ETV Bharat / international

ಚೀನಾದ ಕಟ್ಟಡಗಳಿಂದ ಕೇಳಿಬರುತ್ತಿದೆ ಭಯಾನಕ ಕಿರುಚಾಟ: ಯಾರಿಗೂ ಬೇಡ ಈ ನರಕಯಾತನೆ

ಚೀನಾದಲ್ಲಿ ಶೂನ್ಯ ಕೋವಿಡ್ ನೀತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಶಾಂಘೈ ಸೇರಿದಂತೆ ವಿವಿಧ ನಗರಗಳಲ್ಲಿ ಕಠಿಣ ಲಾಕ್​ಡೌನ್ ಅನ್ನು ಕೆಲವು ನಗರಗಳಲ್ಲಿ ಜಾರಿಗೆ ತರಲಾಗಿದೆ. ಕಟ್ಟಡಗಳೊಳಗೆ ಜನರನ್ನು ನಿರ್ಬಂಧಿಸಲಾಗಿದ್ದು, ಜನರು ಸಹಾಯಕ್ಕಾಗಿ ಗಟ್ಟಿಯಾಗಿ ಕಿರುಚಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Shanghai residents scream from windows as China's COVID lockdown prevents them from leaving home for food
ಚೀನಾದ ಕಟ್ಟಡಗಳಿಂದ ಕೇಳಿಬರುತ್ತಿದೆ ಭಯಾನಕ ಕಿರುಚಾಟ: ಯಾರಿಗೂ ಬೇಡ ಈ ಯಮ ಯಾತನೆ!
author img

By

Published : Apr 14, 2022, 6:51 AM IST

ಬೀಜಿಂಗ್(ಚೀನಾ) : ಕೊರೊನಾ ಸೋಂಕು ಮತ್ತೆ ಚೀನಾದಲ್ಲಿ ಆರ್ಭಟ ಮುಂದುವರೆಸಿದೆ. ಶೂನ್ಯ ಕೋವಿಡ್ ನಿಯಮವನ್ನು ಅನುಸರಿಸಿರುವ ಚೀನಾ ಕಠಿಣ ಲಾಕ್​ಡೌನ್ ಅನ್ನು ಕೆಲವು ನಗರಗಳಲ್ಲಿ ಜಾರಿಗೆ ತಂದಿದೆ. ಅತಿ ದೊಡ್ಡ ವಾಣಿಜ್ಯ ನಗರಗಳಲ್ಲಿ ಒಂದಾದ ಶಾಂಘೈನಲ್ಲೂ ಅತ್ಯಂತ ಕಠಿಣವಾದ ಲಾಕ್​ಡೌನ್​​ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಭಯಾನಕ ವಿಡಿಯೋಗಳು ವೈರಲ್ ಆಗುತ್ತಿವೆ. ಅವುಗಳನ್ನು ನೋಡಿದರೆ ಎದೆ ಝೆಲ್ಲೆನ್ನುವುದು ಖಚಿತ.

ಲೇಖಕರಾಗಿರುವ ಪ್ಯಾಟ್ರಿಕ್ ಮ್ಯಾಡ್ರಿಡ್ ಎಂಬುವವರು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಲಾಕ್​ಡೌನ್​ನಲ್ಲಿ ಶಾಂಘೈನಲ್ಲಿ ಜನರು ಕಟ್ಟಡಗಳಲ್ಲಿ ನಿರ್ಬಂಧಿಸಲಾಗಿದೆ. ಜನರು ಕಟ್ಟಡಗಳಿಂದ ಕಿರುಚುತ್ತಿದ್ದಾರೆ. ಸಹಾಯಕ್ಕಾಗಿ ಕೂಗುವುದು ಮಾತ್ರವಲ್ಲದೇ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಕಟ್ಟಡಗಳಿಂದ ಹೊರಗೆ ಬರಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚೀನಾದಲ್ಲಿ ಕೊರೊನಾ ಸೋಂಕು ಸೃಷ್ಟಿಸಿರುವ ಸನ್ನಿವೇಶವನ್ನು ಉಲ್ಲೇಖಿಸಿದ್ದಾರೆ. ಆಸ್ಟ್ರೇಲಿಯಾದ ನ್ಯೂಸ್ ವೆಬ್​ಸೈಟ್ ಆದ news.com.au ಕೂಡಾ ಈ ವಿಡಿಯೋವನ್ನು ಹಂಚಿಕೊಂಡಿದೆ.

  • What the?? This video taken yesterday in Shanghai, China, by the father of a close friend of mine. She verified its authenticity: People screaming out of their windows after a week of total lockdown, no leaving your apartment for any reason. pic.twitter.com/iHGOO8D8Cz

    — Patrick Madrid ✌🏼 (@patrickmadrid) April 9, 2022 " class="align-text-top noRightClick twitterSection" data=" ">

ಇದೊಂದು ವಿಡಿಯೋ ಮಾತ್ರವಲ್ಲದೇ ಸಾಕಷ್ಟು ವಿಡಿಯೋಗಳು ಕೊರೊನಾ ಸೋಂಕು ಚೀನಾದಲ್ಲಿ ಉಂಟುಮಾಡುತ್ತಿರುವ ಹಾವಳಿಯನ್ನು ಬಿಂಬಿಸುತ್ತಿವೆ. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಚೀನಾ ಅತ್ಯಂತ ಕಠಿಣ ನಿಯಮಗಳನ್ನು ಕೈಗೊಂಡಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗುತ್ತಿದೆ. ಸೋಂಕಿತ ಮಕ್ಕಳನ್ನು ಅವರ ಪೋಷಕರಿಂದ ಬೇರೆ ಇಡುವ ನೀತಿಗೆ ಕೆಲವೆಡೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಂಘೈ ನಗರದಲ್ಲಿ ಏಪ್ರಿಲ್ 5ರಿಂದ ಕಠಿಣವಾದ ಲಾಕ್‌ಡೌನ್‌ ಅಳವಡಿಸಲಾಗಿದೆ. ಸುಮಾರು ಎರಡೂವರೆ ಕೋಟಿ ಮಂದಿಯನ್ನು ಚೀನಾ ಹಂತಹಂತವಾಗಿ ಲಾಕ್‌ಡೌನ್ ಮಾಡಿದೆ. ಲಾಕ್​ಡೌನ್​ಗೆ ಒಳಗಾಗಿರುವವರಿಗೆ ಸರಿಯಾದ ಆಹಾರ ದೊರಕುತ್ತಿಲ್ಲ ಎಂದು ಹೇಳಲಾಗುತ್ತಿದೆ. ಕೆಲವೊಮ್ಮೆ ಆರೋಗ್ಯ ಕಾರ್ಯಕರ್ತರೊಂದಿಗೆ ಅಲ್ಲಿನ ನಾಗರಿಕರು ಘರ್ಷಣೆ ನಡೆಸುತ್ತಿರುವುದೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ವಿಷಪೂರಿತ ಅಣಬೆ ಸೇವನೆ: ಒಂದೇ ವಾರದಲ್ಲಿ 13 ಮಂದಿ ಸಾವು, 39 ಜನರು ಆಸ್ಪತ್ರೆಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.