ETV Bharat / international

ಹೊಸ ಗೆಳತಿ ಪೌಲಾ ಹರ್ಡ್‌ ಜೊತೆ ಬಿಲ್ ಗೇಟ್ಸ್: ಏನಿದು ಕಹಾನಿ? - ಬಿಲ್ ಗೇಟ್ಸ್ ದಾಂಪತ್ಯ

ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಈಗ ಹೊಸ ಗೆಳತಿ ಪೌಲಾ ಹರ್ಡ್‌ ಕಾಣಿಸಿಕೊಳ್ಳುತ್ತಿದ್ದಾರೆ.

bill-gates-relationship-with-new-girlfriend-paula-hurd-who-is-she
ಹೊಸ ಗೆಳತಿ ಪೌಲಾ ಹರ್ಡ್‌ ಜೊತೆ ಬಿಲ್ ಗೇಟ್ಸ್... ಏನಿದು ಕಹಾನಿ?
author img

By

Published : Feb 9, 2023, 8:11 PM IST

ನವದೆಹಲಿ: ಮೈಕ್ರೋಸಾಫ್ಟ್ ಸಂಸ್ಥಾಪಕ, ಬಿಲಿಯನೇರ್ ಬಿಲ್ ಗೇಟ್ಸ್ ತಮ್ಮ ಹೊಸ ಗೆಳತಿ ಪೌಲಾ ಹರ್ಡ್‌ ಅವರೊಂದಿಗೆ ಕಾಣಿಸಿಕೊಂಡಿರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇಬ್ಬರೂ ಒಂದು ವರ್ಷದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಗುರುತಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಇದನ್ನೂ ಓದಿ: ವಿವಾಹ ಬಂಧ ಮುರಿದುಕೊಳ್ಳಲು ನಿರ್ಧರಿಸಿದ ಬಿಲ್ ಗೇಟ್ಸ್ ಮತ್ತು ಮಿಲಿಂದಾ ಗೇಟ್ಸ್

ಇತ್ತೀಚಿಗೆ 67 ವರ್ಷದ ಬಿಲ್ ಗೇಟ್ಸ್ ಮತ್ತು 60 ವರ್ಷದ ಪೌಲಾ ಹರ್ಡ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜನವರಿಯಷ್ಟೇ ಇಬ್ಬರೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಒಟ್ಟಾಗಿ ಕ್ಯಾಮರಾಗಳ ಕಣ್ಣಿಗೆ ಬಿದ್ದಿದ್ದರು. ಈ ಹಿಂದೆ 2022ರ ಮಾರ್ಚ್​ನಲ್ಲೂ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಮೆಂಟ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಇಬ್ಬರೂ ಒಟ್ಟಿಗೆ ಕುಳಿತಿರುವ ಫೋಟೋ ಕೂಡ ಬಹಿರಂಗವಾಗಿತ್ತು. ಆದರೆ, ಇಬ್ಬರೂ ತಮ್ಮ ಸಂಬಂಧ ಬಗ್ಗೆ ಹೆಚ್ಚಿನ ರಹಸ್ಯವನ್ನು ಬಿಟ್ಟುಕೊಡುತ್ತಿಲ್ಲ. ಆದಾಗ್ಯೂ, ಕಳೆದ ಕಳೆದ ತಿಂಗಳು ಸಿಡ್ನಿಗೆ ಬಿಲ್ ಗೇಟ್ಸ್ ಅವರೊಂದಿಗೆ ಹೋದಾಗ ಅಲ್ಲಿನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಪೌಲಾ ಹರ್ಡ್ ಭೇಟಿ ಮಾಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದೆ.

ಪೌಲಾ ಹರ್ಡ್ ಯಾರು?: ಜಗತ್ತಿನ ಶ್ರೀಮಂತರಾದ ಬಿಲ್ ಗೇಟ್ಸ್ ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಪೌಲಾ ಹರ್ಡ್ ಯಾರು ಎಂಬ ಕತೂಹಲ ಸಾಕಷ್ಟು ಜನರಲ್ಲಿದೆ. ಅಂದಹಾಗೆ, ಪೌಲಾ ಹರ್ಡ್ ಒರಾಕಲ್ ಕಂಪನಿಯ ದಿ. ಸಿಇಒ ಮಾರ್ಕ್ ಹರ್ಡ್ ಅವರ ಪತ್ನಿ. 2019ರಲ್ಲಿ ಮಾರ್ಕ್ ಹರ್ಡ್ ನಿಧನರಾಗಿದ್ದರು. ಮಾರ್ಕ್ ಅವರ ಜೊತೆಗಿನ ದಾಂಪತ್ಯಕ್ಕೆ ಪೌಲಾ ಹರ್ಡ್ ಅವರು ಕ್ಯಾಥರೀನ್ ಮತ್ತು ಕೆಲ್ಲಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ.

ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಪೌಲಾ ಹರ್ಡ್ ಅವರೇ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ನ್ಯಾಷನಲ್ ಕ್ಯಾಶ್ ರಿಜಿಸ್ಟರ್ ಎಂಬ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಂಪನಿಯಡಿಯಲ್ಲಿ ಅವರು ವಿಶೇಷ ಸಂದರ್ಭಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಜೊತೆಗೆ ಆಸ್ಟಿನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ವ್ಯಾಪಾರ ಆಡಳಿತ (Business Administration) ವಿಭಾಗದಲ್ಲಿ ಪದವಿ ಹೊಂದಿದ್ದಾರೆ.

ಮೆಲಿಂಡಾಗೆ ಗೇಟ್ಸ್ ವಿಚ್ಛೇದನ: ಮತ್ತೊಂದೆಡೆ, ಬಿಲ್ ಗೇಟ್ಸ್ ಮತ್ತು ತಮ್ಮ ಪತ್ನಿ ಮೆಲಿಂದಾ 2021ರ ಆಗಸ್ಟ್​ನಲ್ಲಿ ವಿಚ್ಛೇದನ ಪಡೆದಿದ್ದಾರೆ. ಈ ಮೂಲಕ 27 ವರ್ಷಗಳ ಇಬ್ಬರ ದಾಂಪತ್ಯವು ಮುರಿದು ಹೋಗಿತ್ತು. 1987ರಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲೇ ಇಬ್ಬರೂ ಭೇಟಿಯಾಗಿದ್ದರು. ನಂತರ ಕೆಲವು ವರ್ಷಗಳ ಕಾಲ ಸಂಬಂಧದಲ್ಲಿದ್ದ ಇಬ್ಬರೂ 1994ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇದೀಗ ಮೆಲಿಂದಾ ಅವರಿಂದ ವಿಚ್ಛೇದನ ಪಡೆದ ಎರಡು ವರ್ಷಗಳ ನಂತರ ಪೌಲಾ ಹರ್ಡ್ ಜೊತೆಗಿನ ಬಿಲ್ ಗೇಟ್ಸ್ ಸಂಬಂಧದ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: ಉದ್ಯೋಗ ಹುಡುಕುತ್ತಿದ್ದಿರಾ..? 48 ವರ್ಷ ಹಿಂದಿನ ಬಿಲ್ ಗೇಟ್ಸ್​ ರೆಸ್ಯೂಮ್ ನೋಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.