ಸಿಯೋಲ್: ಉತ್ತರ ಕೊರಿಯಾದಿಂದ ಉಡಾವಣೆಯಾದ ಮೊದಲ ಮಿಲಿಟರಿ ಪತ್ತೇದಾರಿ ಉಪಗ್ರಹ ಇಂಜಿನ್ ಸಮಸ್ಯೆಯಿಂದಾಗಿ ಹಳದಿ ಸಮುದ್ರಕ್ಕೆ ಅಪ್ಪಳಿಸಿದೆ. ಬಳಿಕ ಅದು ತನ್ನ ಎರಡನೇ ಉಡಾವಣೆಯನ್ನು ಸಾಧ್ಯವಾದಷ್ಟು ಬೇಗ ನಡೆಸಲು ಯೋಜಿಸಿದೆ ಎಂದು ಕೊರಿಯಾ ಸೆಂಟ್ರಲ್ ನ್ಯೂಸ್ ಏಜೆನ್ಸಿ (KCNA) ವರದಿ ಮಾಡಿದೆ.
ಉತ್ತರ ಕೊರಿಯಾದ ಉನ್ನತ ಅಧಿಕಾರಿಗಳು ಪತ್ತೇದಾರಿ ಉಪಗ್ರಹವನ್ನು ಉಡಾವಣೆ ಮಾಡಲು ಎರಡನೇ ಪ್ರಯತ್ನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ಏಕೆಂದರೆ ಅವರು ತಮ್ಮ ದೇಶದ ಮೊದಲನೆ ಉಪಗ್ರಹ ಉಡಾವಣೆ ವಿಫಲವಾದಾಗ ಅದನ್ನು ಈ ವರ್ಷದ 'ಅತ್ಯಂತ ಗಂಭೀರ ನ್ಯೂನತೆ' ಎಂದು ಅಲ್ಲಿನ ಸರ್ಕಾರ ಗರಂ ಆಗಿದೆ.
ಮೇ ಅಂತ್ಯದಲ್ಲಿ ಮಿಲಿಟರಿ ವಿಚಕ್ಷಣಾ ಉಪಗ್ರಹವನ್ನು ಹೊತ್ತೊಯ್ಯುತ್ತಿದ್ದ ಉತ್ತರ ಕೊರಿಯಾದ ರಾಕೆಟ್ ಲಿಫ್ಟ್ ಆಫ್ ಆದ ಕೂಡಲೇ ಪತನಗೊಂಡಿತು. ಇದರಿಂದ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಮೇಲೆ ಕಣ್ಗಾವಲು ಇಡಲು ಬಾಹ್ಯಾಕಾಶ ಆಧಾರಿತ ವ್ಯವಸ್ಥೆ ರೂಪಿಸಲು ನಾಯಕ ಕಿಮ್ ಜಾಂಗ್ ಉನ್ ಯೋಜಿಸಿದ್ದರು. ಆದರೆ ಈ ಉಡಾವಣೆ ವಿಫಲವಾಗಿರುವುದರಿಂದ ಅವರ ಯೋಜನೆಗೆ ಹಿನ್ನಡೆಯಾಗಿದೆ.
ಕಿಮ್ ಮತ್ತು ಇತರ ಉನ್ನತ ಅಧಿಕಾರಿಗಳ ಉಪಸ್ಥಿತಿಯೊಂದಿಗೆ ಭಾನುವಾರ ಕೊನೆಗೊಂಡ ಮೂರು ದಿನಗಳ ಆಡಳಿತ ಪಕ್ಷದ ಸಭೆಯಲ್ಲಿ ವಿಫಲ ಉಡಾವಣೆ ಮತ್ತು ಅದರ ಶಸ್ತ್ರಾಸ್ತ್ರಗಳನ್ನು ಆಧುನೀಕರಿಸುವ ಉತ್ತರ ಕೊರಿಯಾದ ಪ್ರಯತ್ನಗಳ ಕುರಿತು ಹೆಚ್ಚು ಚರ್ಚಿಸಲಾಯಿತು. ಸಭೆಯ ಕುರಿತು ವಿವರಣೆಯನ್ನು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಸ್ಪಷ್ಟವಾಗಿ ಹೇಳಲಿಲ್ಲ. ಆದರೆ ಸಭೆಯ ವರದಿಯು ಉಪಗ್ರಹ ಉಡಾವಣೆಯ ಸಿದ್ಧತೆಗಳನ್ನು ಬೇಜವಾಬ್ದಾರಿಯಿಂದ ನಡೆಸಿದ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದು, ಕಠಿಣ ಕ್ರಮದ ಎಚ್ಚರಿಕೆ ರವಾನಿಸಿದೆ.
