ETV Bharat / international

ದ.ಕೊರಿಯಾ ವಿರುದ್ಧ ಗಂಭೀರ ಬೆದರಿಕೆಯ ಎಚ್ಚರಿಕೆ ನೀಡಿದ ಕಿಮ್​ ಯೋ ಜಾಂಗ್​ - Kim Yo Jong

ಶುಕ್ರವಾರ ದೇಶದ ಆಯಕಟ್ಟಿನ ಕ್ಷಿಪಣಿ ಕಮಾಂಡ್‌ಗೆ ಭೇಟಿ ನೀಡಿದ ಸಂದರ್ಭ ದ.ಕೊರಿಯಾ ರಕ್ಷಣಾ ಸಚಿವ ಸುಹ್ ವೂಕ್, ದ.ಕೊರಿಯಾದ ಮೇಲೆ ಕ್ಷಿಪಣಿ ಹಾರಿಸಲು ಉ. ಕೊರಿಯಾ ಪ್ರಯತ್ನಿಸಿದರೆ ಪ್ರತಿದಾಳಿ ಮಾಡುವ ಸಾಮರ್ಥ್ಯ ನಮ್ಮಲ್ಲಿದೆ ಎಂದಿದ್ದರು.

Kim Yo Jong
ಕಿಮ್​ ಯೋ ಜಾಂಗ್
author img

By

Published : Apr 3, 2022, 12:49 PM IST

ಸಿಯೋಲ್: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್​ ಜಾಂಗ್​ ಉನ್​ ಸಹೋದರಿ ಕಿಮ್​ ಯೋ ಜಾಂಗ್​, ಉತ್ತರ ಕೊರಿಯಾದ ಮೇಲೆ ಪೂರ್ವಭಾವಿ ದಾಳಿಯ ಬಗ್ಗೆ ಮಾತನಾಡಿರುವ ದಕ್ಷಿಣ ಕೊರಿಯಾದ ರಕ್ಷಣಾ ಸಚಿವರನ್ನು 'ಕಲ್ಮಶ ವ್ಯಕ್ತಿ' ಎಂದು ಕರೆದಿರುವುದು ಮಾತ್ರವಲ್ಲದೆ, ಸಿಯೋಲ್​ಗೆ ಬೆದರಿಕೆ ಹಾಕಿದ್ದಾರೆ. ಉತ್ತರ ಕೊರಿಯಾ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಪರೀಕ್ಷೆ ನಡೆಸದಂತೆ ಹೇರಿದ್ದ ನಿಷೇಧವನ್ನು ಐಸಿಬಿಎಂ ತೆಗೆದು ಹಾಕಿದ್ದು, ಉತ್ತರ ಕೊರಿಯಾದ ಪರಮಾಣು ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಂಡು ದೇಶಗಳ ನಡುವೆ ಸಮನ್ವಯ ಸಾಧಿಸಲು ಶ್ರಮಿಸಿದ್ದ ದ.ಕೊರಿಯಾದ ಅಧ್ಯಕ್ಷ ಮೂನ್​ ಜೆ ಇನ್​ ಅವರಿಗೆ ಮುಜುಗರವನ್ನುಂಟು ಮಾಡಿದೆ.

ಶುಕ್ರವಾರ ದೇಶದ ಆಯಕಟ್ಟಿನ ಕ್ಷಿಪಣಿ ಕಮಾಂಡ್‌ಗೆ ಭೇಟಿ ನೀಡಿದ ಸಂದರ್ಭ ದ.ಕೊರಿಯಾ ರಕ್ಷಣಾ ಸಚಿವ ಸುಹ್ ವೂಕ್, ದ.ಕೊರಿಯಾದ ಮೇಲೆ ಕ್ಷಿಪಣಿ ಹಾರಿಸಲು ಉ. ಕೊರಿಯಾ ಪ್ರಯತ್ನಿಸಿದರೆ ಪ್ರತಿದಾಳಿ ಮಾಡುವ ಸಾಮರ್ಥ್ಯ ನಮ್ಮಲ್ಲಿದೆ. ಕ್ಷಿಪಣಿ ದಾಳಿಯ ಬೆದರಿಕೆಗಳನ್ನು ಮಟ್ಟಹಾಕಲು ಸಿಯೋಲ್​ನಲ್ಲಿ ಪೂರ್ವಭಾವಿ ಮಿಲಿಟರಿ ಕಾರ್ಯತಂತ್ರವನ್ನು ದೀರ್ಘಕಾಲದಿಂದ ಕಾಪಾಡಿಕೊಂಡು ಬರಲಾಗುತ್ತಿದೆ. ಆದರೆ ಸಿಯೋಲ್​ನ ಹಿರಿಯ ಅಧಿಕಾರಿಯಾಗಿ ಇದನ್ನು ಸಾರ್ವಜನಿಕವಾಗಿ ಮಾತನಾಡುವುದು ಸಮಂಜಸವಲ್ಲ ಎಂದು ಹೇಳಿದರು.

