ETV Bharat / international

ಅಮೆರಿಕದ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್​ ಪುರಸ್ಕಾರ

author img

By

Published : Oct 10, 2022, 4:41 PM IST

Updated : Oct 10, 2022, 6:53 PM IST

ಎಕನಾಮಿಕ್​ ಸೈನ್ಸ್​ ವಿಭಾಗದಲ್ಲಿ ಬೆನ್ ಎಸ್. ಬರ್ನಾಂಕೆ, ಡೌಗ್ಲಾಸ್ ಡಬ್ಲ್ಯೂ. ಡೈಮಂಡ್ ಹಾಗೂ ಫಿಲಿಪ್ ಹೆಚ್​.ಡೈಬ್ವಿಗ್​ ಅವರಿಗೆ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನೀಡುವ ಈ ಬಾರಿಯ ನೊಬೆಲ್​ ದೊರೆತಿದೆ.

Nobel Awardees
ನೊಬೆಲ್​ ಪ್ರಶಸ್ತಿ

ಸ್ಟಾಕ್‌ಹೋಮ್: ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಸೋಮವಾರ ಆರ್ಥಿಕ ವಿಜ್ಞಾನ ವಿಭಾಗದಲ್ಲಿ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್​ ಪುರಸ್ಕಾರವನ್ನು ಘೋಷಿಸಿದೆ. ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ನೀಡುವ ಸ್ವೆರಿಜಸ್ ರಿಕ್ಸ್‌ಬ್ಯಾಂಕ್ ಪುರಸ್ಕಾರವನ್ನು ಯುಎಸ್‌ಎ, ವಾಷಿಂಗ್ಟನ್ ಡಿಸಿಯ ದಿ ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಷನ್​ನ ಬೆನ್ ಎಸ್. ಬರ್ನಾಂಕೆ, ಯುಎಸ್​ಎ ಚಿಕಾಗೋ ವಿಶ್ವವಿದ್ಯಾಲಯದ ಡೌಗ್ಲಾಸ್ ಡಬ್ಲ್ಯೂ. ಡೈಮಂಡ್ ಹಾಗೂ ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಫಿಲಿಪ್ ಹೆಚ್​.ಡೈಬ್ವಿಗ್​ ಅವರಿಗೆ ನೀಡಿ ಗೌರವಿಸಿದೆ.

ಈ ಮೂವರು ಕೈಗೊಂಡ ಬ್ಯಾಂಕ್‌ಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಂಶೋಧನೆಗಾಗಿ ಈ ನೊಬೆಲ್​ ಪ್ರಶಸ್ತಿಯನ್ನು ನೀಡಲಾಗಿದೆ. ಈ ವರ್ಷದ ಆರ್ಥಿಕ ವಿಜ್ಞಾನದಲ್ಲಿ ಪ್ರಶಸ್ತಿ ವಿಜೇತರಾದ ಬೆನ್ ಬರ್ನಾಂಕೆ, ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್ ಅವರು ಆರ್ಥಿಕತೆಯಲ್ಲಿ ಬ್ಯಾಂಕುಗಳ ಪಾತ್ರ, ವಿಶೇಷವಾಗಿ ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕ್​ಗಳ ಪಾತ್ರದ ಬಗ್ಗೆ ನಮ್ಮ ತಿಳಿವಳಿಕೆಯನ್ನು ಗಮನಾರ್ಹವಾಗಿ ಸುಧಾರಿಸಿದ್ದಾರೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್ ಎಲೆಗ್ರೆನ್ ತಿಳಿಸಿದ್ದಾರೆ.

  • Nobel Prize in Economic Sciences jointly awarded to Ben S. Bernanke, Douglas W. Diamond and Philip H Dybvig “for research on banks and financial crises.” pic.twitter.com/R00TmcSWEw

    — ANI (@ANI) October 10, 2022 " class="align-text-top noRightClick twitterSection" data=" ">

Nobel Prize in Economic Sciences jointly awarded to Ben S. Bernanke, Douglas W. Diamond and Philip H Dybvig “for research on banks and financial crises.” pic.twitter.com/R00TmcSWEw

— ANI (@ANI) October 10, 2022

ಈ ಬಾರಿ ಆರು ದಿನಗಳಲ್ಲಿ ಆರು ನೊಬೆಲ್​ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಇಂದು ಕೊನೆಯ ಪುರಸ್ಕೃತರನ್ನು ಘೋಷಿಸಲಾಯಿತು. ಅ. 3ರಿಂದ ವಿವಿಧ ವಿಭಾಗಗಳಲ್ಲಿ ನೊಬೆಲ್​ ಪ್ರಶಸ್ತಿ ಘೋಷಣೆ ಪ್ರಾರಂಭವಾಗಿದ್ದು, ಸೋಮವಾರ ಮಾನವ ವಿಕಾಸದ ಸಂಶೋಧನೆಗಾಗಿ ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ಅವರಿಗೆ ಈ ವರ್ಷದ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮಂಗಳವಾರ ಭೌತವಿಜ್ಞಾನಿಗಳಾದ ಅಲೈನ್ ಆಸ್ಪೆಕ್ಟ್, ಜಾನ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರಿಗೆ ಕ್ವಾಂಟಮ್ ಮಾಹಿತಿ ವಿಜ್ಞಾನದಲ್ಲಿನ ಕೆಲಸಕ್ಕಾಗಿ ಜಂಟಿಯಾಗಿ ನೀಡಲಾಯಿತು. ಬುಧವಾರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕ್ಯಾರೊಲಿನ್ ಬರ್ಟೊಜಿ, ಮೊರ್ಟೆನ್ ಮೆಲ್ಡೆಲ್ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್‌ಗೆ ಕ್ಲಿಕ್ ರಸಾಯನಶಾಸ್ತ್ರದಲ್ಲಿನ ಅವರ ಕೆಲಸಕ್ಕಾಗಿ ಜಂಟಿಯಾಗಿ ನೀಡಲಾಯಿತು. ಗುರುವಾರ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಅವರಿಗೆ ನೀಡಲಾಗಿದೆ.

2022ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಬೆಲಾರಸ್‌ನ ಮಾನವ ಹಕ್ಕುಗಳ ವಕೀಲ ಅಲೆಸ್ ಬಿಲಿಯಾಟ್ಸ್ಕಿ ಮತ್ತು ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಸ್ಮಾರಕ ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆಗೆ ನೀಡಲಾಗಿದೆ. ನೊಬೆಲ್ ಪ್ರಶಸ್ತಿಗಳು 10 ಮಿಲಿಯನ್ ಸ್ವೀಡಿಶ್ ಕ್ರೋನರ್ (ಸುಮಾರು $900,000) ನಗದು ಪ್ರಶಸ್ತಿಯನ್ನು ಹೊಂದಿದ್ದು, ಆರು ದಿನಗಳು ಘೋಷಣೆಯಾದ ಎಲ್ಲಾ ವಿಭಾಗದ ಪುರಸ್ಕಾರಗಳನ್ನು ಡಿಸೆಂಬರ್ 10 ರಂದು ಹಸ್ತಾಂತರಿಸಲಾಗುವುದು.

ಇದನ್ನೂ ಓದಿ: ನೊಬೆಲ್ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಕುತೂಹಲಕಾರಿ ಮಾಹಿತಿ

Last Updated : Oct 10, 2022, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.