ETV Bharat / international

ಉಕ್ರೇನ್​ ಮೇಲೆ 122 ಕ್ಷಿಪಣಿ, 36 ಡ್ರೋನ್‌ ದಾಳಿ ನಡೆಸಿದ ರಷ್ಯಾ: 27 ಜನ ಸಾವು - ದಾಳಿ ನಡೆಸಿದ ರಷ್ಯಾ

Russia Attack On Ukraine : ರಷ್ಯಾ ಮತ್ತೊಮ್ಮೆ ಉಕ್ರೇನ್ ಮೇಲೆ ದಾಳಿ ಮಾಡಿದೆ. 122 ಕ್ಷಿಪಣಿ ಮತ್ತು 36 ಡ್ರೋನ್‌ಗಳ ಮೂಲಕ ಶುಕ್ರವಾರ ರಾಜಧಾನಿ ಕೀವ್ ಸೇರಿದಂತೆ ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿದೆ.

Russia fires 122 missiles  biggest aerial barrage  Russia Ukraine war  ದಾಳಿ ನಡೆಸಿದ ರಷ್ಯಾ  ಉಕ್ರೇನ್​ ಮೇಲೆ 122 ಕ್ಷಿಪಣಿ
36 ಡ್ರೋನ್‌ಗಳಿಂದ ದಾಳಿ ನಡೆಸಿದ ರಷ್ಯಾ
author img

By PTI

Published : Dec 30, 2023, 10:33 AM IST

ಕೀವ್​, ಉಕ್ರೇನ್​: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, 27 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಶುಕ್ರವಾರ, ರಾಜಧಾನಿ ಕೀವ್ ಸೇರಿದಂತೆ ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಷ್ಯಾ 122 ಕ್ಷಿಪಣಿ ಮತ್ತು 36 ಡ್ರೋನ್‌ಗಳೊಂದಿಗೆ ದಾಳಿ ಮಾಡಿದೆ. 27 ಮಂದಿ ಸಾವನ್ನಪ್ಪಿದ್ದು, 144 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಹಲವರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. 22 ತಿಂಗಳ ಸುದೀರ್ಘ ಯುದ್ಧದಲ್ಲಿ ಇದು ಅತಿದೊಡ್ಡ ವೈಮಾನಿಕ ದಾಳಿ ಎಂದು ಉಕ್ರೇನ್ ಹೇಳಿದೆ.

ರಷ್ಯಾ ತನ್ನ ಶಸ್ತ್ರಾಗಾರದಲ್ಲಿರುವ ಪ್ರತಿಯೊಂದು ಶಸ್ತ್ರಾಸ್ತ್ರವನ್ನು ನಮ್ಮ ವಿರುದ್ಧ ಹಾರಿಸಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಸಾಮಾಜಿಕ ಜಾಲತಾಣ ಎಕ್ಸ್​ ಮೂಲಕ ಆರೋಪಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ರಷ್ಯಾ 96 ಕ್ಷಿಪಣಿ ಮತ್ತು ಈ ವರ್ಷದ ಮಾರ್ಚ್‌ನಲ್ಲಿ 81 ಕ್ಷಿಪಣಿಗಳ ಮೂಲಕ ದಾಳಿಗೈದಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ. ಅವಶೇಷಗಳಿಂದ ಜನರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಮತ್ತು ಸಂತ್ರಸ್ತ ಕುಟುಂಬಗಳು ಪ್ರಯತ್ನಿಸುತ್ತಿವೆ.

ದಾಳಿಯ ಮೂಲಕ ರಷ್ಯಾ ನೀಡುತ್ತಿರುವ ಸಂದೇಶವನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು. ಉಕ್ರೇನ್‌ಗೆ ಬೆಂಬಲ ನೀಡುವ ಕುರಿತು ಚರ್ಚಿಸುತ್ತಿರುವ ಸಂಸತ್​​​ಗಳು ಮತ್ತು ಮಾತುಕತೆಗೆ ರಷ್ಯಾ ಸಕಾರಾತ್ಮಕವಾಗಿದೆ ಎಂದು ವರದಿ ಮಾಡುವ ಮಾಧ್ಯಮಗಳು ಈ ದಾಳಿಗಳ ಬಗ್ಗೆ ಗಮನ ಹರಿಸಬೇಕು ಎಂದು ಉಕ್ರೇನ್​ ಹೇಳಿದೆ. ಅಲ್ಲದೆ, ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಪೂರೈಸಲು ಮಿತ್ರರಾಷ್ಟ್ರಗಳಿಗೆ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಅವರು ಮನವಿ ಮಾಡಿದ್ದಾರೆ.

ಕವಿ ಕಮರ್ಡಿನ್​ಗೆ ಜೈಲು ಶಿಕ್ಷೆ: ಉಕ್ರೇನ್ ವಿರುದ್ಧದ ಯುದ್ಧದ ಬಗ್ಗೆ ಪ್ರಮಾದ ಎಸಗಿದ್ದಕ್ಕಾಗಿ ಮಾಸ್ಕೋ ಜಿಲ್ಲಾ ನ್ಯಾಯಾಲಯವು ಕವಿ ಕಮರ್ಡಿನ್‌ಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸೆಪ್ಟೆಂಬರ್ 2022 ರಲ್ಲಿ ಮಾಸ್ಕೋದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಮರ್ಡಿನ್ ಯುದ್ಧ-ವಿರೋಧಿ ಕವನಗಳನ್ನು ಬರೆದಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ. ಆ ಕಾರ್ಯಕ್ರಮದಲ್ಲಿ ಕಮರ್ಡಿನ್ ಅವರ ಕವಿತೆಗಳನ್ನು ಓದಿದ ಯೆಗೊರ್ ಸ್ತೋಬಾ ಅವರಿಗೆ ಐದೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಓದಿ: ಹಫೀಜ್ ಸಯೀದ್ ಹಸ್ತಾಂತರಕ್ಕೆ ಭಾರತ ಮನವಿ: ಪಾಕಿಸ್ತಾನದ ಪ್ರತಿಕ್ರಿಯೆ ಏನು?

ಗಾಜಾ ಮೇಲೆ ದಾಳಿ, 35 ಸಾವು: ಮತ್ತೊಂದೆಡೆ, ಗಾಜಾದಲ್ಲಿ ಇಸ್ರೇಲ್ ಆಕ್ರಮಣ ಮುಂದುವರೆದಿದೆ. ಸೆಂಟ್ರಲ್ ಗಾಜಾದಲ್ಲಿರುವ ನುಸಿರಾತ್ ಮತ್ತು ಮಗಾಜಿ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 35 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ದಕ್ಷಿಣ ಗಾಜಾದ ಕುವೈತ್ ಆಸ್ಪತ್ರೆಯ ಸಮೀಪವಿರುವ ವಸತಿ ಸಂಕೀರ್ಣದ ಮೇಲೆ ಇಸ್ರೇಲ್ ಬಾಂಬ್‌ಗಳ ಮಳೆಗರೆದಿದೆ. ದಾಳಿಯಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.