ಲಂಡನ್: ಬೋನಸ್ಗೆ ಸಂಬಂಧಿಸಿದಂತೆ ವಂಚನೆ ಬಯಲಿಗೆಳೆದು ಬೆದರಿಕೆ ಎದುರಿಸಿದ್ದ ಭಾರತೀಯ ಮೂಲದ ಬ್ರಿಟಿಷ್ ಮಾಜಿ ಉದ್ಯೋಗಿಗೆ ರಾಯಲ್ ಮೇಲ್ ಕೊನೆಗೂ ಪರಿಹಾರ ನೀಡಬೇಕಿದೆ. ತನ್ನ ಸಂಸ್ಥೆ ವಂಚನೆ ಬಯಲಿಗೆಳೆದ ಇವರು ಬೆದರಿಕೆ ಸೇರಿದಂತೆ ದೌರ್ಜನ್ಯಕ್ಕೆ ಒಳಗಾಗಿದ್ದರು. ಈತನ ಪ್ರಕರಣವನ್ನು ಆಲಿಸಿದ ನ್ಯಾಯಾಲಯ ಕೊನೆಗೂ ಆ ಮಹಿಳೆಗೆ ನ್ಯಾಯ ಒದಗಿಸಿದೆ. ಅಲ್ಲದೇ ಬ್ರಿಟನ್ನ ರಾಯಲ್ ಮೇಲ್ 2.3 ಮಿಲಿಯನ್ ಪೌಂಡ್ (ಅಂದಾಜು 24 ಕೋಟಿ)ಯನ್ನು ಪರಿಹಾರವಾಗಿ ನೀಡುವಂತೆ ಸೂಚಿಸಿದೆ.
ಏನಿದು ಪ್ರಕರಣ: ಕಾಮ್ ಜೂತಿ ರಾಯ್ ಮೇಲ್ನಲ್ಲಿ ಮೀಡಿಯಾ ಸ್ಪೆಷಲಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ಅವರು ತಮ್ಮ ಬಾಸ್ ಮೈಕ್ ವಿಡ್ಮೆರ್ರಿಂದ ದೌರ್ಜನ್ಯಕ್ಕೆ ಒಳಗಾಗಿದ್ದರು. ಈ ವೇಳೆ ಸಹೋದ್ಯೋಗಿಯೊಬ್ಬರು ತಮ್ಮ ಬೋನಸ್ ಅನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಎಂಟು ವರ್ಷಗಳ ದೀರ್ಘ ನ್ಯಾಯಾಲಯದ ಹೋರಾಟದ ಬಳಿಕ 2019ರಲ್ಲಿ ಸುಪ್ರೀಂ ಕೋರ್ಟ್, ಜೂಥಿಯನ್ನು ಅನ್ಯಾಯವಾಗಿ ವಜಾಗೊಳಿಸಲಾಗಿತ್ತು. ಇದರಿಂದ ಆಘಾತ ಉಂಟಾಗಿ, ಒತ್ತಡದ ಅಸ್ವಸ್ಥತೆ ಮತ್ತು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು.
ಇನ್ನು 2022ರಲ್ಲಿ ನ್ಯಾಯಮಂಡಳಿ ರಾಯಲ್ ಮೇಲ್ ಅಂಚೆ ಸೇವೆ ಹೇಗೆ ಪ್ರಕರಣವನ್ನು ಮುನ್ನಡೆಸಿತು ಎಂದು ತನಿಖೆ ನಡೆಸಿದಾಗ ಇದು ದುರುದ್ದೇಶಪೂರಿತ, ಅವಮಾನಕರ ಮತ್ತು ದಬ್ಬಾಳಿಕೆಯಿಂದ ನಡೆದಿದೆ ಎಂಬ ತೀರ್ಮಾನಕ್ಕೆ ಬಂದಿತು.
ಜೂಥಿ ಭಾರತೀಯ ಮೂಲದ ಪೋಷಕರಿಗೆ ಜನಿಸಿದ್ದು, ಅವರು ಬ್ರಿಟನ್ನಲ್ಲಿ ನೆಲೆಸಿದ್ದಾರೆ. ಅವರು ರಾಯಲ್ ಮೇಲ್ನಲ್ಲಿ ಮಾರ್ಕೆಟ್ರೀಚ್ ಘಟಕದಲ್ಲಿ ಲಂಡನ್ನಲ್ಲಿ ಸೆಪ್ಟೆಂಬರ್ 2013 ರಿಂದ ಸೇವೆ ಸಲ್ಲಿಸುತ್ತಿದ್ದರು.
