ETV Bharat / international

6 ವಾರಗಳಲ್ಲಿ ಟ್ವಿಟರ್​ಗೆ ಹೊಸ ಮಹಿಳಾ ಸಿಇಒ: ಎಲಾನ್​ ಮಸ್ಕ್​ ಘೋಷಣೆ - Etv Bharat Kannada

ಎಲಾನ್​ ಮಸ್ಕ್ ಅವರು ಟ್ವಿಟರ್‌ ಸಿಇಒ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.

ಟ್ವಿಟ್ಟರ್​ಗೆ ಹೊಸ ಸಿಇಒ ಘೋಷಿಸಿದ ಮಸ್ಕ್​
ಟ್ವಿಟ್ಟರ್​ಗೆ ಹೊಸ ಸಿಇಒ ಘೋಷಿಸಿದ ಮಸ್ಕ್​
author img

By

Published : May 12, 2023, 9:56 AM IST

Updated : May 12, 2023, 10:47 AM IST

ಸ್ಯಾನ್​ ಫ್ರಾನ್ಸಿಸ್ಕೊ (ಯುಎಸ್ಎ): ಜನಪ್ರಿಯ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್‌ ಸಿಇಒ ಆಗಿ ಹೊಸ ವ್ಯಕ್ತಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಂದಿನ ಆರು ವಾರಗಳಲ್ಲಿ ಮಹಿಳೆಯೊಬ್ಬರು ನೂತನ ಸಿಇಒ ಆಗಿ ಅಧಿಕಾರ ಸ್ವೀಕರಿಸುವರು ಎಂದು ಹಾಲಿ ಸಿಇಒ ಎಲಾನ್ ಮಸ್ಕ್ ಘೋಷಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.

ನೂತನ ಸಿಇಒ ಮಹಿಳೆ ಎಂಬುದನ್ನು ಬಿಟ್ಟರೆ, ಹೆಸರು ಮತ್ತು ಅವರು ಯಾರೆಂದು ಹೇಳದೆ ಗೌಪ್ಯವಾಗಿಟ್ಟಿದ್ದಾರೆ. ಸಿಇಒ ಹುದ್ದೆಯಿಂದ ಕೆಳಗಿಳಿದ ನಂತರ, ತಾವು ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ), ಉತ್ಪನ್ನ ಮತ್ತು ಸಾಫ್ಟ್‌ವೇರ್ ವಿಭಾಗಗಳ ಜವಾಬ್ದಾರಿ ನೋಡಿಕೊಳ್ಳುವುದಾಗಿ ಮಸ್ಕ್ ತಿಳಿಸಿದ್ದಾರೆ.

ಕಳೆದ ವರ್ಷ ಮಸ್ಕ್​ $44 ಶತಕೋಟಿಗೆ ಟ್ವಿಟರ್​ ಖರೀದಿಸಿದ್ದರು. ಹೀಗೆ ಖರೀದಿಸಿದ ಕೆಲವೇ ದಿನಗಳಲ್ಲಿ ಸಿಇಒ ಸ್ಥಾನ ಅಲಂಕರಿಸಿದ್ದರು. ಇದಕ್ಕೆ ಟ್ವಿಟರ್​ ಪಾಲುದಾರರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆ ಬಳಿಕ ಖಾಯಂ ಸಿಇಒ ಅಲ್ಲ, ಯಾವುದೇ ಕಂಪನಿಗೆ ಸಿಇಒ ಆಗಲು ಬಯಸುವುದೂ ಇಲ್ಲ ಎಂದು ಮಸ್ಕ್​ ಸ್ಪಷ್ಟನೆ ನೀಡಿದ್ದರು. "ನಾನು ಟ್ವಿಟರ್‌ನಲ್ಲಿ ನನ್ನ ಸಮಯವನ್ನು ಕಡಿಮೆ ಮಾಡುತ್ತೇನೆ. ಕಾಲಾನಂತರದಲ್ಲಿ ಟ್ವಿಟರ್ ನಡೆಸಲು ಬೇರೆಯವರನ್ನು ಹುಡುಕುತ್ತೇನೆ." ಎಂದು ಹೇಳಿದ್ದರು.

ಇದಾಗಿ ಒಂದು ತಿಂಗಳಲ್ಲಿ ಮತ್ತೆ ಟ್ವೀಟ್​ ಮಾಡಿದ್ದ ಮಸ್ಕ್​, "ಹೊಣೆ ನಿಭಾಯಿಸುವ ಸಮರ್ಥ ವ್ಯಕ್ತಿಯನ್ನು ಕಂಡುಕೊಂಡ ತಕ್ಷಣ ನಾನು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ." ಎಂದಿದ್ದರು. ಫೆಬ್ರವರಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ​​ಆಧಾರಿತ ಕಂಪನಿಗೆ ನೂತನ ಸಿಇಒ ಅನ್ನು ಬಹುಶಃ ಈ ವರ್ಷದ ಅಂತ್ಯದ ವೇಳೆಗೆ ಹುಡುಕುವ ನಿರೀಕ್ಷೆ ಇದೆ ಎಂದು ಮತ್ತೊಮ್ಮ ಹೇಳಿದ್ದರು. ಅದರಂತೆ ನಿನ್ನೆ ಮಾಹಿತಿ ನೀಡಿದ್ದಾರೆ.

