ETV Bharat / international

ಒಂದು ಕೋಟಿಗೂ ಹೆಚ್ಚು ಆಸ್ಟ್ರಾಜೆನೆಕಾ ಲಸಿಕೆ ಡೋಸ್​ ಹಾಳು ಮಾಡಿದ ಕೆನಡಾ

ಕೊರೊನಾ ಲಸಿಕೆಯಾಗಿರುವ ಆಕ್ಸ್‌ಫರ್ಡ್​/ಆಸ್ಟ್ರಾಜೆನಿಕಾದ 13.6 ಮಿಲಿಯನ್​ ಡೋಸ್​ ಹಾಳಾಗಿದ್ದು, ನಾಶ ಮಾಡಲು ಕೆನಡಾ ಸರ್ಕಾರ ಮುಂದಾಗಿದೆ.

13.6 ಮಿಲಿಯನ್ ಆಸ್ಟ್ರಾಜೆನೆಕಾ ಲಸಿಕೆ ಡೋಸ್​ ಹಾಳು ಮಾಡಿದ ಕೆನಡಾ

author img

By

Published : Jul 6, 2022, 8:30 AM IST

ಒಟ್ಟಾವಾ: ಕೆನಡಾದಲ್ಲಿ ಕೋವಿಡ್​ ಲಸಿಕೆ ಪಡೆಯಲು ಜನರು ನಿರಾಕರಣೆ ಮತ್ತು ಹೊರದೇಶಗಳಿಂದ ಬೇಡಿಕೆ ಬಾರದ ಕಾರಣ ದಾಸ್ತಾನಿಟ್ಟಿದ್ದ 1.30 ಕೋಟಿಗೂ ಅಧಿಕ ಡೋಸ್​ ಆಸ್ಟ್ರಾಜೆನಿಕಾ ಲಸಿಕೆಯ ಅವಧಿ ಮುಗಿದು ವ್ಯರ್ಥವಾಗಿದೆ. ಇದನ್ನು ನಾಶ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ.

ಕೊರೊನಾ ವೇಳೆ ಕೆನಡಾ ಸರ್ಕಾರ ಆಕ್ಸ್‌ಫರ್ಡ್​-ಆಸ್ಟ್ರಾಜೆನಿಕಾ ಕಂಪನಿಯೊಂದಿಗೆ 20 ಮಿಲಿಯನ್​ ಡೋಸ್​​ ಲಸಿಕೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ 2.3 ಮಿಲಿಯನ್​ ಡೋಸ್​ ಲಸಿಕೆಯನ್ನು ಮೊದಲ ಡೋಸ್​ ಆಗಿ ಕಳೆದ ವರ್ಷದ ಜೂನ್​ ಅಂತ್ಯದ ವೇಳೆಗೆ ಪಡೆದುಕೊಂಡಿದ್ದಾರೆ. ಇನ್ನುಳಿದ ಲಸಿಕೆ ಹಾಗೆಯೇ ದಾಸ್ತಾನಿಡಲಾಗಿದ್ದು, ಇದೀಗ ಅವಧಿ ಮೀರಿ ಹಾಳಾಗಿದೆ.

ಆಸ್ಟ್ರಾಜೆನಿಕಾ ಲಸಿಕೆ ಪಡೆಯುವುದರಿಂದ ದೇಹದಲ್ಲಿ ರಕ್ತ ಹೆಪ್ಪುಟ್ಟುತ್ತದೆ ಎಂಬ ವದಂತಿ ಬಳಿಕ ಜನರು ಲಸಿಕೆಯನ್ನು ಪಡೆದುಕೊಳ್ಳಲು ನಿರಾಕರಣೆ ಮಾಡುತ್ತಿದ್ದಾರೆ. ಇದು ಲಸಿಕೆಯ ಡೋಸ್​ಗಳು ವ್ಯರ್ಥವಾಗಲು ಇನ್ನೊಂದು ಕಾರಣ.

17.7 ಮಿಲಿಯನ್​ ಡೋಸ್​ ಲಸಿಕೆಯನ್ನು ಒಪ್ಪಂದದ ಪ್ರಕಾರ ಪಡೆದುಕೊಂಡಿದ್ದು, ಅದನ್ನು ನಾಗರಿಕರಿಗೆ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೀಗ ಆ ಪ್ರಮಾಣದ ಲಸಿಕೆಯ ಡೋಸ್​ಗಳು ಅವಧಿ ಮೀರಿ ಹಾಳಾಗಿದೆ. ಅದನ್ನು ನಾಶ ಮಾಡಲಾಗುವುದು ಎಂದು ಅಲ್ಲಿನ ಆರೋಗ್ಯ ತಿಳಿಸಿದೆ.

ಇದನ್ನೂ ಓದಿ: ಮಾಜಿ ಡಿಸಿ ಈಗ ವಿಚಾರಣಾಧೀನ ಕೈದಿ 6773/2022: ತನಿಖೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.