ETV Bharat / international

30 ಗ್ರಾಂ ಹೆರಾಯಿನ್ ಕಳ್ಳಸಾಗಣೆ ಆರೋಪ: ಮಹಿಳೆಯನ್ನ ಗಲ್ಲಿಗೇರಿಸಿದ ಸರ್ಕಾರ!! - 18 ದೇಶಗಳಲ್ಲಿ 579 ಜನಕ್ಕೆ ಮರಣದಂಡನೆ

ಮಹಿಳೆ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಆರೋಪ ಸಾಬೀತಾದ ಹಿನ್ನೆಲೆ ಇಪ್ಪತ್ತು ವರ್ಷಗಳ ನಂತರ ಸಿಂಗಾಪುರದಲ್ಲಿ ಮಹಿಳೆಯೊಬ್ಬರನ್ನು ಗಲ್ಲಿಗೇರಿಸಲಾಗಿದೆ.

Singapore executes woman convict  Woman convict in drugs case executed  Saridewi Djamani convict  Guilty of trafficking 30 grams heroin  30 ಗ್ರಾಂ ಹೆರಾಯಿನ್ ಕಳ್ಳಸಾಗಣೆ ಆರೋಪ  ಮಹಿಳೆಗೆ ಗಲ್ಲಿಗೇರಿಸಿದ ಅಲ್ಲಿನ ಸರ್ಕಾರ  ಮಹಿಳೆ ವಿರುದ್ಧ ಮಾದಕವಸ್ತು ಕಳ್ಳಸಾಗಣೆ  ಕಳ್ಳಸಾಗಣೆ ಆರೋಪ ಸಾಬೀತಾದ ಹಿನ್ನೆಲೆ  ಇಪ್ಪತ್ತು ವರ್ಷಗಳ ನಂತರ ಮಹಿಳೆಗೆ ಗಲ್ಲು  ಏಪ್ರಿಲ್‌ನಲ್ಲಿ ಭಾರತೀಯ ವ್ಯಕ್ತಿಗೆ ಗಲ್ಲು  ಸಿಂಗಾಪುರದಲ್ಲಿ ಅತ್ಯಂತ ಕಠಿಣ ಕಾನೂನು  18 ದೇಶಗಳಲ್ಲಿ 579 ಜನಕ್ಕೆ ಮರಣದಂಡನೆ  20 ದೇಶಗಳಲ್ಲಿ 883 ಜನಕ್ಕೆ ಮರಣದಂಡನೆ
30 ಗ್ರಾಂ ಹೆರಾಯಿನ್ ಕಳ್ಳಸಾಗಣೆ ಆರೋಪ
author img

By

Published : Jul 28, 2023, 3:44 PM IST

ಸಿಂಗಾಪುರ: ಇಲ್ಲಿನ ಸರ್ಕಾರ ಈ ವಾರ ಇಬ್ಬರು ಮಾದಕ ದ್ರವ್ಯ ಕಳ್ಳಸಾಗಣೆದಾರರನ್ನು ಗಲ್ಲಿಗೇರಿಸುತ್ತಿದೆ. ಮರಣದಂಡನೆಗೆ ಗುರಿಯಾದ ಇಬ್ಬರಲ್ಲಿ ಒಬ್ಬ ಮಹಿಳೆಯೂ ಸೇರಿದ್ದಾರೆ. ವಿಶೇಷ ಎಂದರೆ ಇಪ್ಪತ್ತು ವರ್ಷಗಳ ನಂತರ ಸಿಂಗಾಪುರದಲ್ಲಿ ಮಹಿಳೆಯೊಬ್ಬರನ್ನು ಗಲ್ಲಿಗೇರಿಸಿರುವುದು ಇದೇ ಮೊದಲು. ಸಿಂಗಾಪುರದ ಮಾನವ ಹಕ್ಕುಗಳ ಸಂಘಟನೆಯೊಂದು ಈ ಮಾಹಿತಿ ನೀಡಿದೆ.

