ನ್ಯೂಯಾರ್ಕ್ (ಅಮೆರಿಕ) : ಹಮಾಸ್ ವಿರುದ್ಧದ ಯುದ್ಧದಲ್ಲಿ ಭಾರತ, ಇಸ್ರೇಲ್ಗೆ ಬೆಂಬಲ ನೀಡಿದ್ದರೂ ಗಾಜಾಪಟ್ಟಿಯಲ್ಲಿ ನಾಗರಿಕರ ಪ್ರಾಣಹಾನಿಯನ್ನು ಬಲವಾಗಿ ಖಂಡಿಸಿದೆ. 'ಎರಡು ರಾಷ್ಟ್ರಗಳ ಯುದ್ಧವು ಅಮಾಯಕ ಜನರ ಬಲಿ ಪಡೆಯುತ್ತಿರುವುದನ್ನು ಒಪ್ಪಲಾಗದು' ಎಂದು ವಿಶ್ವಸಂಸ್ಥೆಗೆ ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಜನರ ಸಾವಿಗೆ ಕಾರಣವಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ದೊಡ್ಡ ಪ್ರಮಾಣದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಆತಂಕಕಾರಿ, ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿರುವುದು ನಿಸ್ಸಂಶಯ. ಆದರೆ, ಸಂಘರ್ಷದಲ್ಲಿ ಅಮಾಯಕರ ಪ್ರಾಣ ಬಲಿಯಾಗುತ್ತಿರುವುದಕ್ಕೆ ನಮ್ಮ ಬೆಂಬಲವಿಲ್ಲ. ನಾವು ಇದನ್ನು ಖಂಡಿಸುತ್ತೇವೆ. ಇದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
-
#WATCH | At the UNGA, Permanent Representative of India to the UN, Ruchira Kamboj says, "The ongoing conflict between Israel and Hamas has led to a large scale loss of civilian lives, especially women and children, and has resulted in an alarming humanitarian crisis...the… pic.twitter.com/QoEhUz2nXg
— ANI (@ANI) January 10, 2024 " class="align-text-top noRightClick twitterSection" data="
">#WATCH | At the UNGA, Permanent Representative of India to the UN, Ruchira Kamboj says, "The ongoing conflict between Israel and Hamas has led to a large scale loss of civilian lives, especially women and children, and has resulted in an alarming humanitarian crisis...the… pic.twitter.com/QoEhUz2nXg
— ANI (@ANI) January 10, 2024#WATCH | At the UNGA, Permanent Representative of India to the UN, Ruchira Kamboj says, "The ongoing conflict between Israel and Hamas has led to a large scale loss of civilian lives, especially women and children, and has resulted in an alarming humanitarian crisis...the… pic.twitter.com/QoEhUz2nXg
— ANI (@ANI) January 10, 2024
ಭಾರತದ ನಿಲುವು ಸ್ಪಷ್ಟ: ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಗಾಜಾದಲ್ಲಿ ಮಾನವೀಯ ನೆರವನ್ನು ವಿಸ್ತರಿಸಲು ಭಾರತವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಟ್ಟರು. ಭಾರತವು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಜಿ20, ಬ್ರಿಕ್ಸ್ ಮತ್ತು ಜಾಗತಿಕ ದಕ್ಷಿಣ ಶೃಂಗಸಭೆ ವೇದಿಕೆಗಳಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಯುದ್ಧ ಪೀಡಿತ ಜನರಿಗೆ ಮಾನವೀಯ ನೆರವು ನೀಡಲು ಕರೆ ನೀಡಿದ್ದೇವೆ ಎಂದರು.
ಭಾರತದಿಂದ ಇದುವರೆಗೆ ಪ್ಯಾಲೆಸ್ಟೈನಿಯನ್ನರಿಗೆ 70 ಟನ್‌ಗಳಷ್ಟು ಮಾನವೀಯ ನೆರವನ್ನು ಒದಗಿಸಲಾಗಿದೆ. ಇದರಲ್ಲಿ 16.5 ಟನ್ ಔಷಧಗಳು ಮತ್ತು ವೈದ್ಯಕೀಯ ಪರಿಕರಗಳನ್ನು ಎರಡು ಹಂತಗಳಲ್ಲಿ ನೀಡಲಾಗಿದೆ. ಕಳೆದ ಡಿಸೆಂಬರ್ ಅಂತ್ಯದಲ್ಲಿ 5 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಗೆ ನೀಡಲಾಗಿದೆ. ಇದು ಶಿಕ್ಷಣ, ಆರೋಗ್ಯ ರಕ್ಷಣೆ, ಪರಿಹಾರ ಮತ್ತು ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗೆ ಸಾಮಾಜಿಕ ಸೇವೆಗಳನ್ನು ಕಲ್ಪಿಸುತ್ತದೆ ಎಂದರು.
ಎರಡು ರಾಜ್ಯ ರಚನೆ ಪರಿಹಾರ: ಉಭಯ ದೇಶಗಳ ನಡುವಿನ ಯುದ್ಧ ನಿಲುಗಡೆಗೆ ಎರಡು ರಾಷ್ಟ್ರಗಳ ನಿರ್ಮಾಣ ಸೂತ್ರವೊಂದೇ ಪರಿಹಾರ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಬೇಕು ಎಂದು ಸಲಹೆ ನೀಡಿದೆ.
ಕಳೆದ ವರ್ಷದ ಅಕ್ಟೋಬರ್ 7 ರಿಂದ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧದಲ್ಲಿ ಈವರೆಗೂ 9600 ಮಕ್ಕಳು ಸೇರಿದಂತೆ 23 ಸಾವಿರ ಜನರು ಸಾವಿಗೀಡಾಗಿದ್ದಾರೆ. 59 ಸಾವಿರ ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ, ಮೂಲಸೌಕರ್ಯಗಳ ಕೊರತೆ ಅಲ್ಲಿನ ಜನರನ್ನು ತೀವ್ರವಾಗಿ ಕಾಡುತ್ತಿದೆ.
ಇದನ್ನೂ ಓದಿ: ಇಸ್ರೇಲ್ ಯುದ್ಧ: ದಾಳಿಯಲ್ಲಿ 23 ಸಾವಿರ ಪ್ಯಾಲೆಸ್ಟೈನಿಯನ್ನರ ಸಾವು, 59 ಸಾವಿರ ಜನ ಗಾಯಾಳು