ರಾಕೆಟ್ ಪತನಕ್ಕೆ ಕಾರಣವೇನು ಪತ್ತೆಗೆ ಸೂಚನೆ: ವರದಿಯು ಅಧಿಕಾರಿಗಳು ಮತ್ತು ವಿಜ್ಞಾನಿಗಳಿಗೆ ವಿಫಲ ಉಡಾವಣೆಯ ಪಾಠವನ್ನು ಕಲಿಯಲು, ರಾಕೆಟ್ ಪತನಕ್ಕೆ ಕಾರಣ ಏನು ಎಂಬುದನ್ನು ಕಂಡುಹಿಡಿಯಲು ಮತ್ತು ಕಡಿಮೆ ಸಮಯದಲ್ಲಿ ಯಶಸ್ವಿ ಉಡಾವಣೆ ಮಾಡಲು ಕಾರ್ಯಗಳನ್ನು ನಿಗದಿಪಡಿಸಿದೆ ಎಂದು ಕೆಸಿಎನ್‌ಎ ಹೇಳಿದೆ. ಉತ್ತರ ಕೊರಿಯಾ ಎರಡನೇ ಉಡಾವಣೆಯನ್ನು ಯಾವಾಗ ಮಾಡಬಹುದು ಎಂದು ಅದು ನಿಖರವಾಗಿ ಹೇಳಲಿಲ್ಲ. ಆದರೆ ವಿಫಲವಾದ ಉಡಾವಣೆಯಲ್ಲಿ ಏನು ತಪ್ಪಾಗಿದೆ ಎಂಬುದನ್ನು ನಿರ್ಧರಿಸಲು ಉತ್ತರ ಕೊರಿಯಾಕ್ಕೆ ವಾರಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ದಕ್ಷಿಣ ಕೊರಿಯಾದ ಬೇಹುಗಾರಿಕಾ ಸಂಸ್ಥೆ ಈ ಹಿಂದೆ ತಿಳಿಸಿತ್ತು.
ಪತ್ತೇದಾರಿ ಉಪಗ್ರಹವು ಹಲವಾರು ಉನ್ನತ ತಂತ್ರಜ್ಞಾನದ ಮಿಲಿಟರಿ ಸ್ವತ್ತುಗಳಲ್ಲಿ ಒಂದಾಗಿದೆ. ಕಿಮ್ ಅವರು ಅಮೆರಿಕ ವಿರುದ್ಧ ಹಗೆತನವನ್ನು ನಿಭಾಯಿಸಲು ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದಾರೆ. ಮಲ್ಟಿ-ವಾರ್‌ಹೆಡ್ ಕ್ಷಿಪಣಿ, ಪರಮಾಣು ಜಲಾಂತರ್ಗಾಮಿ, ಘನ-ಪ್ರೊಪೆಲ್ಲೆಂಟ್ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಕಿಮ್ ಹೊಂದಲು ಬಯಸಿದ್ದಾರೆ. ಈ ಮೂಲಕ ಅವರು ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಟಾಂಗ್ ನೀಡಲು ಸನ್ನದ್ಧರಾಗಿದ್ದಾರೆ.
100ಕ್ಕೂ ಹೆಚ್ಚು ಕ್ಷಿಪಣಿ ಪರೀಕ್ಷೆ: 2022ರ ಆರಂಭದಿಂದ ಉತ್ತರ ಕೊರಿಯಾ 100ಕ್ಕೂ ಹೆಚ್ಚು ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದೆ. ಅವುಗಳಲ್ಲಿ ಕೆಲವು ಕಿಮ್‌ನ ಹಾರೈಕೆ - ಪಟ್ಟಿಯಲ್ಲಿ ಪತ್ತೇದಾರಿ ಉಪಗ್ರಹ ಮತ್ತು ಇತರ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಸಂಬಂಧಿಸಿದ್ದವುಗಳಾಗಿವೆ. ಏಪ್ರಿಲ್‌ನಲ್ಲಿ ಉತ್ತರ ಕೊರಿಯಾ ಮೊದಲ ಬಾರಿಗೆ ಘನ ಇಂಧನ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಿತು. ಅಂತಹ ಕ್ಷಿಪಣಿಗಳಲ್ಲಿನ ಇಂಧನವು ಈಗಾಗಲೇ ಒಳಗೆ ಲೋಡ್ ಆಗಿರುತ್ತದೆ. ಆದ್ದರಿಂದ ದ್ರವ ಪ್ರೊಪೆಲ್ಲಂಟ್ ಬಳಸುವ ರಾಕೆಟ್‌ಗಳಿಗಿಂತ ಅವು ಹೆಚ್ಚು ಮೊಬೈಲ್ ಆಗಿರುತ್ತವೆ ಮತ್ತು ಉಡಾವಣೆ ಮಾಡುವ ಮೊದಲು ಹೊರಗಿನವರಿಗೆ ಪತ್ತೆಹಚ್ಚಲು ಕಷ್ಟವಾಗುತ್ತದೆ ಹೇಳಲಾಗುತ್ತಿದೆ.
