ETV Bharat / international

ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪನ.. ನಲುಗಿದ ಕಠ್ಮಂಡು - ಈಟಿವಿ ಭಾರತ ಕನ್ನಡ

ನೇಪಾಳದ ಕಠ್ಮಂಡುವಿನಲ್ಲಿ ಭಾನುವಾರ 6.1 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.

earthquake hits kathmandu valley
ನೇಪಾಳದ ಕಠ್ಮಂಡು ಕಣಿವೆಯಲ್ಲಿ 6.1 ತೀವ್ರತೆಯ ಭೂಕಂಪನ
author img

By PTI

Published : Oct 22, 2023, 8:33 AM IST

Updated : Oct 22, 2023, 9:13 AM IST

ಕಠ್ಮಂಡು (ನೇಪಾಳ): ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾನುವಾರ 6.1 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ರಾಷ್ಟ್ರೀಯ ಭೂಕಂಪ ಮಾನಿಟರಿಂಗ್​ ಮತ್ತು ಸಂಶೋಧನಾ ಕೇಂದ್ರದ ಪ್ರಕಾರ, ಧಾಡಿಂಗ್​ ಜಿಲ್ಲೆಯಲ್ಲಿ ಭೂಕಂಪನವು ಬೆಳಗ್ಗೆ 7.39ಕ್ಕೆ ದಾಖಲಾಗಿದೆ. ಕಂಪನದಿಂದ ಯಾವುದೇ ಸಾವು-ನೋವು, ಪ್ರಾಣಹಾನಿ ಸಂಭವಿಸಿಲ್ಲ. ಧಾಡಿಂಗ್​ ಮಾತ್ರವಲ್ಲದೇ, ಬಾಗೃತಿ ಮತ್ತು ಗಂಡಕಿ ಪ್ರಾಂತ್ಯಗಳ ಇತರೆ ಜಿಲ್ಲೆಗಳಲ್ಲೂ ಕಂಪನದ ಅನುಭವವಾಗಿದೆ.

ನೇಪಾಳದಲ್ಲಿ ಭೂಕಂಪನಗಳು ಸಾಮಾನ್ಯವಾಗಿದೆ. ಇದು ಟಿಬೆಟಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳು ಸಂಧಿಸುವ ಪರ್ವತಶ್ರೇಣಿಯ ಮೇಲೆ ನೆಲೆಗೊಂಡಿದೆ ಮತ್ತು ಪ್ರತಿ ಶತಮಾನಕ್ಕೂ ಎರಡು ಮೀಟರ್‌ಗಳಷ್ಟು ಒಂದಕ್ಕೊಂದು ಹತ್ತಿರವಾಗುತ್ತವೆ. ಇದು ಭೂಕಂಪನಗಳ ರೂಪದಲ್ಲಿ ಬಿಡುಗಡೆಯಾಗುವ ಒತ್ತಡಕ್ಕೆ ಕಾರಣವಾಗುತ್ತದೆ. 2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಭೂಕಂಪನ ಉಂಟಾಗಿತ್ತು. ಇದರಲ್ಲಿ 9,000 ಮಂದಿ ಸಾವನ್ನಪ್ಪಿದ್ದರು. PDNA ವರದಿಯಂತೆ ನೇಪಾಳವು ವಿಶ್ವದ 11ನೇ ಅತಿ ಹೆಚ್ಚು ಭೂಕಂಪನ ಪೀಡಿತ ರಾಷ್ಟ್ರವಾಗಿದೆ.

ಒಂದೇ ದಿನ ಎರಡು ಬಾರಿ ಕಂಪನ: ಅಕ್ಟೋಬರ್​ 3ರಂದು ನೇಪಾಳದಲ್ಲಿ 5 ಕಿ.ಮೀ ಆಳದಲ್ಲಿ ಪ್ರಬಲ 6.2 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇದರ ಪರಿಣಾಮ ದೆಹಲಿ-ಎನ್‌ಸಿಆರ್‌, ಉತ್ತರ ಪ್ರದೇಶದ ನೋಯ್ಡಾದಲ್ಲಿ ಜನರಿಗೆ ಕಂಪನದ ಅನುಭವವಾಗಿತ್ತು. ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಒಂದೇ ದಿನ ಎರಡು ಭೂಕಂಪನಗಳು ಜರುಗಿತ್ತು.

