ರೋಮ್: 2023ರ ಡಿಸೆಂಬರ್ನಲ್ಲಿ ಜಾಗತಿಕ ಆಹಾರ ದರ ಇಳಿಕೆ ಕಂಡಿದ್ದು, ಹಿಂದಿನ ತಿಂಗಳಿಗಿಂತ ಶೇ 1.5ರಷ್ಟು ಇಳಿಕೆ ಕಂಡಿದೆ. ಹಿಂದಿನ ವರ್ಷದ ಮಟ್ಟಕ್ಕೆ ಹೋಲಿಕೆ ಮಾಡಿದಾಗ ವರ್ಷಾಂತ್ಯದಲ್ಲಿ 10.1ರಷ್ಟು ಕುಸಿತ ಕಂಡಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್ಎಒ) ತಿಳಿಸಿದೆ.
ರೋಮ್ ಆಧಾರದ ಎಫ್ಎಒ, ಆಹಾರ ಸರಕಿನ ಅಂತಾರಾಷ್ಟ್ರೀಯ ಬೆಲೆಗಳ ಬದಲಾವಣೆಯನ್ನು ಪ್ರತಿ ತಿಂಗಳು ಮಾಪನ ಮಾಡುತ್ತದೆ. ಅದರ ಅನುಸಾರ, ಡೈರಿ ಉತ್ಪನ್ನ ಮತ್ತು ಧಾನ್ಯ ಮತ್ತು ಬೆಳೆಗಳು ಮತ್ತು ಧಾನ್ಯಗಳು ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದೆ. ಆದರೆ ಸಕ್ಕರೆ, ಸಸ್ಯಜನ್ಯ ಎಣ್ಣೆಗಳು ಮತ್ತು ಮಾಂಸದ ಕಡಿಮೆ ಬೆಲೆಗಳಿಂದ ಸರಿದೂಗಿಸಲಾಗುತ್ತದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಧಾನ್ಯಗಳು ಮತ್ತು ಬೆಳೆಗಳು ಸೂಚ್ಯಂಕದಲ್ಲಿ ಅತಿದೊಡ್ಡ ಘಟಕವಾಗಿದ್ದು, ಇದರ ಬೆಲೆ 1.5ರಷ್ಟು ಹೆಚ್ಚಳ ಕಂಡಿದೆ. ಆದಾಗ್ಯೂ ವರ್ಷಾಂತ್ಯದಲ್ಲಿ ಕಳೆದ ವರ್ಷದ ಅಂದರೆ ಡಿಸೆಂಬರ್ 2022ಕ್ಕೆ ಹೋಲಿಕೆ ಮಾಡಿದರೆ ಇದು 16.6ರಷ್ಟು ಕಡಿಮೆ ಮಟ್ಟದಲ್ಲಿದೆ ಎಂದು ಎಫ್ಎಒ ತಿಳಿಸಿದೆ.
ಡೈರಿ ದರಗಳು ಡಿಸೆಂಬರ್ನಲ್ಲಿ ಶೇ 1.6ರಷ್ಟು ಏರಿಕೆ ಕಂಡಿದೆಯಾದರೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, 16.1ರಷ್ಟು ಕಡಿಮೆ ಇದೆ.
ಬೆಣ್ಣೆ , ಹಾಲಿನ ಪುಡಿಮತ್ತು ಚೀಸ್ಗಳು ಅತಿ ಹೆಚ್ಚಿನ ಬೇಡಿಕೆ ಪಡೆದಿದೆ. ಇತರೆ ಉಪ ಸೂಚ್ಯಂಕಗಳು ಎಲ್ಲವೂ ಎಲ್ಲಾ ತಿಂಗಳಲ್ಲಿ ಕಡಿಮೆ ಆಗಿವೆ. ಇದರಲ್ಲಿ ಅತಿ ಹೆಚ್ಚಿನ ಇಳಿಕೆ ಅಂದರೆ ಸಕ್ಕರೆ ದರವಾಗಿದೆ. ಇದು ನವೆಂಬರ್ಗೆ ಹೋಲಿಕೆ ಮಾಡಿದರೆ, 16.6ರಷ್ಟು ಇಳಿಕೆ ಕಂಡಿದೆ. ಅಲ್ಲದೇ, ಕಳೆದ 9 ತಿಂಗಳಲ್ಲೇ ಕಡಿಮೆ ಮಟ್ಟಕ್ಕೆ ದಾಖಲಾಗಿದೆ. ಈ ದರ ಇಳಿಕೆಗೆ ಕಾರಣ ಬ್ರೆಜಿಲ್ನಲ್ಲಿ ಉತ್ಪಾದನೆ ಮಟ್ಟ ಹೆಚ್ಚಳ ಆಗಿರುವುದು.
ಡಿಸೆಂಬರ್ನಲ್ಲಿನ ಇಳಿಕೆಯ ಹೊರತಾಗಿ, ಸಕ್ಕರೆ ಉಪ ಸೂಚ್ಯಂಕವೂ ವರ್ಷದಲ್ಲಿ 14.9ರಷ್ಟು ಏರಿಕೆ ಕಂಡಿದೆ.
ವೆಜಿಟೇಬಲ್ ಆಯಿಲ್ (ತರಕಾರಿ ಎಣ್ಣೆ)ಯ ದರವೂ 1.4ರಷ್ಟು ಕಡಿಮೆ ಆಗಿದೆ. ವರ್ಷಾಂತ್ಯದಲ್ಲಿ ಇದರ ಇಳಿಕೆಗೆ ಕಾರಣ ಪಾಮ್, ಸೋಯಾ, ಸೂರ್ಯಾಕಾಂತಿ ಬೀಜದ ಎಣ್ಣೆಗಳ ದುರ್ಬಲ ಬೇಡಿಕೆ ಆಗಿದೆ.
ಮಾಂಸದ ದರವೂ ವರ್ಷದಲ್ಲಿ 1.8ರಷ್ಟು ಇಳಿಕೆ ಕಂಡಿದ್ದು, ಡಿಸೆಂಬರ್ನಲ್ಲಿ 1.0 ತಗ್ಗಿದೆ. ಏಷ್ಯಾದಲ್ಲಿ ಹಂದಿ ಮಾಂಸಕ್ಕೆ ಕಡಿಮೆ ಬೇಡಿಕೆ ಹಿನ್ನೆಲೆ ವರ್ಷಾಂತದಲ್ಲಿ ಬೆಲೆಗಳ ಕುಸಿತವೂ ಹಂದಿ ಮಾಂಸದ ಬೇಡಿಕೆಯಲ್ಲಿ ಕೊಂಚ ಹೆಚ್ಚಳವನ್ನು ಸರಿದೂಗಿಸಿದೆ.
ಇದನ್ನೂ ಓದಿ: ಬ್ಯಾಡಗಿ ಮಾರುಕಟ್ಟೆಗೆ ಹೆಚ್ಚಿದ ಮೆಣಸಿನಕಾಯಿ ಆವಕ; ದರ ಕುಸಿತದಿಂದ ರೈತರಿಗೆ ಸಂಕಷ್ಟ