ETV Bharat / international

ಅಫ್ಘನ್ ನಿರಾಶ್ರಿತರನ್ನು ಹೊರಹಾಕಲಾರಂಭಿಸಿದ ಪಾಕಿಸ್ತಾನ; ಟೋರ್ಖಾಮ್ ಗಡಿಯಲ್ಲಿ ಭಾರಿ ಜನದಟ್ಟಣೆ - ಅಫ್ಘನ್ ಪ್ರಜೆಗಳನ್ನು ದೇಶದಿಂದ ಹೊರಹಾಕುವ

Pakistan evacuating Afghan refugees: ನಿರಾಶ್ರಿತರು ದೇಶ ತೊರೆಯಲು ನೀಡಲಾಗಿದ್ದ ಗುಡುವು ಮುಗಿದ ನಂತರ ಪಾಕಿಸ್ತಾನ ಸರ್ಕಾರ ಅಕ್ರಮ ವಲಸಿಗರನ್ನು ಹುಡುಕಿ ಗಡಿಪಾರು ಮಾಡುತ್ತಿದೆ.

As deadline ends, Pak begins nationwide crackdown against undocumented Afghans

author img

By ETV Bharat Karnataka Team

Published : Nov 2, 2023, 1:48 PM IST

ಇಸ್ಲಾಮಾಬಾದ್: ದಾಖಲೆ ಇಲ್ಲದೆ ಪಾಕಿಸ್ತಾನದಲ್ಲಿ ವಾಸ ಮಾಡುತ್ತಿರುವ ಅಫ್ಘನ್ ನಿರಾಶ್ರಿತರಿಗೆ ದೇಶ ತೊರೆಯಲು ನೀಡಲಾಗಿದ್ದ ಗಡುವು ಮುಕ್ತಾಯಗೊಂಡಿದ್ದು, ಈಗಲೂ ದೇಶದಲ್ಲಿ ಉಳಿದುಕೊಂಡಿರುವ ನಿರಾಶ್ರಿತರನ್ನು ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಹುಡುಕಿ ಹೊರಹಾಕಲಾರಂಭಿಸಿದ್ದಾರೆ. ಪಾಕಿಸ್ತಾನದಲ್ಲಿರುವ 1.7 ಮಿಲಿಯನ್ ಅಫ್ಘನ್ ಪ್ರಜೆಗಳನ್ನು ದೇಶದಿಂದ ಹೊರಹಾಕುವ ಬೃಹತ್ ಕಾರ್ಯಾಚರಣೆಗೆ ಪಾಕಿಸ್ತಾನ ಸರ್ಕಾರ ಮುಂದಾಗಿದ್ದು, ಹಂತ ಹಂತವಾಗಿ ಇದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ.

ಅಫ್ಘಾನಿಸ್ತಾನದ ಗಡಿ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಬಂಧನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದಾಖಲೆರಹಿತ ಅಫ್ಘನ್ ಪ್ರಜೆಗಳನ್ನು ಬಂಧಿಸಿ ಮೊದಲಿಗೆ ಈ ಕೇಂದ್ರಗಳಿಗೆ ಕರೆತರಲಾಗುತ್ತದೆ ಹಾಗೂ ನಂತರ ಅವರನ್ನು ಅವರ ತಾಯ್ನಾಡಿಗೆ ಕಳುಹಿಸಲಾಗುತ್ತದೆ. ಪಾಕಿಸ್ತಾನದ ಈ ಕ್ರಮವನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಕೀಲರ ಗುಂಪುಗಳು ಟೀಕಿಸಿವೆ. ಲಕ್ಷಾಂತರ ಅಫ್ಘನ್ ಪ್ರಜೆಗಳು ಮತ್ತು ಕುಟುಂಬಗಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಹೊರಹಾಕುವ ನಿರ್ಧಾರಕ್ಕೆ ಮಾನವ ಹಕ್ಕು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಮತ್ತೊಂದೆಡೆ, ಇಲ್ಲಿಯವರೆಗೆ ಸುಮಾರು 1,40,322 ಜನರು ಈಗಾಗಲೇ ಸ್ವಯಂಪ್ರೇರಿತವಾಗಿ ದೇಶ ತೊರೆದಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. "ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಬಂಧಿಸಿ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ನವೆಂಬರ್ 1 ರಿಂದ ಪ್ರಾರಂಭವಾಗಿದೆ. ಸ್ವಯಂಪ್ರೇರಿತ ಮರಳುವಿಕೆಯನ್ನು ಈಗಲೂ ಪ್ರೋತ್ಸಾಹಿಸಲಾಗುವುದು" ಎಂದು ಇಸ್ಲಾಮಾಬಾದ್​ನ ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.

