ETV Bharat / international

ಟರ್ಕಿ ತಲುಪಿದ 51 ಜನರ ಎನ್​ಡಿಆರ್​ಎಫ್​ ತಂಡ.. 50 ಸಿಬ್ಬಂದಿಯ ಮತ್ತೊಂದು ತಂಡ ಶೀಘ್ರ ಅಂಕಾರಾಗೆ - NDRF rescuers team

ಟರ್ಕಿಯನ್ನು ತಲುಪಿದ ಭಾರತದ ಎನ್​ಡಿಆರ್​ಎಫ್​ ಪಡೆ- ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪನ- ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್- ಟರ್ಕಿಗೆ ತೆರಳಲು ಸಜ್ಜಾದ 2ನೇ ತಂಡ

ndrf-rescuers
ಟರ್ಕಿಗೆ ಬಂದಿಳಿದ 51 ಜನರ ಎನ್​ಡಿಆರ್​ಎಫ್​ ತಂಡ
author img

By

Published : Feb 7, 2023, 2:33 PM IST

ನವದೆಹಲಿ: ಟರ್ಕಿ ಮತ್ತು ಸಿರಿಯಾವನ್ನು ಭೂಕಂಪನ ಬುಡಮೇಲು ಮಾಡಿದೆ. ಪ್ರಕೃತಿ ವಿಕೋಪಕ್ಕೆ 5 ಸಾವಿರಕ್ಕೂ ಅಧಿಕ ಜನರು ಜೀವಂತ ಸಮಾಧಿಯಾಗಿದ್ದಾರೆ. ಭಾರತದ ರಕ್ಷಣಾ ಪಡೆಯ 51 ಸಿಬ್ಬಂದಿ ಪಡೆ ಅಗತ್ಯ ಸಾಮಗ್ರಿಗಳ ಸಮೇತ ಇಂದು ಬೆಳಗ್ಗೆ ಟರ್ಕಿಯನ್ನು ತಲುಪಿದೆ. ಇನ್ನೂ 50 ಜನರ ಎರಡನೇ ತಂಡ ತೆರಳಲು ಸಜ್ಜಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್, ಕೋಲ್ಕತ್ತಾದ ಎನ್​ಡಿಆರ್​ಎಫ್​ನ 2 ನೇ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಗುರ್ಮಿಂದರ್ ಸಿಂಗ್ ನೇತೃತ್ವದಲ್ಲಿ 101 ರಕ್ಷಕರ ತುಕಡಿಯು ಟರ್ಕಿಯ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಥಳೀಯ ಅಧಿಕಾರಿಗಳ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದರು.

51 ಜನರಿರುವ ಎನ್​ಡಿಆರ್​ಎಫ್​ ಪಡೆ: ಈ ಕಷ್ಟಕರ ಸಮಯದಲ್ಲಿ ಟರ್ಕಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿದೆ. ಐವರು ಮಹಿಳಾ ಸಿಬ್ಬಂದಿ ಸೇರಿದಂತೆ 51 ರಕ್ಷಕರನ್ನು ಹೊಂದಿರುವ ಒಂದು ತಂಡ ಮತ್ತು ಶ್ವಾನದಳವು ಇಂದು ಮುಂಜಾನೆ 3 ಗಂಟೆಗೆ ಭಾರತೀಯ ವಾಯುಪಡೆಯ ವಿಮಾನದಲ್ಲಿ ಟರ್ಕಿಗೆ ತೆರಳಿತು. ಏಳೂವರೆ ಗಂಟೆಗಳ ಪ್ರಯಾಣದ ನಂತರ 10.30 ಗಂಟೆಗೆ ಟರ್ಕಿಯ ಅದಾನ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಎರಡನೆಯ ತಂಡವು ಭಾರತೀಯ ವಾಯುಪಡೆಯ ವಿಮಾನದ ಮೂಲಕ ಹೊರಡಲಿದೆ ಎಂದು ತಿಳಿಸಿದರು.

ಎನ್‌ಡಿಆರ್‌ಎಫ್​ನ ಎರಡೂ ತಂಡಗಳೊಂದಿಗೆ ಕೆಲವು ವಾಹನಗಳನ್ನು ಕಳುಹಿಸುತ್ತಿದೆ. ಸ್ಥಳೀಯ ಅಧಿಕಾರಿಗಳು ಸಾರಿಗೆ ವ್ಯವಸ್ಥೆ ಒದಗಿಸಲು ಸಮಸ್ಯೆಯಾಗಬಹುದು ಎಂದು ನಮಗೆ ತಿಳಿಸಿದ್ದಾರೆ. ಹೀಗಾಗಿ ವಾಹನಗಳೊಂದಿಗೆ ಕಳುಹಿಸಲಾಗಿದೆ. ತಂಡ ಮತ್ತು ರಕ್ಷಕರ ಆರೈಕೆಗಾಗಿ ವೈದ್ಯರಿದ್ದಾರೆ. ಸಂತ್ರಸ್ತರಿಗೆ ನಾವು ಸಹಾಯ ಮಾಡಲಿದ್ದೇವೆ ಎಂದು ಹೇಳಿದರು.

