ETV Bharat / international

ಭೀಕರ ಬಸ್ ಅಪಘಾತ.. 19 ಮಂದಿ ಸಾವು, 30 ಜನರಿಗೆ ಗಾಯ - ಈಟಿವಿ ಭಾರತ್ ಕನ್ನಡ ಸುದ್ದಿ

ಬಾಂಗ್ಲಾದೇಶದ ಢಾಕಾದಲ್ಲಿ ತಾಂತ್ರಿಕ ಸಮಸ್ಯೆಯಿಂದ ಬಸ್​ವೊಂದು ಕಂದಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ 19 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ.

ಬಾಂಗ್ಲಾದಲ್ಲಿ ಬಸ್ ಅಪಘಾತ
ಬಾಂಗ್ಲಾದಲ್ಲಿ ಬಸ್ ಅಪಘಾತ
author img

By

Published : Mar 19, 2023, 8:04 PM IST

ಢಾಕಾ: ಬಾಂಗ್ಲಾದೇಶದ ಢಾಕಾದಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ ಕಂದಕಕ್ಕೆ ಬಿದ್ದ ಪರಿಣಾಮ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಎಮದ್ ಪರಿಬಹಾನ್ ನಿರ್ವಹಿಸುತ್ತಿದ್ದ ಢಾಕಾಕ್ಕೆ ಹೋಗುವ ಬಸ್ ಮದರಿಪುರದ ಶಿಬ್ಚಾರ್‌ನಲ್ಲಿ ಬೆಳಗ್ಗೆ 7.45 ಕ್ಕೆ ಬಂಗಬಂಧು ಎಕ್ಸ್‌ಪ್ರೆಸ್‌ವೇಯಲ್ಲಿ ನಿಯಂತ್ರಣ ತಪ್ಪಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂಡಿ ಮಸೂದ್ ಆಲಂ ತಿಳಿಸಿದ್ದಾರೆ. ಮದರಿಪುರ ಡೆಪ್ಯುಟಿ ಕಮಿಷನರ್ ರಹೀಮಾ ಖಾತುನ್ ಪ್ರಕಾರ, 14 ಜನರ ಶವಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೂವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮೃತದೇಹ ಸ್ಥಳಾಂತರ: ಗಾಯಾಳುಗಳು, ಹಾಗೂ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಶಿಬ್ಚಾರ್ ಉಪಜಿಲಾ ಆರೋಗ್ಯ ಸಂಕೀರ್ಣ ಮತ್ತು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು. DMCH ನಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಇನ್ನಿಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಖುಲ್ನಾದಿಂದ ಬಸ್ಸು ಮದರಿಪುರದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದರಿಂದ ಮೃತರಲ್ಲಿ ಅನೇಕರು ಮದರಿಪುರದವರು ಎಂದು ತಿಳಿದುಬಂದಿದೆ.

ಬಸ್​ನ ಟೈರ್ ಪಂಕ್ಚರ್ ಆದ ನಂತರ ನಿಯಂತ್ರಣ ತಪ್ಪಿದೆ. ಆಗ ಬಸ್​ ಕಂದಕಕ್ಕೆ ಬಿದ್ದ ನಂತರ ಅದರ ಮುಂಭಾಗದಿಂದ ಮಧ್ಯ ಭಾಗಕ್ಕೆ ತೀವ್ರ ಹಾನಿಯಾಗಿದೆ ಎಂದು ಫರೀದ್‌ಪುರದ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಉಪ ನಿರ್ದೇಶಕ ಶಿಪ್ಲು ಅಹ್ಮದ್ ಹೇಳಿದ್ದಾರೆ.

ಭೀಕರ ಅಪಘಾತ: ಪದ್ಮಾ ಸೇತುವೆ ಪ್ರಾರಂಭವಾದ ನಂತರ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಭೀಕರ ಅಪಘಾತ ಇದಾಗಿದೆ ಎಂದು ಎಸ್‌ಪಿ ಎಂಡಿ ಮಸೂದ್ ಆಲಂ ಹೇಳಿದ್ದಾರೆ. ತಾಂತ್ರಿಕ ಸಮಸ್ಯೆಗಳು ಮತ್ತು ವೇಗದ ಚಾಲನೆಯಿಂದ ಬಸ್ ಅಪಘಾತ ಸಂಭವಿಸಿದೆ. ಮೃತ ದೇಹಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಘಟನೆಯ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ಎರಡು ದಿನಗಳಲ್ಲಿ ಅದು ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೃತರ ಕುಟುಂಬಗಳಿಗೆ ಸಮಾಧಿ ಮತ್ತು ಇತರ ವೆಚ್ಚಗಳನ್ನು ಪೂರೈಸಲು ಸರ್ಕಾರದಿಂದ ತಲಾ 25,000 ಪರಿಹಾರ ನೀಡಲಾಗುತ್ತದೆ ಮತ್ತು ಗಾಯಾಳುಗಳಿಗೆ ತಲಾ 5,000 ಪರಿಹಾರ ನೀಡಲಾಗುತ್ತದೆ ಎಂದು ಅವರು ಹೇಳಿದರು. ಡೈಲಿ ಸ್ಟಾರ್ ವರದಿಯ ಪ್ರಕಾರ, ಬಸ್ ಮೂರು ತಿಂಗಳಿಂದ ಯಾವುದೇ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ಬಸ್​ ಟೈರ್ ಪಂಕ್ಚರ್​ನಿಂದ ಅಪಘಾತ: ಏತನ್ಮಧ್ಯೆ, ಅಪಘಾತದ ಹಿಂದೆ ವೇಗದ ಚಾಲನೆಯೂ ಕಾರಣ ಎಂದು ಹೆದ್ದಾರಿ ಪೊಲೀಸರು ಶಂಕಿಸಿದ್ದಾರೆ. ಅಪಘಾತದ ನಂತರ ಸ್ಥಳಕ್ಕೆ ಧಾವಿಸಿದ ಭಂಗಾ ಹೆದ್ದಾರಿ ಪೊಲೀಸ್ ಠಾಣೆಯ ಅಧಿಕಾರಿ ತೈಮೂರ್ ಇಸ್ಲಾಂ, ಬಸ್ ವೇಗವಾಗಿ ಚಲಿಸುತ್ತಿತ್ತು ಮತ್ತು ಅದರ ಒಂದು ಟೈರ್ ಪಂಕ್ಚರ್​ ಆದ ನಂತರ ಚಾಲಕನಿಗೆ ಬಸ್ ಅನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು, ನಾಲ್ವರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.