ತನ್ನ ಕಠಿಣ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿಶ್ವಸಂಸ್ಥೆ, ಮಾನವ ಹಕ್ಕುಗಳ ಗುಂಪುಗಳು ಮತ್ತು ಪಾಶ್ಚಿಮಾತ್ಯ ದೇಶಗಳ ಮನವಿಗಳನ್ನು ತಿರಸ್ಕರಿಸಿರುವ ಪಾಕಿಸ್ತಾನ, ತನ್ನ ದೇಶದ ಭದ್ರತೆಯನ್ನು ಬಲಪಡಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಹೇಳಿದೆ. ಸದ್ಯ ಪಾಕಿಸ್ತಾನದ ಎಲ್ಲ ಪ್ರದೇಶಗಳಲ್ಲಿ ನಿರಾಶ್ರಿತರನ್ನು ಗುರುತಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ.

ಕರಾಚಿಯಲ್ಲಿ, ಪೊಲೀಸರು ಕನಿಷ್ಠ 74 ಜನರನ್ನು ಬಂಧಿಸಿ ಅವರನ್ನು ಹೋಲ್ಡಿಂಗ್ ಕೇಂದ್ರಗಳಿಗೆ ಸ್ಥಳಾಂತರಿಸಿದ್ದಾರೆ. ಪೊಲೀಸ್ ವಾಹನಗಳು ಅಫ್ಘನ್ ಪ್ರಜೆಗಳನ್ನು ಕೇಂದ್ರಗಳಿಗೆ ಕರೆತರುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಏತನ್ಮಧ್ಯೆ ಸುಮಾರು 7,000 ಆಫ್ಘನ್ನರು ಬುಧವಾರ ಟೋರ್ಖಾಮ್ ಗಡಿಯ ಮೂಲಕ ಅಫ್ಘಾನಿಸ್ತಾನಕ್ಕೆ ಮರಳಿದ್ದಾರೆ.

ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿರುವ 64 ಮತ್ತು ಪೇಶಾವರ ಕೇಂದ್ರ ಕಾರಾಗೃಹದಲ್ಲಿದ್ದ 51 ಸೇರಿದಂತೆ 115 ಅಕ್ರಮ ಅಫ್ಘಾನಿ ವಲಸಿಗರನ್ನು ಟೋರ್ಖಾಮ್ ಗಡಿಯ ಮೂಲಕ ಗಡೀಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದಿಂದ ಹರಿದು ಬರುತ್ತಿರುವ ಅಗಾಧ ಜನಸಂಖ್ಯೆಯು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕೆ ತೀವ್ರ ಒತ್ತಡ ಉಂಟು ಮಾಡಿದೆ. ಟೋರ್ಖಾಮ್ ಗಡಿಯಲ್ಲಿ ಜನದಟ್ಟಣೆ ತೀವ್ರವಾಗಿದ್ದು, ತಾಲಿಬಾನ್ ಸರ್ಕಾರ ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.

ಇದನ್ನೂ ಓದಿ: 5 ಲಕ್ಷ ವಲಸಿಗರಿಗೆ ವೀಸಾ ನೀಡಲಿದೆ ಕೆನಡಾ; ಭಾರತೀಯರಿಗೆ ಅತ್ಯಧಿಕ ಲಾಭ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.