ಸೂಚಿಸಿದಲ್ಲಿ ರಕ್ಷಣಾ ಕಾರ್ಯ: ಟರ್ಕಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ರಕ್ಷಣಾ ಪಡೆಯನ್ನು ಎಲ್ಲಿ ನಿಯೋಜಿಸುತ್ತಾರೆ ಎಂಬುದನ್ನು ನಿರ್ಧರಿಸಲು ಸ್ಥಳೀಯ ಅಧಿಕಾರಿಗಳಿಗೆ ಬಿಟ್ಟಿದ್ದೇವೆ. ಅದಾನ ವಿಮಾನ ನಿಲ್ದಾಣ ಮತ್ತು ನಾವು ಅಲ್ಲಿಗೆ ತಲುಪಿದ ತಕ್ಷಣ ಕಾರ್ಯಾಚರಣೆಯನ್ನು ಎಲ್ಲಿ ಪ್ರಾರಂಭಿಸಬೇಕು ಎಂದು ಅವರು ನಮಗೆ ತಿಳಿಸುತ್ತಾರೆ. ಆ ಪ್ರದೇಶದಲ್ಲಿ ಯಾವ ರೀತಿಯ ಕಟ್ಟಡಗಳಿವೆ ಎಂಬುದರ ಕುರಿತು ನಾವು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದು ಕರ್ವಾಲ್ ಹೇಳಿದರು.

ಮಧ್ಯಪ್ರಾಚ್ಯ ರಾಷ್ಟ್ರಗಳಾದ ಟರ್ಕಿ ಮತ್ತು ಸಿರಿಯಾದಲ್ಲಿ ನಿನ್ನೆ ಮುಂಜಾವು 3 ಗಂಟೆ ಸುಮಾರಿನಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, 5 ಸಾವಿರ ಜನರು ಸಮಾಧಿಯಾಗಿದ್ದಾರೆ. ಅವಶೇಷಗಳಡಿ ಜನರು ಸಿಲುಕಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 24 ಗಂಟೆಯಲ್ಲಿ ತ್ರಿವಳಿ ಪ್ರಬಲ ಭೂಕಂಪನದಿಂದಾಗಿ ಛಿದ್ರವಾಗಿರುವ ಸಿರಿಯಾ, ಟರ್ಕಿಯಲ್ಲಿ ಸಾವು ರಣಕೇಕೆ ಹಾಕಿದೆ. ಸಾವಿರಾರು ಕಟ್ಟಡಗಳು ಧರಾಶಾಯಿಯಾಗಿವೆ.

ಭೂಕಂಪನದಿಂದ ತತ್ತರಿಸಿದ ಪ್ರದೇಶಗಳು: ಕಹ್ರಮನ್ಮರಸ್, ಗಾಜಿಯಾಂಟೆಪ್, ಸ್ಯಾನ್ಲಿಯುರ್ಫಾ, ದಿಯಾರ್ಬಕಿರ್, ಅದಾನ, ಅಡಿಯಾಮಾನ್, ಮಲಾತ್ಯ, ಉಸ್ಮಾನಿಯ, ಹಟೇ ಮತ್ತು ಕಿಲಿಸ್ ಸೇರಿದಂತೆ ಟರ್ಕಿಯ 10 ಪ್ರಾಂತ್ಯಗಳು, ಸಿರಿಯಾದ ಉತ್ತರ ಅಲೆಪ್ಪೊ, ಹಮಾ, ಲಟಾಕಿಯಾ ಮತ್ತು ಟಾರ್ಟಸ್ ಪೀಡಿತ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಟರ್ಕಿ, ಸಿರಿಯಾ ಮಾತ್ರವಲ್ಲದೇ, ಲೆಬನಾನ್​, ಜೋರ್ಡಾನ್​, ಇರಾಕ್​, ಜಾರ್ಜಿಯಾ, ಸೈಪ್ರೆಸ್​, ಆರ್ಮೆನಿಯಾ ದೇಶಗಳಲ್ಲೂ ಭೂಕಂಪನದ ಅನುಭವವಾಗಿದೆ.

ಓದಿ: ಸಿರಿಯಾ, ಟರ್ಕಿ ಭೂಕಂಪದಲ್ಲಿ 5000 ಜನರು ಸಜೀವ ಸಮಾಧಿ: 7 ದಿನ ರಾಷ್ಟ್ರೀಯ ಶೋಕಾಚರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.