ಪಕ್ಷದ ಸಭೆಯಲ್ಲಿ, ಪೊಲಿಟ್‌ಬ್ಯುರೊ ಸದಸ್ಯರು ಉತ್ತರ ಕೊರಿಯಾದ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳ ಶಸ್ತ್ರಾಗಾರವನ್ನು ವಿಸ್ತರಿಸುವ ಪ್ರಯತ್ನಗಳಲ್ಲಿ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದು ಶತ್ರುಗಳ ವಿರುದ್ಧ ಮುಖಾಮುಖಿಯನ್ನು ನಿರ್ವಹಿಸುವ ಸರ್ಕಾರದ ನೀತಿಯನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು ಎಂದು ಕೆಸಿಎನ್‌ಎ ಹೇಳಿದೆ.
ತನ್ನ ಪ್ರತಿಸ್ಪರ್ಧಿಗಳ ಅಜಾಗರೂಕ ಯುದ್ಧದ ನಡೆಗಳಿಂದ ಉಂಟಾದ ಪ್ರದೇಶದಲ್ಲಿ ಅತ್ಯಂತ ಕ್ಷೀಣಿಸುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಪಾಲಿಟ್‌ಬ್ಯೂರೋ ಸದಸ್ಯರು ವಿಶ್ಲೇಷಿಸಿದ್ದಾರೆ. ಸ್ಪಷ್ಟವಾಗಿ ವಿಸ್ತರಿಸಿದ ಯುಎಸ್-ದಕ್ಷಿಣ ಕೊರಿಯಾ ಮಿಲಿಟರಿ ಡ್ರಿಲ್‌ಗಳನ್ನು ಉಲ್ಲೇಖಿಸಿದ್ದಾರೆ ಎಂದು ವರದಿ ಹೇಳಿದೆ. ಪ್ರತಿರೋಧಕ್ಕಾಗಿ ಅನಿರ್ದಿಷ್ಟ ಯೋಜನೆಗಳನ್ನು ಅವರು ಸರ್ವಾನುಮತದಿಂದ ಅನುಮೋದಿಸಿದ್ದಾರೆ ಎಂದು ಅದು ಹೇಳಿದೆ.
ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಸರ್ಕಾರದ ಅಂತ್ಯಕ್ಕೆ ಕಾರಣ: ಉತ್ತರ ಕೊರಿಯಾದ ಮುಂದುವರಿದ ಪರಮಾಣು ಶಸ್ತ್ರಾಗಾರ ಹೆಚ್ಚಿಸಿಕೊಳ್ಳುತ್ತಿರುವುದಕ್ಕೆ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಉಕ್ರೇನ್‌ನಲ್ಲಿನ ಯುದ್ಧದ ಬಗ್ಗೆ ಉತ್ತರ ಕೊರಿಯಾ ರಷ್ಯಾದೊಂದಿಗೆ ಸಂಬಂಧವನ್ನು ಬಲಪಡಿಸಲು ಯತ್ನಿಸುತ್ತಿದೆ. ಇದು ಮತ್ತೊಂದು ಅಪಾಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ದ. ಕೊರಿಯಾ-ಯುಎಸ್ ಲೈವ್ ಫೈರ್ ಡ್ರಿಲ್ಗೆ ಪ್ರತ್ಯುತ್ತರ: ಕ್ಷಿಪಣಿ ಹಾರಿಸಿ ಬೆದರಿಸಿದ ಉ. ಕೊರಿಯಾ