ETV Bharat / international

ದಕ್ಷಿಣ ಕೊರಿಯಾ ದಲ್ಲಿ ಹೆಚ್ಚುತ್ತಿರುವ ವೃದ್ಧರು, ಜನನ ದರದಲ್ಲಿ ಭಾರಿ ಇಳಿಕೆ

author img

By ETV Bharat Karnataka Team

Published : Sep 28, 2023, 6:39 AM IST

ದಕ್ಷಿಣ ಕೊರಿಯಾದಲ್ಲಿ ಜನನ ದರ ಇಳಿಕೆ ಕಾಣುವ ಜೊತೆಗೆ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು, ಭವಿಷ್ಯದಲ್ಲಿ ದುಡಿಯುವ ವರ್ಗ ಕಡಿಮೆಯಾಗಬಹುದು ಎಂಬ ಆತಂಕ ಎದುರಾಗಿದೆ.

South Koreas aging population Raising and birth rate is falling

ಸಿಯೋಲ್​: ದಕ್ಷಿಣ ಕೊರಿಯಾದಲ್ಲಿ ನೈಸರ್ಗಿಕ ಜನನದ ದರ ಕುಸಿತ ಕಂಡಿದೆ. ಇದೇ ವೇಳೆ ವಯಸ್ಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಕೂಡ ಕಂಡಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಮಕ್ಕಳ ಜನನ ದರದ ದತ್ತಾಂಶಗಳು ಇಳಿಕೆ ಆಗುತ್ತಿರುವುದು ದೇಶದಲ್ಲಿ ಕಳವಳದ ವಿಷಯವಾಗಿದೆ.

ಇತ್ತೀಚಿಗೆ ಬಿಡುಗಡೆಯಾದ ಹೊಸ ದತ್ತಾಂಶದ ಪ್ರಕಾರ, ಜುಲೈನಲ್ಲಿ ಕೇವಲ 19,102 ಶಿಶುಗಳು ಜನಿಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮಗುವಿನ ಜನನ ದರ 6.7 ರಷ್ಟು ಕುಸಿದಿದೆ ಎಂದು ವರದಿ ತಿಳಿಸಿದೆ.

ಕಳೆದ 10 ತಿಂಗಳಿನಿಂದ ದಕ್ಷಿಣ ಕೊರಿಯಾದಲ್ಲಿ ಶಿಶುಗಳ ಜನನ ಸಂಖ್ಯೆ ಕುಸಿತ ಕಾಣುತ್ತಿದೆ ಎಂದು ಯಿನ್ಹಪ್​ ನ್ಯೂಸ್​ ಏಜೆನ್ಸಿ ವರದಿ ಮಾಡಿದೆ. ಅದರಲ್ಲೂ ಜುಲೈನಲ್ಲಿ ಈ ಸಂಖ್ಯೆ ದೊಡ್ಡ ಮಟ್ಟದ ಕುಸಿತ ಕಂಡಿದೆ. 1981ರಿಂದ ಏಜೆನ್ಸಿ ಆರಂಭವಾದಾಗಿನಿಂದ ಈ ಜನನ ದರ ಲೆಕ್ಕ ಹಾಕಲಾಗಿದೆ. ಸಾಮಾನ್ಯವಾಗಿ ಕನಿಷ್ಟ ಎಂದರೂ ಮಾಸಿಕ 20,000 ಜನನ ಪ್ರಮಾಣ ದಾಖಲಾಗುತ್ತಿತ್ತು. ಆದರೆ, ಇದೀಗ ಈ ಸಂಖ್ಯೆ ಜುಲೈನಲ್ಲಿ ಕುಸಿತ ಕಂಡಿದೆ.