ಭಾನುವಾರ, ಕಿಮ್ ಅವರ ಸಹೋದರಿ ಕಿಮ್ ಯೋ ಜಾಂಗ್, ಸುಹ್ ಹೇಳಿಕೆಗೆ ಪ್ರತ್ಯುತ್ತರ ನೀಡಿರುವುದಲ್ಲದೆ, ಸಿಯೋಲ್​ಗೆ ಬೆದರಿಕೆಯನ್ನೂ ಹಾಕಿದ್ದಾರೆ. ಒಬ್ಬ ಪ್ರಜ್ಞಾಹೀನ, ಕಲ್ಮಶ ಮನಸ್ಸಿನ ವ್ಯಕ್ತಿ ಮಾತ್ರ ಪರಮಾಣು ಶಸ್ತ್ರಾಸ್ತ್ರಗಳಿರುವ ದೇಶದ ವಿರುದ್ಧ ಯುದ್ಧ ಸಾರುತ್ತಾನೆ. ದಕ್ಷಿಣ ಕೊರಿಯಾ ತನ್ನ ರಕ್ಷಣಾ ಸಚಿವ ಮಾಡಿದ ಅಜಾಗರೂಕ ಹೇಳಿಕೆಗಳಿಂದಾಗಿ ಗಂಭೀರ ಬೆದರಿಕೆಯನ್ನು ಎದುರಿಸಬಹುದು. ದ.ಕೊರಿಯಾ ನಿಜವಾಗಿಯೂ ವಿಪತ್ತು ತಡೆಯಲು ಬಯಸುವುದಾದರೆ ಸ್ವತಃ ಅವರೇ ಶಿಸ್ತು ಕಾಪಾಡಿಕೊಂಡು ಸುಮ್ಮನಿರುವುದು ಉತ್ತಮ ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಉತ್ತರ ಕೊರಿಯಾದ ವರ್ಕರ್ಸ್​ ಪಾರ್ಟಿಯ ಹಿರಿಯ ನಾಯಕಿಯಾಗಿರುವ ಕಿಮ್​ ಯೋ ಜಾಂಗ್,​ ಸಿಯೋಲ್​ ಹಾಗೂ ವಾಷಿಂಗ್ಟನ್​ ಸಂಬಂಧಗಳ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ. ದಕ್ಷಿಣ ಕೊರಿಯಾದ ಬೇಹುಗಾರಿಕಾ ಸೇವೆ ಹೇಳುವಂತೆ, ಕಿಮ್​ ಯೋ ಜಾಂಗ್ ತಮ್ಮ ಸಹೋದರ ಕಿಮ್​ ಜಾಂಗ್​ ಉನ್ ಅವರ ಹಿಂದೆ ಕೆಲಸ ಮಾಡುತ್ತಿರುವ 2ನೇ ಅಧಿಕಾರಿಯೂ ಹೌದು.

ಉತ್ತರ ಕೊರಿಯಾ ದೇಶವು ದ. ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್‌ ಜೊತೆ ತನ್ನ ಪರಮಾಣು ಕಾರ್ಯಕ್ರಮವನ್ನು ಸಂಧಾನಕ್ಕೆ ತರುವ ಕುರಿತು ಇಚ್ಛೆ ವ್ಯಕ್ತಪಡಿಸಿದ ನಂತರ ಕೊರಿಯಾಗಳ ನಡುವಿನ ಸಂಬಂಧ 2018ರಲ್ಲಿ ತಿಳಿಗೊಂಡಿತ್ತು. ಆ ಸಮಯದಲ್ಲಿ, ದ. ಕೊರಿಯಾದಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿಯೂ ಕಿಮ್ ಯೋ ಜೊಂಗ್ ಪಾಲ್ಗೊಂಡಿದ್ದರು. ಮೂನ್​-ಜೆ-ಇನ್ ಅವರನ್ನು ಉ.ಕೊರಿಯಾಕ್ಕೆ ಭೇಟಿ ನೀಡುವಂತೆ ತಮ್ಮ ಸಹೋದರನ ಆಹ್ವಾನವನ್ನು ತಿಳಿಸಿದ್ದರು. ಕಿಮ್ ಜಾಂಗ್ ಉನ್ ಮತ್ತು ಮೂನ್ ಅಂತಿಮವಾಗಿ 2018ರಲ್ಲಿ ಮೂರು ಬಾರಿ ಭೇಟಿಯಾಗಿದ್ದರು.

ಇದನ್ನೂ ಓದಿ: ಧ್ವನಿವರ್ಧಕ ತೆಗೆಯದಿದ್ದರೆ ಮಸೀದಿಗಳ ಮುಂದೆ ಹನುಮಾನ್ ಚಾಲೀಸಾ ಹಾಕ್ತೇವೆ: ರಾಜ್ ಠಾಕ್ರೆ

2019ರಲ್ಲಿ ಯುನೈಟೆಡ್​ ಸ್ಟೇಟ್ಸ್​ನೊಂದಿಗಿನ ತನ್ನ ವಿಶಾಲ ರಾಜತಾಂತ್ರಿಕತೆ ಕುಸಿತಗೊಂಡ ನಂತರ ಉ. ಕೊರಿಯಾ ದ.ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದೆ. ಯುನೈಟೆಡ್​ ಸ್ಟೇಟ್ಸ್ ಮತ್ತೆ ಮಾತುಕತೆಗೆ ಕರೆದರೂ ಉ.ಕೊರಿಯಾ ಅದನ್ನು ತಿರಸ್ಕರಿಸಿದೆ. ಉತ್ತರ ಕೊರಿಯಾ ಶೀಘ್ರದಲ್ಲೇ ಮತ್ತೊಂದು ICBM ಉಡಾವಣೆ, ಉಪಗ್ರಹ-ಸಾಗಿಸುವ ರಾಕೆಟ್‌ನ ಉಡಾವಣೆ ಅಥವಾ ಮುಂಬರುವ ವಾರಗಳಲ್ಲಿ ಪರಮಾಣು ಸಾಧನದ ಪರೀಕ್ಷೆಯನ್ನು ನಡೆಸಬಹುದು ಎಂದು ಕೆಲವು ತಜ್ಞರು ಹೇಳುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.