ಅಂದು ಮಧ್ಯಾಹ್ನ 2.24ಕ್ಕೆ 10 ಕಿಲೋ ಮೀಟರ್​ ಆಳದಲ್ಲಿ ರಿಕ್ಟರ್​ ಮಾಪನದಲ್ಲಿ 4.6 ತೀವ್ರತೆಯೊಂದಿಗೆ ಮೊದಲ ಕಂಪನ ದಾಖಲಾಗಿತ್ತು. ಮತ್ತೊಂದು ಕಂಪನ ಮಧ್ಯಾಹ್ನ 2.51ರ ಸುಮಾರಿಗೆ ಸಂಭವಿಸಿತು. ಇದರ ತೀವ್ರತೆಯು ರಿಕ್ಟರ್​ ಮಾಪಕದಲ್ಲಿ 6.2ರಷ್ಟು ದಾಖಲಾಗಿತ್ತು. ಇದರ ಪರಿಣಾಮ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (ಎನ್​ಸಿಆರ್​) ಸೇರಿದಂತೆ ಉತ್ತರ ಭಾರತದ ಹಲವೆಡೆ ಬಲವಾದ ಕಂಪನದ ಅನುಭವವಾಗಿತ್ತು.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮತ್ತೆ 4.6 ತೀವ್ರತೆಯ ಭೂಕಂಪ.. ಭಾರಿ ಆತಂಕದಲ್ಲಿ ಜನರು

ಫರಿದಾಬಾದ್‌ನಲ್ಲಿ 3.1 ತೀವ್ರತೆಯ ಭೂಕಂಪನ: ಕಳೆದ ಭಾನುವಾರ (ಅ.15) ದೆಹಲಿ ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಭೂಕಂಪನದ ಅನುಭವವಾಗಿತ್ತು. ಫರಿದಾಬಾದ್‌ನಲ್ಲಿ ಸಂಜೆ 4.08ರ ಸುಮಾರಿಗೆ ರಿಕ್ಟರ್​ ಮಾಪಕದಲ್ಲಿ 3.1ರಷ್ಟು ತೀವ್ರತೆಯ ಕಂಪನ ದಾಖಲಾಗಿತ್ತು. ಭೂಕಂಪನದ ಕೇಂದ್ರ ಬಿಂದು ಫರಿದಾಬಾದ್‌ನಿಂದ 9 ಕಿಲೋಮೀಟರ್ ಪೂರ್ವಕ್ಕೆ ಮತ್ತು ದೆಹಲಿಯಿಂದ 30 ಕಿಲೋಮೀಟರ್ ಆಗ್ನೇಯದಲ್ಲಿತ್ತು. 10 ಕಿಲೋ ಆಳದಲ್ಲಿ ಭೂಕಂಪನದ ಬಿಂದು ಇದೆ ಎಂದು ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿತ್ತು. ಭೂಮಿ ನಡುಗಿದ ಕೂಡಲೇ ಜನರಲ್ಲಿ ಭೀತಿ ಉಂಟಾಗಿತ್ತು. ತಾವಿದ್ದ ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದರು.

ಇದನ್ನೂ ಓದಿ: ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡ್​ದಲ್ಲಿ ಸಂಭವಿಸುವ ಭೂಕಂಪನಗಳು ದೆಹಲಿಗೂ ಅಪಾಯ: ಸಣ್ಣ ಕಂಪನಗಳೇ ಎಚ್ಚರಿಕೆಯ ಮುನ್ಸೂಚನೆಗಳು!

Last Updated : Oct 22, 2023, 9:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.