ಇದಕ್ಕೆ ತದ್ವಿರುದ್ದವಾಗಿ ದೇಶದಲ್ಲಿ ಸಾವಿನ ಪ್ರಮಾಣ 8.3ಕ್ಕೆ ಇಳಿಕೆಯಾಗಿದೆ. ವಯಸ್ಕರ ಜನಸಂಖ್ಯೆಯಲ್ಲಿ 28,238 ಅಧಿಕವಾಗಿದೆ. ವಯಸ್ಕರ ಸಾವಿನ ದರದಲ್ಲಿ ಕಳೆದ 45 ತಿಂಗಳಿನಿಂದ ಯಾವುದೇ ನೈಸರ್ಗಿಕ ಇಳಿಕೆ ಕಂಡಿಲ್ಲ ಎಂದು ವರದಿ ತಿಳಿಸಿದೆ.

ಅಷ್ಟೇ ಅಲ್ಲದೇ, ದತ್ತಾಂಶದಲ್ಲಿ ಮದುವೆ ಸಂಖ್ಯೆ ಕೂಡ ಕಡಿಮೆಯಾಗಿದೆ ಎಂದು ತೋರಿಸಿದೆ. ಮದುವೆ ಸಂಖ್ಯೆ 5.3ಕ್ಕೆ ಕುಸಿದಿದೆ. ಈ ನಡುವೆ ಇದೇ ಅವಧಿಯಲ್ಲಿ ವಿಚ್ಛೇದನ ಸಂಖ್ಯೆ 14,155ರಷ್ಟಿದ್ದು 0.5ರಿಂದ 7, 500ರಷ್ಟಾಗಿದೆ.

ಕಳೆದ ತಿಂಗಳು ದಕ್ಷಿಣ ಕೊರಿಯಾದ ಏಜೆನ್ಸಿಯು ಒಟ್ಟಾರೆ ಸಂತಾನೋತ್ಪತ್ತಿ ದರದ ಕುರಿತು ವರದಿ ಮಾಡಿತು. ಈ ವೇಳೆ ಮಹಿಳೆ ತಮ್ಮ ಜೀವಿತಾವಧಿಯಲ್ಲಿ ಮಗುವಿಗೆ ಜನ್ಮ ನೀಡುವ ಸಾಮರ್ಥ್ಯವೂ 2023ರ ಎರಡನೇ ತ್ರೈಮಾಸಿಕದಲ್ಲಿ ಕುಸಿತ ಕಂಡಿದೆ. ಇದು 0.7ರಷ್ಟಾಗಿದ್ದು, ಈ ವರ್ಷದ ಆರಂಭಕ್ಕೆ ಹೋಲಿಕೆ ಮಾಡಿದಾಗ 0.5ರಷ್ಟು ಕಡಿಮೆಯಾಗಿದೆ. ದಕ್ಷಿಣ ಕೊರಿಯಾದ ಜನಸಂಖ್ಯೆ 51 ಮಿಲಿಯನ್​ಗೆ ಸ್ಥಿರವಾಗಿದೆ.

ಒಂದು ದೇಶದ ಭವಿಷ್ಯದ ಅಭಿವೃದ್ಧಿಗಳನ್ನು ಜನನ ದರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಜನಸಂಖ್ಯೆ ಎಂಬುದು ಕೇವಲ ದೇಶದ ನಿವಾಸಿಗಳ ಸಂಖ್ಯೆಯಾಗಿರದೇ, ದುಡಿಯುವ ಕೈ, ದೇಶ ನಿರ್ಮಾಣದಲ್ಲಿನ ಅಭಿವೃದ್ಧಿಯ ಸಂಪನ್ಮೂಲಗಳು ಆಗಿದೆ. ಇದೇ ಕಾರಣಕ್ಕೆ ದೇಶದ ಜನನ ದರ ಬಗ್ಗೆ ಪ್ರತಿ ದೇಶಗಳು ಹೆಚ್ಚಿನ ಕಾಳಜಿವಹಿಸುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: Population in India: ಭಾರತದ ಜನಸಂಖ್ಯೆ 139 ಕೋಟಿ; ಈಗಲೂ ಚೀನಾಗಿಂತ ಕಡಿಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.