ETV Bharat / international

ಫಿಲಿಪ್ಫಿನ್ಸ್​ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ: ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ

ಫಿಲಿಪ್ಫಿನ್ಸ್​ನಲ್ಲಿ ಇಂದು ಸಂಜೆ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.

ಫಿಲಿಪ್ಫಿನ್ಸ್​ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ

author img

By ETV Bharat Karnataka Team

Published : Dec 2, 2023, 9:37 PM IST

Updated : Dec 2, 2023, 10:51 PM IST

ಮನಿಲಾ: ದಕ್ಷಿಣ ಫಿಲಿಪ್ಪಿನ್ಸ್ ದ್ವೀಪವಾದ ಮಿಂಡಾನಾವೊನಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 7.6 ತೀವ್ರತೆಯ ಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ. ಅಲ್ಲದೇ ಸುನಾಮಿ ಅಲೆಗಳು ಅಪ್ಪಳಿಸುವ ಎಚ್ಚರಿಕೆ ಕೂಡ ನೀಡಲಾಗಿದೆ.

ಸುದ್ದಿ ಸಂಸ್ಥೆ ಪ್ರಕಾರ ಇಂದು ಸಂಜೆ 8:07ರ ಸುಮಾರಿಗೆ ಮಿಂಡಾನಾವೊದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನ ಕೇಂದ್ರ ಬಿಂದು 63 ಕಿ.ಮೀ ಭೂಮಿಯ ಆಳದಲ್ಲಿ ಪತ್ತೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ಭೂಕಂಪದ ತೀವ್ರತೆ ಗಮನಿಸಿದರೆ, ದಕ್ಷಿಣ ಫಿಲಿಪ್ಪಿನ್ಸ್​ ಮತ್ತು ಇಂಡೋನೇಷ್ಯಾ, ಪಲಾವ್ ಮತ್ತು ಮಲೇಷ್ಯಾದ ಕೆಲವು ಭಾಗಗಳಲ್ಲಿ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.

ಭೂಕಂಪನದ ಅನುಭವವಾಗುತ್ತಿದ್ದಂತೆ ಫಿಲಿಪ್ಪಿನ್ಸ್​ ಸರಕಾರಿ ಏಜೆನ್ಸಿಯೊಂದು ಮಿಂಡನಾವೊದ ಪೂರ್ವ ಕರಾವಳಿಯಲ್ಲಿರುವ ಸೂರಿಗಾವೊ ಡೆಲ್​ಸುರ್ ಮತ್ತು ದಾವೊ ಓರಿಯಂಟಲ್ ಪ್ರಾಂತ್ಯಗಳ ನಿವಾಸಿಗಳನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದೆ.

ಕಳೆದ ತಿಂಗಳೂ ಸಂಭವಿಸಿದ್ದ ಭೂಕಂಪ: ಫಿಲಿಪ್ಪಿನ್ಸ್​ ಮತ್ತು ಮ್ಯಾನ್ಮಾರ್​ನಲ್ಲಿ ಕಳೆದ ತಿಂಗಳು 6.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ತೀವ್ರತೆಗೆ ದಕ್ಷಿಣ ಫಿಲಿಪ್ಪಿನ್ಸ್​ನ ಕೆಲ ಶಾಪಿಂಗ್ ಮಾಲ್‌ಗಳು ಧರೆಗುರುಳಿದ್ದವು. ಈ ವೇಳೆ, ಅನೇಕ ಜನರು ಗಾಯಗೊಂಡಿದ್ದರೆ, 6 ಜನ ಸಾವನ್ನಪ್ಪಿದ್ದರು. ಮ್ಯಾನ್ಮಾರ್‌ನಲ್ಲೂ 5.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಕಂಪನಗಳ ಪರಿಣಾಮ ಚೀನಾ ಮತ್ತು ಥಾಯ್ಲೆಂಡ್​ನಲ್ಲೂ ಕಂಡು ಬಂದಿತ್ತು.

ನೇಪಾಳದಲ್ಲಿ 157 ಜನರ ಸಾವು: ಕಳೆದ ನವೆಂಬರ್​ ತಿಂಗಳ ಆರಂಭದಲ್ಲಿ ನೆರೆಯ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಇದರಲ್ಲಿ 157ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.4 ಎಂದು ತಿಳಿದು ಬಂದಿತ್ತು. ಭಾರತ - ನೇಪಾಳ ಗಡಿಯಲ್ಲಿರುವ ಕತಿಹಾರ್, ಮೋತಿಹಾರಿ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿತ್ತು. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಕಳೆದ ಅಕ್ಟೋಬರ್​ 22ರಂದು 6.1 ತೀವ್ರತೆಯಲ್ಲಿ ಪ್ರಬಲ ಭೂಕಂಪದ ಅನುಭವವಾಗಿತ್ತು. ಆ ದಿನ ಕಂಪನದಿಂದ ಯಾವುದೇ ಸಾವು - ನೋವು, ಪ್ರಾಣಹಾನಿ ಸಂಭವಿಸಿರಲಿಲ್ಲ. ಧಾಡಿಂಗ್​ ಮಾತ್ರವಲ್ಲದೇ, ಬಾಗೃತಿ ಮತ್ತು ಗಂಡಕಿ ಪ್ರಾಂತ್ಯಗಳ ಇತರ ಜಿಲ್ಲೆಗಳಲ್ಲೂ ಕಂಪನದ ಅನುಭವವಾಗಿತ್ತು. 2015 ರಲ್ಲಿ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪಕ್ಕೆ ಸುಮಾರು 9 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಮನೆಗಳು ಹಾನಿಗೊಳಗಾಗಿದ್ದವು.

ಇದನ್ನೂ ಓದಿ: ಭಾರತದ ನೆರೆಹೊರೆಯಲ್ಲಿ ಅಲುಗಾಡಿದ ಭೂಮಿ: 3 ದೇಶಗಳ ಜನರ ನಿದ್ದೆಗೆಡಿಸಿದ ಕಂಪನ

Last Updated : Dec 2, 2023, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.