50 ಗ್ರಾಂ ಹೆರಾಯಿನ್ ಕಳ್ಳಸಾಗಣೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ 56 ವರ್ಷದ ವ್ಯಕ್ತಿಯನ್ನು ಬುಧವಾರ (ಜುಲೈ 26) ಗಲ್ಲಿಗೇರಿಸಲಾಗಿದೆ ಎಂದು ಸ್ಥಳೀಯ ಹಕ್ಕುಗಳ ಸಂಘಟನೆಯಾದ ಟ್ರಾನ್ಸ್‌ಫಾರ್ಮೇಟಿವ್ ಜಸ್ಟೀಸ್ ಕಲೆಕ್ಟಿವ್ (ಟಿಜೆಸಿ) ತಿಳಿಸಿದೆ. ಆಗ್ನೇಯ ಏಷ್ಯಾದ ನಗರ - ರಾಜ್ಯದಲ್ಲಿರುವ ಚಾಂಗಿ ಜೈಲಿನಲ್ಲಿ ಅವರನ್ನು ಗಲ್ಲಿಗೇರಿಸಲಾಗಿದೆ.

ಇಂದು ಗಲ್ಲಿಗೇರಿಸಲಾಗುವುದು: ಇದರೊಂದಿಗೆ ಮಾದಕವಸ್ತು ಕಳ್ಳಸಾಗಣೆ ಆರೋಪಿ 45 ವರ್ಷದ ಮಹಿಳೆಯನ್ನು ಶುಕ್ರವಾರ (ಜುಲೈ 28) ಗಲ್ಲಿಗೇರಿಸಲಾಗಿದೆ ಎಂದು ತಿಳಿದುಬಂದಿದೆ. ಶಿಕ್ಷೆಗೊಳಗಾದ ಮಹಿಳೆಯನ್ನು ಸಾರಿದೇವಿ ಜಮಾನಿ ಎಂದು ಗುರುತಿಸಲಾಗಿದೆ. ಸುಮಾರು 30 ಗ್ರಾಂ ಹೆರಾಯಿನ್ ಕಳ್ಳಸಾಗಣೆ ಆರೋಪ ಸಾಬೀತಾದ ನಂತರ 2018 ರಲ್ಲಿ ಅವರಿಗೆ ಮರಣ ದಂಡನೆ ವಿಧಿಸಲಾಯಿತು.

ಇಪ್ಪತ್ತು ವರ್ಷಗಳ ನಂತರ ಮಹಿಳೆಗೆ ಗಲ್ಲು: ಇದೇ ವೇಳೆ 2004ರ ನಂತರ ಸಿಂಗಾಪುರದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳೆ ಇವರಾಗಿದ್ದಾರೆ ಎಂದು ಸ್ಥಳೀಯ ಹಕ್ಕು ಹೋರಾಟಗಾರ್ತಿ ಕೋಕಿಲಾ ಅಣ್ಣಾಮಲೈ ಹೇಳಿದ್ದಾರೆ. ಇದಕ್ಕೂ ಮುನ್ನ 36 ವರ್ಷದ ಮಹಿಳೆಯೊಬ್ಬರು ಮಾದಕ ವಸ್ತು ಕಳ್ಳಸಾಗಣೆ ಆರೋಪದಲ್ಲಿ ನೇಣಿಗೇರಿಸಿದ್ದರು. ಟಿಜೆಸಿ ಪ್ರಕಾರ, ಇಬ್ಬರೂ ಕೈದಿಗಳು ಸಿಂಗಾಪುರದಿಂದ ಬಂದವರು ಮತ್ತು ಅವರ ಕುಟುಂಬಗಳಿಗೆ ಮರಣದಂಡನೆ ಕುರಿತು ನೋಟಿಸ್ ಸಹ ಬಂದಿದೆ.

