ಮೆಕ್ಸಿಕೋ: ಅನ್ಯಗ್ರಹ ಜೀವಿಯ ಅಸ್ತಿತ್ವದ ಕುರಿತು ಇನ್ನೂ ಸಾಕಷ್ಟು ಚರ್ಚೆ, ಸಂಶೋಧನೆಗಳು ನಡೆಯುತ್ತಲೇ ಇದೆ. ಈ ಹಿಂದೆ, ಎಷ್ಟೋ ಜನರಿಗೆ ಏಲಿಯನ್ನಂತಹ ಅನ್ಯಗ್ರಹ ಜೀವಿಗಳು ಕಾಣಿಸಿಕೊಂಡಿರುವ ಕುರಿತು ಸುದ್ದಿಗಳು ಹರಿದಾಡಿದ್ದವು. ಆದರೆ ಈ ಕುರಿತು ಇಲ್ಲಿಯವರೆಗೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ 1,800 ವರ್ಷಗಳಷ್ಟು ಹಳೆಯದ್ದು ಎಂದು ಹೇಳಲಾಗಿರುವ 'ಮಾನವೇತರ' ಅನ್ಯಗ್ರಹ ಜೀವಿಗಳ ಎರಡು ರಕ್ಷಿತ ಪಳೆಯುಳಿಕೆಗಳನ್ನು ಮಂಗಳವಾರ UFO ತಜ್ಞರು (Unidentified flying object- ಗುರುತಿಸಲಾಗದ ಹಾರುವ ವಸ್ತು) ಮೆಕ್ಸಿಕೋ ಸಂಸತ್ತಿನಲ್ಲಿ ಪ್ರದರ್ಶಿಸಿದ್ದಾರೆ.
-
Mexico's Congress just unveiled two dead aliens estimated to be around 1,000 years old. What do you think? pic.twitter.com/Zr7z4FKenS
— Kage Spatz (@KageSpatz) September 13, 2023 " class="align-text-top noRightClick twitterSection" data="
">Mexico's Congress just unveiled two dead aliens estimated to be around 1,000 years old. What do you think? pic.twitter.com/Zr7z4FKenS
— Kage Spatz (@KageSpatz) September 13, 2023Mexico's Congress just unveiled two dead aliens estimated to be around 1,000 years old. What do you think? pic.twitter.com/Zr7z4FKenS
— Kage Spatz (@KageSpatz) September 13, 2023
ಸುರಕ್ಷಿತವಾಗಿರಿಸಿದ್ದ ಈ ಪಳೆಯುಳಿಕೆಗಳ ರಚನೆ ಮಾನವರ ದೇಹದ ಆಕಾರವನ್ನೇ ಹೋಲುತ್ತಿದೆ. ಎರಡು ಕೈಗಳನ್ನು ಹೊಂದಿದೆ. ಆದರೆ ಕೈಗಳಲ್ಲಿ ಕೇವಲ ಮೂರು ಬೆರಳುಗಳಷ್ಟೇ ಇವೆ. ಹಿಂಭಾಗದ ತಲೆಯ ಆಕಾರ ಉದ್ದವಿದೆ. ಈ ಕಳೇಬರವನ್ನು ಪ್ರದರ್ಶಿಸುವ ಮೂಲಕ ಅನ್ಯಗ್ರಹ ಜೀವಿಗಳ ಇರುವಿಕೆಯನ್ನು ಅಂಗೀಕರಿಸಿದ ವಿಶ್ವದ ಮೊದಲ ದೇಶವಾಗಿ ಮೆಕ್ಸಿಕೊ ಹೊರಹೊಮ್ಮಿದೆ. ನಿಗೂಢ ಆವಿಷ್ಕಾರಗಳ ಕುರಿತು ನಡೆಯುತ್ತಿದ್ದ ಸಂಶೋಧನೆಯ ಸಮಯದಲ್ಲಿ ಅನ್ಯಗ್ರಹ ಜೀವಿ ಎನ್ನಲಾಗಿದ್ದ 2 ಸಂರಕ್ಷಿತ ಶವಗಳನ್ನು ಎರಡು ಮರದ ಪೆಟ್ಟಿಗೆಯಲ್ಲಿಟ್ಟು ಸಂಸತ್ತಿನಲ್ಲಿ ಪ್ರದರ್ಶಿಸಲಾಯಿತು.