ಎಂಟು ವರ್ಷದ ಹೋರಾಟಕ್ಕೆ ಜಯ: ತಂಡದ ಸದಸ್ಯರೊಬ್ಬರು ಸಂಸ್ಥೆಯ ಬೋನಸ್ ಪಾಲಿಸಿಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆಕೆ ಅನುಮಾನ ವ್ಯಕ್ತಪಡಿಸಿದಾಗ ಆಕೆ ಈ ವಿಷಯದ ಕುರಿತು ವಿಡ್ಮೆರ್ ಜೊತೆ ಪ್ರಸ್ತಾಪಿಸಿದರು. ಬಳಿಕ ವಿಡ್ಮೆರ್ ಬೆದರಿಸಲು ಆರಂಭಿಸಿದರು. ಸಹೋದ್ಯೋಗ ಸಂಸ್ಥೆಯ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಅವರ ಬೋನಸ್ ಅನ್ನು ಪರೋಕ್ಷವಾಗಿ ವಿಡ್ಮೆರ್ ಪಡೆಯುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದೀಗ ಪ್ರಕರಣ ಇತ್ಯರ್ಥ ಪಡಿಸಿರುವ ನ್ಯಾಯಾಲಯ ಮೂರು ತಿಂಗಳ ವೇತನ ಜೊತೆಗೆ ವರ್ಷದ ವೇತನವನ್ನು ನೀಡುವಂತೆ ರಾಯಲ್ ಮೇಲ್ಗೆ ಆದೇಶಿಸಿದೆ.
2014ರಲ್ಲಿ ಜೂಥಿ ರಾಯಲ್ ಮೇಲ್ ತೊರೆದ ಬಳಿಕ ಅವರು ಆಘಾತ ಮತ್ತು ಒತ್ತಡವನ್ನು ಅನುಭವಿಸಿದ್ದು, ಮಾನಸಿಕ ಸ್ಥಿತಿಯಿಂದಾಗಿ ಮತ್ತೆ ಕೆಲಸಕ್ಕೆ ಮರಳಲು ಸಾಧ್ಯವಾಗಲಿಲ್ಲ ಎಂದು ನ್ಯಾಯಮಂಡಳಿ ಮುಂದೆ ತಿಳಿಸಿದ್ದಾರೆ.
2015ರಲ್ಲಿ ಜೂಥಿ ಮೊದಲ ಬಾರಿಗೆ ರಾಯಲ್ ಮೇಲ್ ಅನ್ನು ಉದ್ಯೋಗ ನ್ಯಾಯಮಂಡಳಿ ಮುಂದೆ ಕರೆತಂದರು. ಸುದೀರ್ಘ ಹೋರಾಟದ ಬಳಿಕ ಸುಪ್ರೀಂ ಕೋರ್ಟ್ ಇದೀಗ ಅವಳ ಪರವಾಗಿ ನ್ಯಾಯ ನೀಡಿದೆ. ಬ್ಯುಸಿನೆಸ್ ಎಕ್ಸ್ಪರ್ಟ್ ಆಗಿರುವ ಟೈಲರ್ಮೇ ಜೂಥಿ ಅವರ ಬೋನಸ್ ವಿಚಾರದಲ್ಲಿ ಮಾಡಿರುವ ಆರೋಪಗಳು ಸರಿಯಾಗಿವೆ ಎಂದು ದೃಢಪಡಿಸಿದರು.
ಪ್ರಕರಣದ ಬಳಿಕ ರಾಯಲ್ ಮೇಲ್ ತಮ್ಮ ಸಂಸ್ಥೆ ಯಾವುದೇ ರೀತಿಯ ಬೆದರಿಸುವಿಕೆ, ಕಿರುಕುಳ ಅಥವಾ ತಾರತಮ್ಯವನ್ನು ನಾವು ಸಹಿಸುವುದಿಲ್ಲ. ನಮ್ಮ ವ್ಯವಹಾರದಲ್ಲಿ ಕೆಲಸ ಮಾಡುವ ಎಲ್ಲ ವ್ಯಕ್ತಿಗಳ ಕೆಲಸ ಮತ್ತು ಬದ್ಧತೆಯನ್ನು ನಾವು ಗೌರವಿಸುತ್ತೇವೆ ಎಂದಿದೆ.
ಇದನ್ನೂ ಓದಿ: ಯುಕೆ ಸರ್ಕಾರದಲ್ಲಿ ನಾಗರಿಕ ಸೇವಾ ಹುದ್ದೆ ಅಲಂಕರಿಸಿದ ಶ್ರೀನಗರದ ಫೈಜಾನ್ ನಜೀರ್..!