ETV Bharat / international

ರಷ್ಯಾದಲ್ಲಿ ವೋಸ್ಟಾಕ್​ ಸಮರಾಭ್ಯಾಸ.. ಭಾರತ, ಚೀನಾ ರಾಷ್ಟ್ರಗಳ ಭಾಗವಹಿಸುವಿಕೆಗೆ ಅಮೆರಿಕ ಆಕ್ಷೇಪ

author img

By

Published : Aug 31, 2022, 7:02 AM IST

ನಾಳೆಯಿಂದ ರಷ್ಯಾದಲ್ಲಿ ನಡೆಯಲಿರುವ ವೋಸ್ಟಾಕ್​ 2022 ಸಮರಾಭ್ಯಾಸಕ್ಕೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ. ಉಕ್ರೇನ್​ ಮೇಲೆ ಯುದ್ಧ ನಡೆಯುತ್ತಿರುವ ನಡುವೆ ಈ ಸೇನಾಭ್ಯಾಸ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದಿದೆ.

us-concerns-about-vostok-military-drill
ರಷ್ಯಾದಲ್ಲಿ ವೋಸ್ಟಾಕ್​ ಸಮರಾಭ್ಯಾಸ

ವಾಷಿಂಗ್ಟನ್: ರಷ್ಯಾದ ನೇತೃತ್ವದಲ್ಲಿ ನಾಳೆಯಿಂದ ಆರಂಭವಾಗಲಿರುವ ವೋಸ್ಟಾಕ್​- 2022 ಬಹುರಾಷ್ಟ್ರಗಳ ಸೇನಾ ಅಭ್ಯಾಸಕ್ಕೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ. ರಷ್ಯಾದ ಜೊತೆ ಇತರ ರಾಷ್ಟ್ರಗಳು ಸೇನಾಭ್ಯಾಸ ನಡೆಸುವುದು ಕಳವಳಕಾರಿ ವಿಷಯ ಎಂದಿದೆ.

ಉಕ್ರೇನ್ ಮೇಲೆ ರಷ್ಯಾ ಅಪ್ರಚೋದಿತ ಯುದ್ಧ ನಡೆಸುತ್ತಿರುವ ಮಧ್ಯೆಯೇ ಆ ದೇಶದ ನೇತೃತ್ವದಲ್ಲಿ ಯಾವುದೇ ದೇಶವು ಸಮರಾಭ್ಯಾಸ ನಡೆಸುವುದು ಸಮಂಜಸವಲ್ಲ. ಈ ಬಗ್ಗೆ ಅಮೆರಿಕಕ್ಕೆ ಆತಂಕವಿದೆ ಎಂದು ಶ್ವೇತಭವನ ಮಂಗಳವಾರ ತಿಳಿಸಿದೆ. ರಷ್ಯಾವು ನೆರೆ ರಾಷ್ಟ್ರವಾದ ಉಕ್ರೇನ್ ಮೇಲೆ ಯುದ್ಧವನ್ನು ನಡೆಸುತ್ತಿದೆ. ಈ ಆತಂಕದ ಸಂದರ್ಭದಲ್ಲಿ ಇತರ ರಾಷ್ಟ್ರಗಳು ಆ ದೇಶದ ಜೊತೆಗೆ ಸಮರಾಭ್ಯಾಸ ನಡೆಸುವುದರ ಬಗ್ಗೆ ಅಮೆರಿಕದ ಆಕ್ಷೇಪವಿದೆ ಎಂದು ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಕರೆನ್ ಜೀನ್ ಪಿಯರ್ ತಿಳಿಸಿದರು.

ಸೇನಾಭ್ಯಾಸದಲ್ಲಿ ಭಾರತ ಭಾಗವಹಿಸದಂತೆ ಒತ್ತಡ ಹೇರಬಹುದಲ್ಲವೇ ಎಂಬ ಪ್ರಶ್ನೆಗೆ, ಯಾವುದೇ ದೇಶಗಳು ಈ ಸೇನಾಭ್ಯಾಸದಲ್ಲಿ ಭಾಗವಹಿಸುವುದರ ವಿರುದ್ಧ ಅಮೆರಿಕದ ಆಕ್ಷೇಪವಿದೆ ಎಂದಷ್ಟೇ ಹೇಳಿದರು. ವೋಸ್ಟಾಕ್- 2022 ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮ ಆಗಿದ್ದು, ಇದು ಸೆಪ್ಟೆಂಬರ್​ 1 ರಿಂದ 7 ರವರೆಗೆ ನಡೆಯಲಿದೆ.

ಇದನ್ನು ಈ ಬಾರಿ ರಷ್ಯಾ ನಡೆಸಿಕೊಡಲಿದೆ. ಇದರಲ್ಲಿ ಭಾರತ, ಚೀನಾ, ಸಿರಿಯಾ, ತಜಕಿಸ್ತಾನ್, ಅಜೆರ್ಬೈಜಾನ್, ಬೆಲಾರಸ್, ಕಜಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಲಾವೋಸ್ ಸೇರಿದಂತೆ ಹಲವಾರು ರಾಷ್ಟ್ರಗಳು ಭಾಗವಹಿಸಲಿದ್ದು, ಒಟ್ಟಾಗಿ ಸಮರಾಭ್ಯಾಸ ನಡೆಸಲಿವೆ. ವಿಶೇಷವೆಂದರೆ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ನಡೆಯುತ್ತಿರುವ ಮೊದಲ ಬೃಹತ್​ ಪ್ರಮಾಣದ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮವಾಗಿದೆ.

ಓದಿ: ಕಾಶ್ಮೀರದಲ್ಲಿ ಮೂವರು ಸ್ಥಳೀಯ ಉಗ್ರರನ್ನು ಹೊಡೆದುರುಳಿಸಿದ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.