ಏಪ್ರಿಲ್‌ನಲ್ಲಿ ಭಾರತೀಯ ವ್ಯಕ್ತಿಗೆ ಗಲ್ಲು: ಗಮನಾರ್ಹ ಸಂಗತಿಯೆಂದರೆ ಕಳೆದ ಏಪ್ರಿಲ್ 26 ರಂದು ಮಾದಕವಸ್ತು ಕಳ್ಳಸಾಗಣೆ ಆರೋಪದಡಿ ಭಾರತೀಯ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಲಾಯಿತು. ಗಲ್ಲುಶಿಕ್ಷೆ ಬೇಡ ಎಂದು ಅವರ ಕುಟುಂಬದವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದ್ರೆ ಆ ಅರ್ಜಿ ತಿರಸ್ಕರಿಸಲಾಗಿತ್ತು.

ಸಿಂಗಾಪುರದಲ್ಲಿ ಅತ್ಯಂತ ಕಠಿಣ ಕಾನೂನು: ಸಿಂಗಾಪುರವು ವಿಶ್ವದ ಅತ್ಯಂತ ಕಠಿಣ ಮಾದಕವಸ್ತು ವಿರೋಧಿ ಕಾನೂನನ್ನು ಹೊಂದಿದೆ. ಮಾದಕ ವಸ್ತು ಕಳ್ಳಸಾಗಣೆ ವೇಳೆ ಸಿಕ್ಕಿಬಿದ್ದರೆ ಮರಣದಂಡನೆ ವಿಧಿಸುವ ಅವಕಾಶವಿದೆ. ವಾಸ್ತವವಾಗಿ, ಸಿಂಗಾಪುರದಲ್ಲಿ 500 ಗ್ರಾಂ ಗಿಂತ ಹೆಚ್ಚು ಗಾಂಜಾ ಅಥವಾ 15 ಗ್ರಾಂ ಗಿಂತ ಹೆಚ್ಚು ಹೆರಾಯಿನ್ ಕಳ್ಳಸಾಗಣೆ ಕಂಡು ಬಂದಲ್ಲಿ ಮರಣದಂಡನೆಗೆ ಕಾರಣವಾಗಬಹುದು.

20 ದೇಶಗಳಲ್ಲಿ 883 ಜನಕ್ಕೆ ಮರಣದಂಡನೆ ಶಿಕ್ಷೆ: ಮರಣದಂಡನೆಗೆ ಸಂಬಂಧಿಸಿದಂತೆ ಸಿಂಗಾಪುರವು ವಿಶ್ವದ ಅತ್ಯಂತ ಕೆಟ್ಟ ದಾಖಲೆಗಳಲ್ಲಿ ಒಂದಾಗಿದೆ. ಈ ವರ್ಷ ಬಿಡುಗಡೆಯಾದ ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ವರದಿ ಪ್ರಕಾರ, ಮರಣದಂಡನೆಯ ವಿಷಯದಲ್ಲಿ 2022 ಅತ್ಯಂತ ಕೆಟ್ಟ ವರ್ಷ ಎಂದು ಹೇಳಲಾಗಿದೆ. 2021 ಕ್ಕೆ ಹೋಲಿಸಿದರೆ, ಕುವೈತ್, ಮ್ಯಾನ್ಮಾರ್, ಪ್ಯಾಲೆಸ್ಟೈನ್, ಸಿಂಗಾಪುರ್ ಮತ್ತು ಅಮೆರಿಕವು ಮರಣದಂಡನೆಗಳ ಸಂಖ್ಯೆಯಲ್ಲಿ ದೊಡ್ಡ ಹೆಚ್ಚಳವನ್ನು ದಾಖಲಿಸಿದೆ. 2021 ರಲ್ಲಿ, 18 ದೇಶಗಳಲ್ಲಿ 579 ಜನರಿಗೆ ಮರಣದಂಡನೆ ವಿಧಿಸಲಾಯಿತು ಮತ್ತು 2022 ರಲ್ಲಿ 20 ದೇಶಗಳಲ್ಲಿ 883 ಜನರನ್ನು ಕೊಲ್ಲಲ್ಪಟ್ಟರು.

ಓದಿ: Death sentence: ಐವರ ಕೊಂದ ಹಂತಕನಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.