ETV Bharat / international

ಸಿರಿಯಾದಲ್ಲಿ ಇಸ್ರೇಲ್​ ವೈಮಾನಿಕ ದಾಳಿ: ಇರಾನ್‌ನ ರೆವಲ್ಯೂಷನರಿ ಗಾರ್ಡ್ ಫೋರ್ಸ್‌ನ ಜನರಲ್ ಹತ್ಯೆ - ಇಸ್ರೇಲ್ ಹಮಾಸ್ ಯುದ್ಧ

Israeli airstrike: ಇರಾನ್‌ನ ರೆವಲ್ಯೂಷನರಿ ಗಾರ್ಡ್ ಫೋರ್ಸ್‌ನ ಜನರಲ್ ಸೈದಾ ರಾಜಿ ಮೌಸವಿ ಸಿರಿಯಾದಲ್ಲಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹತರಾಗಿದ್ದಾರೆ.

Israeli airstrike
ಸಿರಿಯಾದಲ್ಲಿ ಇಸ್ರೇಲ್​ ವೈಮಾನಿಕ ದಾಳಿ: ಇರಾನ್‌ನ ರೆವಲ್ಯೂಷನರಿ ಗಾರ್ಡ್ ಫೋರ್ಸ್‌ನ ಜನರಲ್ ಹತ್ಯೆ
author img

By PTI

Published : Dec 26, 2023, 7:15 AM IST

ಬೈರುತ್: ಡಮಾಸ್ಕಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಇಸ್ರೇಲ್​ ವೈಮಾನಿಕ ದಾಳಿ ನಡೆಸಿ, ಇರಾನ್‌ನ ರೆವಲ್ಯೂಷನರಿ ಗಾರ್ಡ್ ಫೋರ್ಸ್‌ನ ಜನರಲ್ ಹತ್ಯೆ ಮಾಡಿದೆ ಎಂದು ಇರಾನ್​ನ ಮಾಧ್ಯಮಯೊಂದು ತಿಳಿಸಿದೆ.

ಸಿರಿಯಾದಲ್ಲಿ ಇರಾನಿನ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಫೋರ್ಸ್‌ನ ಜನರಲ್ ಸೈದಾ ರಾಜಿ ಮೌಸವಿ ಹತ್ಯೆಯು ಲೆಬನಾನ್-ಇಸ್ರೇಲ್ ಗಡಿಯಲ್ಲಿ ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಪರಸ್ಥಿತಿ ಹದಗೆಟ್ಟು ಹೋಗಿವೆ. ಇಸ್ರೇಲ್ - ಹಮಾಸ್ ಯುದ್ಧದ ಕರಿ ನೆರಳು ಇರಾನ್‌ನ ಮೇಲೆಯೂ ಆವರಿಸಿದೆ. ಡಿಸೆಂಬರ್‌ನಲ್ಲಿಯೇ, ಮತ್ತೊಂದು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇಬ್ಬರು ಹಿರಿಯ ರೆವಲ್ಯೂಷನರಿ ಗಾರ್ಡ್ ಅಧಿಕಾರಿಗಳನ್ನು ಹತ್ಯೆ ಮಾಡಲಾಗಿತ್ತು.

