಾಗಿ ಶೃಂಗಸಭೆಯಲ್ಲಿ, ಆರ್ಥಿಕವಾಗಿ ಹಿಂದುಳಿದ, ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳಿಗೆ ನೆರವಾಗಲು ವಿಶ್ವಬ್ಯಾಂಕ್‌ಗೆ ಹೆಚ್ಚಿನ ಹಣಕಾಸು ಸಂಗ್ರಹಿಸುವ ನಿಟ್ಟಿನಲ್ಲಿ ಎಲ್ಲಾ ನಾಯಕರು ಒಗ್ಗೂಡಿದ್ದಾರೆ. ಈ ನಿರ್ಧಾರವು ಜಾಗತಿಕ ಸವಾಲುಗಳನ್ನು ಎದುರಿಸಲು ಬಡ ದೇಶಗಳ ತುರ್ತು ಅಗತ್ಯಗಳನ್ನು ಪರಿಹರಿಸಲು, ಸಾಲದ ಹೊರೆಯಲ್ಲಿರುವ ಶ್ರೀಲಂಕಾದಂತಹ ದೇಶಗಳಿಗೆ ಬೆನ್ನೆಲುಬಾಗಿ ನಿಲ್ಲುವ ವಿಶ್ವಬ್ಯಾಂಕ್​ಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ ಎಂದು ವೈಟ್​ ಹೌಸ್​ ಹೇಳಿದೆ.

ಬೈಡನ್​ ಮತ್ತು ಮೋದಿಯವರ ಸಹ-ಆತಿಥ್ಯದಲ್ಲಿ, ಜಿ20 ಶೃಂಗಸಭೆಯು ಅಧಿವೇಶನದಲ್ಲಿ ಭಾರತ, ಮಧ್ಯಪ್ರಾಚ್ಯ, ಯುರೋಪ್ ಆರ್ಥಿಕ ಕಾರಿಡಾರ್​ಗೆ ಚಾಲನೆ ನೀಡಿದೆ. ಇದು ಯುರೋಪಿನಿಂದ ಏಷ್ಯಾಕ್ಕೆ ಸಂಪರ್ಕ ಕಲ್ಪಿಸುವ ಮೂಲಕ ಹೊಸ ಯುಗ ಪ್ರಾರಂಭಿಸುತ್ತದೆ. ಜಾಗತಿಕ ವ್ಯಾಪಾರ ಮತ್ತು ಸಹಕಾರವನ್ನೂ ಸುಲಭಗೊಳಿಸುತ್ತದೆ.

ಶೃಂಗದಲ್ಲಿ ಅಮೆರಿಕ ಅಧ್ಯಕ್ಷರು, ಇಂದು ಜಗತ್ತು ಎದುರಿಸುತ್ತಿರುವ ತೀವ್ರವಾದ ಆಹಾರ ಬಿಕ್ಕಟ್ಟುಗಳನ್ನು ಪರಿಹರಿಸುವತ್ತ ಕೆಲವು ಕಾರ್ಯಸೂಚಿಯನ್ನು ಹೇಳಿದರು. ಭವಿಷ್ಯದ ಸಮಸ್ಯೆಗಳನ್ನು ತಗ್ಗಿಸಲು ಜಿ20 ದೇಶಗಳೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುತ್ತದೆ. ಜಿ20 ನಾಯಕರು 2030ರ ವೇಳೆಗೆ ಜಾಗತಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಪ್ರಯತ್ನಗಳನ್ನು ಮುಂದುವರಿಸಲು ಬದ್ಧರಾಗಿದ್ದಾರೆ.

ಶುದ್ಧ ಇಂಧನ ಉತ್ಪಾದನೆ ಮತ್ತು ನಿಯೋಜನೆ, ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ IRA ಪ್ಲೇಬುಕ್ ಅ​ನ್ನು ಅನುಸರಿಸಲು ಹೆಚ್ಚಿನ ದೇಶಗಳನ್ನು ಪ್ರೋತ್ಸಾಹಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

ಇದನ್ನೂ ಓದಿ: ಜಿ20 ಶೃಂಗಸಭೆ: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ನಮನ, ಪುಷ್ಪಾರ್ಚನೆ- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.