ವಾಷಿಂಗ್ಟನ್: ಐಸಿಸ್ ಉಗ್ರ ಸಂಘಟನೆಯ ಸಂಸ್ಥಾಪಕ ಅಲ್ ಬಗ್ದಾದಿ ಹತ್ಯೆಯ ಸೇನಾ ಕಾರ್ಯಾಚರಣೆ ವಿಡಿಯೋ ದೃಶ್ಯಾವಳಿಗಳನ್ನು ಅಮೆರಿಕದ ಕೇಂದ್ರ ಭದ್ರತಾ ಇಲಾಖೆ ಬಿಡುಗಡೆ ಮಾಡಿದೆ
ಇದಕ್ಕೂ ಮೊದಲು ಮೂರು - ನಾಲ್ಕು ಬಾರಿ ಬಗ್ದಾದಿ ಸತ್ತಿದ್ದ ಎಂಬ ಸುದ್ದಿಗಳು ಹರಿದಾಡಿದ್ದವು. ಬಳಿಕ ಆತ ಬದುಕಿದ್ದಾನೆ ಎಂಬುದೂ ಸಾಬೀತಾಗಿತ್ತು. ಹೀಗಾಗಿ, ಆತ ಹತನಾಗಿದ್ದಾನೆ ಎಂದು ಹೇಗೆ ನಂಬುವುದು? ಆತ ಸತ್ತಿದ್ದಾನೆ ಎಂಬುದರ ಕಾರ್ಯಚರಣೆಗೆ ಯಾವ ಸಾಕ್ಷಿ ಇದೆ ಎಂದೂ ಸಹ ಹಲವರು ಪ್ರಶ್ನಿಸಿದ್ದರು. ಈ ಎಲ್ಲ ಅನುಮಾನ, ಪ್ರಶ್ನೆಗಳಿಗೆ ಸಾಕ್ಷಿ ನೀಡಿದ ಅಮೆರಿಕ, ಇದೀಗ ಕಾರ್ಯಾಚರಣೆಯ 10 ಸೆಕೆಂಡ್ಗಳ ವಿಡಿಯೋ ಬಿಡುಗಡೆ ಮಾಡಿದೆ.
-
"...at the compound, fighters from two locations in the vicinity of the compound began firing on U.S. aircraft participating in the assault."
— U.S. Central Command (@CENTCOM) October 30, 2019 " class="align-text-top noRightClick twitterSection" data="
- Gen Frank McKenzie CDR USCENTCOM pic.twitter.com/SkrtHNDs7w
">"...at the compound, fighters from two locations in the vicinity of the compound began firing on U.S. aircraft participating in the assault."
— U.S. Central Command (@CENTCOM) October 30, 2019
- Gen Frank McKenzie CDR USCENTCOM pic.twitter.com/SkrtHNDs7w"...at the compound, fighters from two locations in the vicinity of the compound began firing on U.S. aircraft participating in the assault."
— U.S. Central Command (@CENTCOM) October 30, 2019
- Gen Frank McKenzie CDR USCENTCOM pic.twitter.com/SkrtHNDs7w
ಬ್ಲ್ಯಾಕ್ ಆ್ಯಂಡ್ ವೈಟ್ನ 10 ಸೆಕೆಂಡ್ಗಳ ವಿಡಿಯೋದಲ್ಲಿ ಅಮೆರಿಕ ಸೈನಿಕರು ಬಗ್ದಾದಿ ಇರುವ ನೆಲೆ ಮೇಲೆ ಮುತ್ತಿಗೆ ಹಾಕುತ್ತಿರುವ ಡ್ರೋಣ್ ಸೆರೆ ಹಿಡಿದ ದೃಶ್ಯಾವಳಿಗಳನ್ನು ಕಾಣಬಹುದು. ಸುರಂಗದೊಳಗೆ ಅವಿತಿದ್ದ ಬಗ್ದಾದಿ ಅಮೆರಿಕ ಸೇನೆಯ ನಾಯಿಗಳು ಅಟ್ಟಿಸಿಕೊಂಡು ಬಂದ ಪರಿಣಾಮ ಭಯಗೊಂಡು ತನ್ನ ಮೈಗೆ ಅಂಟಿಸಿಕೊಂಡಿದ್ದ ಆತ್ಮಹತ್ಯಾ ಬಾಂಬ್ ಅನ್ನು ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದ. ಬಗ್ದಾದಿ, ತನ್ನ ಮೂವರು ಮಕ್ಕಳೊಂದಿಗೆ ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಡಿಎನ್‌ಎ ಮಾದರಿ ಪಡೆದು, ಸತ್ತಿರುವುದು ಹಾಗೂ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡಿರುವುದು ಬಗ್ದಾದಿ ಶವ ಎಂದು ಅಮೆರಿಕ ಸೇನೆ ಖಚಿತಪಡಿಸಿಕೊಂಡಿದೆ.