ಹೊಸ ಸಿಇಒ ಘೋಷಿಸಿದ ನಂತರ ಗುರುವಾರ ಟೆಸ್ಲಾ ಷೇರುಗಳಲ್ಲಿ ಸುಮಾರು 2% ರಷ್ಟು ಏರಿಕೆ ಕಂಡಿದೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮತ್ತು ಟ್ವಿಟರ್ ಸೇರಿದಂತೆ ಅವರ ಇತರ ಕಂಪನಿಗಳ ಕಾರ್ಯವನ್ನು ಹೇಗೆ ನಿಭಾಯಿಸಲಿದ್ದಾರೆ ಎಂದು ಷೇರುದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಎಲಾನ್​ ಮಸ್ಕ್​ ಒಡೆತನದ ಕಂಪನಿಗಳಲ್ಲಿ ಪಾಲುದಾರಿಕೆ ವಹಿಸಲು ಹಿಂದೇಟು ಹಾಕಿದ್ದರು.

Twitterನಲ್ಲಿ WhatsApp ರೀತಿಯ ವೈಶಿಷ್ಟ್ಯ: ಇದಕ್ಕೂ ಮುನ್ನ ಬುಧವಾರ ಟ್ವಿಟರ್ ಪ್ರಮುಖ ಘೋಷಣೆ ಮಾಡಿದೆ. ವಾಟ್ಸಾಪ್‌ನ ಧ್ವನಿ ಮತ್ತು ವೀಡಿಯೊ ಕರೆ ವೈಶಿಷ್ಟ್ಯಗಳನ್ನು ಶೀಘ್ರದಲ್ಲೇ ಟ್ವಿಟರ್‌ಗೆ ತರಲಾಗುವುದು ಎಂದು ಮಸ್ಕ್ ಬಹಿರಂಗಪಡಿಸಿದ್ದರು. "Twitter ಇತ್ತೀಚಿನ ಆವೃತ್ತಿಯ ಅಪ್ಲಿಕೇಶನ್‌ನೊಂದಿಗೆ ನೀವು ಟ್ವೀಟ್ ಥ್ರೆಡ್‌ನಲ್ಲಿ ಯಾವುದೇ ಸಂದೇಶವನ್ನು DM (ನೇರ ಸಂದೇಶ) ಮಾಡಬಹುದು. ನೀವು ಎಮೋಜಿ ಪ್ರತಿಕ್ರಿಯೆಗಳನ್ನು ನೀಡಬಹುದು. ಎನ್‌ಕ್ರಿಪ್ಟ್ ಮಾಡಿದ DMs V1.0 ಗುರುವಾರ ಲಭ್ಯವಿರುತ್ತದೆ.

ಹೆಚ್ಚಿನ ನವೀಕರಣಗಳು ನಂತರ ಅನುಸರಿಸುತ್ತವೆ. ನಿಮ್ಮ ನೇರ ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡುವುದು, ಇದರಿಂದ ಮೂರನೇ ವ್ಯಕ್ತಿ ಟ್ವಿಟರ್​ ನೇರ ಸಂದೇಶಗಳನ್ನು ನೋಡಲಾಗುವುದಿಲ್ಲ. ಶೀಘ್ರದಲ್ಲೇ ನೀವು ನಿಮ್ಮ ಟ್ವಿಟರ್​ನಲ್ಲಿ ಧ್ವನಿ ಮತ್ತು ವೀಡಿಯೊ ಚಾಟ್ ಮಾಡಲು ಕೂಡ ಸಾಧ್ಯವಾಗಲಿದೆ. ಅಲ್ಲದೇ ಮೊಬೈಲ್​ ಸಂಖ್ಯೆ ಇಲ್ಲದೇಯೆ ಟ್ವಿಟರ್​ ಖಾತೆಯಿಂದ ಪ್ರಪಂಚದ ಯಾರೊಂದಿಗೂ ಬೇಕಾದರು ಮಾತನಾಡಲು ಇದು ಸಹಾಯಕವಾಗಲಿದೆ ಎಂದು ಎಲಾನ್​ ಮಸ್ಕ್ ಬುಧವಾರ ಟ್ವೀಟರ್​ನಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಜೂನ್ 22 ರಂದು ಮೋದಿ ಅಮೆರಿಕಕ್ಕೆ: ಶ್ವೇತಭವನದಲ್ಲಿ ಜೋ ಬೈಡನ್‌ ಅದ್ಧೂರಿ ಔತಣಕೂಟ

Last Updated : May 12, 2023, 10:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.