ಇಸ್ರೇಲ್ ಶಿಯಾ ಮುಸ್ಲಿಂ ದೇಗುಲದ ಬಳಿ ಇರುವ ಸೈದಾ ಝೈನಾಬ್ ಪ್ರದೇಶದಲ್ಲಿ ಸುತ್ತಮುತ್ತ ಇಸ್ರೇಲ್​ ದಾಳಿ ನಡೆದಿದೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ IRNA ಮತ್ತು ಬ್ರಿಟನ್ ಮೂಲದ ವಿರೋಧದ ಯುದ್ಧದ ಮಾನಿಟರ್ ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. ಮೌಸವಿಯು ಜನವರಿ 2020ರಲ್ಲಿ ಇರಾಕ್‌ನಲ್ಲಿ ಅಮೆರಿಕದಿಂದ ನಡೆದ ಡ್ರೋನ್ ದಾಳಿಯಲ್ಲಿ ಕೊಲ್ಪಟ್ಟ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಮಾಂಡರ್ ಖಾಸೆಮ್ ಸೊಲೈಮಾನಿ ಅವರ ತಂಡದ ಸದಸ್ಯರಾಗಿದ್ದರು. ಜನರಲ್ ಮೌಸವಿ ಸಿರಿಯನ್ ಸರ್ಕಾರದ ಮಿಲಿಟರಿ ಸಲಹೆಗಾರರಾಗಿದ್ದರು. ಆಗಾಗ್ಗೆ ಸಿರಿಯಾಕ್ಕೆ ಭೇಟಿ ನೀಡುತ್ತಿದ್ದರು. ಸಿರಿಯಾ ಪ್ರವಾಸದಲ್ಲಿದ್ದ ಮೌಸಾವಿಯನ್ನು ಡಮಾಸ್ಕಸ್ ಬಳಿ ಇಸ್ರೇಲ್ ವಿಮಾನಗಳು ಗುರಿಯಾಗಿಸಿದ್ದವು. ಮೌಸವಿ ಸಿರಿಯನ್ ಸರ್ಕಾರದ ದೀರ್ಘಾವಧಿಯ ಸಲಹೆಗಾರರಾಗಿದ್ದರು ಎಂದು IRNA ತಿಳಿಸಿದೆ.

ಆದರೆ, ಈ ದಾಳಿಯ ಬಗ್ಗೆ ಇಸ್ರೇಲಿ ಮಿಲಿಟರಿ ಅಥವಾ ಸಿರಿಯನ್ ಮಾಧ್ಯಮಗಳು ಹೇಳಿಕೆ ನೀಡಲಿಲ್ಲ. IRNA ಪ್ರಕಾರ, ಲೆಬನಾನಿನ ಉಗ್ರಗಾಮಿ ಗುಂಪು, ಇರಾನ್ ಮತ್ತು ರಷ್ಯಾ, ಸಿರಿಯನ್ ಸಂಘರ್ಷದ ಉದ್ದಕ್ಕೂ ಅಧ್ಯಕ್ಷ ಬಶರ್ ಅಸ್ಸಾದ್ ಸರ್ಕಾರವನ್ನು ಅಧಿಕಾರದಲ್ಲಿ ಇರಿಸುವಲ್ಲಿ ಪ್ರಮುಖ ಈ ಮಿಲಿಟರಿ ಪಾತ್ರವನ್ನು ವಹಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಸಿರಿಯಾದ ಸರ್ಕಾರಿ ನಿಯಂತ್ರಿತ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮೇಲೆ ಇಸ್ರೇಲ್ ನೂರಾರು ದಾಳಿಗಳನ್ನು ನಡೆಸಿದೆ. ಆದ್ರೆ, ಸಿರಿಯಾದ ಮೇಲಿನ ತನ್ನ ವೈಮಾನಿಕ ದಾಳಿಯ ಹೊಣೆಯನ್ನು ಇಸ್ರೇಲ್​ ಹೊತ್ತುಕೊಂಡಿಲ್ಲ. ಒಂದು ವೇಳೆ ಈ ದಾಳಿಯ ಹೊಣೆಹೊತ್ತರೆ, ಬಶರ್ ಅಸ್ಸಾದ್ ಸರ್ಕಾರವನ್ನು ಬೆಂಬಲಿಸುವ ಇರಾನ್ ಬೆಂಬಲಿತ ಗುಂಪುಗಳನ್ನು ಇಸ್ರೇಲ್ ಅನ್ನು ಗುರಿಯಾಗಿಸುತ್ತವೆ ಎಂದು IRNA ತಿಳಿಸಿದೆ. ಮೌಸಾವಿ ಸಾವಿನ ಬಗ್ಗೆ ಇರಾನ್ ದುಃಖ ವ್ಯಕ್ತಪಡಿಸಿದೆ. ಜೊತೆಗೆ ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿ; ಐಡಿಎಫ್​ ನಾಶ ಮಾಡುತ್ತೇವೆಂದ ಸಿನ್ವರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.