ಬುಡಾಪೆಸ್ಟ್: ಸ್ವಿಮ್ಮಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉಕ್ರೇನ್‌ಗೆ ಪದಕ ಕೊಡುವಲ್ಲಿ ಎಲೈಟ್ ಈಜುಗಾರ ಸಫಲರಾಗಿದ್ದಾರೆ. ಆದರೆ ಈ ಪದಕವನ್ನು ತನ್ನ ದೇಶಕ್ಕೆ ತಂದು ಕೊಡುವಲ್ಲಿ ಮಗನ ಶ್ರಮದ ಬಗ್ಗೆ ತಂದೆಗೆ ತಿಳಿದಿದೆಯೋ ಇಲ್ವೋ ಎಂಬುದು ಪ್ರಶ್ನೆಯಾಗಿದೆ.
ಹೌದು, ಎಲೈಟ್ ಈಜುಗಾರ ಮೈಖೈಲೋ ರೋಮನ್‌ಚುಕ್ ಇತ್ತ ಈಜು ಸ್ಪರ್ಧೆಯಲ್ಲಿ ಭಾಗವಿಸಿದರೆ, ಅತ್ತ ಉಕ್ರೇನ್‌ನ ಪೂರ್ವದಲ್ಲಿ ಅವರ ತಂದೆ ರಷ್ಯಾ ಸೈನಿಕರೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಇನ್ನು ರೋಮನ್ಚುಕ್ ಪದಕ ಗೆದ್ದಿರುವ ಸಂಗತಿ ಅವರ ತಂದೆಗೆ ತಿಳಿದಿದೆಯೋ ಅಥವಾ ಇಲ್ಲವೋ ಎಂಬುದು ತಿಳಿಯದ ವಿಷಯವಾಗಿದೆ.
800 ಮೀಟರ್ ಫ್ರೀಸ್ಟೈಲ್ ಓಟದಲ್ಲಿ ಕಂಚು ಪಡೆದ ನಂತರ ಈ ಬಗ್ಗೆ ಮಾತನಾಡಿದ ರೋಮನ್ಚುಕ್, ನಮ್ಮ ತಂದೆ ಹಾಟ್ ಸ್ಪಾಟ್‌ನಲ್ಲಿದ್ದಾರೆ. ಈ ವಿಷಯ ತಿಳಿಸುವುದು ಕಷ್ಟಕರವಾಗಿದೆ. ಕಾಲ್ ಮಾಡಿದರೆ ನಮ್ಮ ತಂದೆಯ ಸ್ಥಳವನ್ನು ರಷ್ಯಾ ಪಡೆಗಳು ಪತ್ತೆಹಚ್ಚಬಹುದೆಂಬ ಭಯ ನಮಗೆ ಕಾಡುತ್ತಿರುತ್ತದೆ. ಹೀಗಾಗಿ ನಾವು ನನ್ನ ತಂದೆಯೊಂದಿಗೆ ಮಾತನಾಡಲು ಧೈರ್ಯ ಮಾಡುವುದಿಲ್ಲ. ಆದರೆ, ಅವರು ನಿತ್ಯ ಬೆಳಗ್ಗೆ ನನಗೆ ಸಂದೇಶ ಕಳುಹಿಸುತ್ತಾರೆ ಎಂದು ರೋಮನ್‌ಚುಕ್ ಹೇಳಿದರು.
ಓದಿ: ಈಜು : 50 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ರಾಷ್ಟ್ರೀಯ ದಾಖಲೆ ಬರೆದ ಕನ್ನಡಿಗ ಶ್ರೀಹರಿ ನಟರಾಜ್
ಫೆಬ್ರವರಿ 24 ರಂದು ರಷ್ಯಾ ತನ್ನ ದೇಶವನ್ನು ಆಕ್ರಮಿಸಿದ ನಂತರ ಹೆಂಡತಿ ಮತ್ತು ಕುಟುಂಬವನ್ನು ಕಾಪಾಡಿಕೊಳ್ಳಲು ಹೋರಾಟ ನಡೆಸಿದೆ. 10 ದಿನಗಳ ನರಕಯಾತನೆ ಅನುಭವಿಸಿದೆ. ನಾನು ಬಂದೂಕಿನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನಾವು ನಿರ್ಧರಿಸಿದೆ. ಈಜು ತರಬೇತಿ ಮುಂದುವರಿಸುವುದು ಉತ್ತಮ ಎನಿಸಿತು. ಈಜುವ ಮೂಲಕ ನಾನು ಇಡೀ ಜಗತ್ತಿಗೆ ಉಕ್ರೇನಿನ ಪರಿಸ್ಥಿತಿ ಬಗ್ಗೆ ಹೇಳಬಲ್ಲೆ ಎಂದು ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 800 ಮೀಟರ್ನಲ್ಲಿ ಕಂಚು ಮತ್ತು 1500 ಮೀಟರ್ನಲ್ಲಿ ಬೆಳ್ಳಿ ಗೆದ್ದ ರೋಮನ್‌ಚುಕ್ ಹೇಳಿದರು.
ಯುದ್ಧದಿಂದ ತರಬೇತಿ ಸೌಲಭ್ಯಗಳು ನಾಶವಾದಾಗ ನನಗೆ ಜರ್ಮನ್ ಈಜುಗಾರ ಫ್ಲೋರಿಯನ್ ವೆಲ್‌ಬ್ರಾಕ್ ಆಹ್ವಾನಿಸಿದರು. ಅಲ್ಲಿ ನಾನು ಈಜು ತರಬೇತಿ ಮುಂದುವರಿಸಿದೆ. ಆದರೆ ಸ್ಪರ್ಧೆಯಲ್ಲಿ ಮೂರನೇ ಸ್ಥಾನದ ಬಗ್ಗೆ ಹೆಮ್ಮೆ ಇದೆ. ಉಕ್ರೇನಿಯನ್ನರು ಕೊನೆಯವರೆಗೂ ಹೋರಾಡುತ್ತಾರೆ ಎಂಬುದನ್ನು ನನ್ನ ಈ ಪದಕ ಸಾಬೀತುಪಡಿಸುತ್ತದೆ ಎಂದು ರೋಮನ್ಚುಕ್ ಹೇಳಿದ್ದಾರೆ.
ಉಕ್ರೇನ್‌ನಲ್ಲಿರುವ ಎಲ್ಲ ಜನರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಜನತೆ, ಸರ್ಕಾರ, ರಾಷ್ಟ್ರಪತಿಗಳ ಬಗ್ಗೆ ನನಗೆ ಗೌರವ ಇದೆ. ನಾನು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ನಾನು ಉಕ್ರೇನಿಯನ್ ಆಗಿರುವುದಕ್ಕೆ ನಿಜವಾಗಿಯೂ ಸಂತೋಷವಾಗಿದೆ ಎಂದು ಪದಕ ಗೆದ್ದ ಬಳಿಕ ರೋಮನ್‌ಚುಕ್ ಸಂಕಷ್ಟದ ನಡುವೆ ಆನಂದ ಬಾಷ್ಪ ಸುರಿಸಿದರು.