ಅಮೆರಿಕದ ನೌಕಾಪಡೆಯ ಮಾಜಿ ಪೈಲಟ್ ರಿಯಾನ್ ಗ್ರೇವ್ಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 700 ರಿಂದ 1,800 ವರ್ಷಗಳಷ್ಟು ಹಳೆಯದಾದ ಶವಗಳಿವು. ಈ ಮಾದರಿಗಳು ನಮ್ಮ ಭೂಮಿಯ ವಿಕಾಸದ ಭಾಗವಲ್ಲ. UFO ಅಥವಾ ಹಾರುವ ತಟ್ಟೆಗಳ ಅವಶೇಷಗಳ ನಂತರ ಕಂಡುಬಂದ ಜೀವಿಗಳೂ ಅಲ್ಲ. ಇವು ಡಯಾಟಮ್ (ಪಾಚಿ) ಆವರಿಸಿದ್ದ ಗಣಿಗಳಲ್ಲಿ ಕಂಡುಬಂದಿವೆ. ಆ ನಂತರ ಪಳೆಯುಳಿಕೆಗೊಳಿಸಲಾಯಿತು ಎಂದು ಜೈಮ್ ಮೌಸ್ಸಾನ್ ಮಾಹಿತಿ ನೀಡಿದ್ದಾರೆ.
-
1000 years old fossils of 'alien corpses' displayed in Mexico’s Congress
— ANI Digital (@ani_digital) September 13, 2023 " class="align-text-top noRightClick twitterSection" data="
Read @ANI Story |https://t.co/R9RKU5zRn6#Mexico #AlienCorpses #mexicocongress pic.twitter.com/mZhHbEEkoY
">1000 years old fossils of 'alien corpses' displayed in Mexico’s Congress
— ANI Digital (@ani_digital) September 13, 2023
Read @ANI Story |https://t.co/R9RKU5zRn6#Mexico #AlienCorpses #mexicocongress pic.twitter.com/mZhHbEEkoY1000 years old fossils of 'alien corpses' displayed in Mexico’s Congress
— ANI Digital (@ani_digital) September 13, 2023
Read @ANI Story |https://t.co/R9RKU5zRn6#Mexico #AlienCorpses #mexicocongress pic.twitter.com/mZhHbEEkoY
ಇದನ್ನು ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಠ ರೂಪದಲ್ಲಿ ಇವುಗಳನ್ನು ಪ್ರಸ್ತುತಪಡಿಸಲಾಗಿದೆ. ನಮ್ಮ ಜಗತ್ತಿನಲ್ಲಿ ಯಾವುದೇ ಇತರ ಜಾತಿಗಳಿಗೆ ಸಂಬಂಧಿಸಿದ ಮಾನವರಲ್ಲದ ಮಾದರಿಗಳೊಂದಿಗೆ ನಾವು ವ್ಯವಹರಿಸುತ್ತಿದ್ದೇವೆ ಎಂಬುದಕ್ಕೆ ಸ್ಪಷ್ಟವಾದ ಪುರಾವೆಯಾಗಬಲ್ಲದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಶವಗಳ ಡಿಎನ್ಎ ಪರೀಕ್ಷೆ ನಡೆಸಲಾಗಿದೆ. ಇವುಗಳ ಎಕ್ಸ್ರೇ ಅನ್ನು ಕೂಡಾ ಮೆಕ್ಸಿಕೋ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಲಾಗಿತ್ತು. ಎಕ್ಸ್ರೇ ಅಪರೂಪದ ಲೋಹದ ಇಂಪ್ಲಾಂಟ್‌ಗಳೊಂದಿಗೆ ದೇಹದೊಳಗೆ 'ಮೊಟ್ಟೆಗಳು' ಇರುವುದನ್ನು ತೋರಿಸಿದೆ. 2017ರಲ್ಲಿ ಪೆರುವಿನ ಕುಸ್ಕೋದಿಂದ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಶೋಧನೆ ತಿಳಿಸಿದೆ.
ಇದನ್ನೂ ಓದಿ: ಲಿಬಿಯಾ ಪ್ರವಾಹ: ಡೆರ್ನಾ ನಗರದಲ್ಲಿ 5300ಕ್ಕೂ ಹೆಚ್ಚು ಮಂದಿ ಸಾವು, 30 ಸಾವಿರ ಜನ ನಿರಾಶ್ರಿತ