ಗಾಜಾ (ಪ್ಯಾಲೆಸ್ತೀನ್): ಈಗಾಗಲೇ ಅನೇಕ ಕಟ್ಟಡಗಳು ಇಸ್ರೇಲ್ - ಪ್ಯಾಲೆಸ್ತೀನ್ ವೈಮಾನಿಕ ದಾಳಿಯಲ್ಲಿ ನೆಲಸಮವಾಗಿದ್ದು, ಸ್ವಲ್ಪ ಅಂತರದಲ್ಲಿ ಅಸೋಸಿಯೇಟೆಡ್ ಪ್ರೆಸ್ (ಎಪಿ) ಬ್ಯೂರೋ ದಾಳಿಯಿಂದ ಪಾರಾಗಿದೆ.
ನಿನ್ನೆ ಸಂಜೆ ಗಾಜಾದಲ್ಲಿರುವ ಅಮೆರಿಕದ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಕಚೇರಿಯ ಕೆಲವೇ ಮೀಟರ್ ದೂರದಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ದಕ್ಕೆ ಎಪಿ ಸಿಬ್ಬಂದಿ ಹೌಹಾರಿದ್ದಾರೆ.
ಇದನ್ನೂ ಓದಿ: WATCH: ಕಣ್ಣ ಮುಂದೆ ಬಾಂಬ್ ದಾಳಿ ನಡೆಯುತ್ತಿದ್ದಂತೆ ವರದಿ ಮಾಡಿದ ಪತ್ರಕರ್ತೆ
ಇಸ್ರೇಲ್ ಮಿಲಿಟರಿ ಪಡೆ ಹಾಗೂ ಪ್ಯಾಲೆಸ್ತೀನ್ನ ಹಮಾಸ್ ಬಂಡುಕೋರರ ನಡುವಿನ ಸಂಘರ್ಷದಲ್ಲಿ 19 ಮಕ್ಕಳು, ಗಾಜಾ ಕಮಾಂಡರ್ ಸೇರಿ ಪ್ಯಾಲೆಸ್ತೀನ್ನ ಸುಮಾರು 69 ಮಂದಿ ಮೃತಪಟ್ಟಿದ್ದು, ಇಸ್ರೇಲ್ನಲ್ಲಿ 7 ಜನರು ಬಲಿಯಾಗಿದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿ: ಇಸ್ರೇಲ್ ಮೇಲೆ ಪ್ಯಾಲೇಸ್ತೀನ್ ದಾಳಿ..ಆಕಾಶದಲ್ಲೇ ಅಪ್ಪಚ್ಚಿಯಾದ ಎದುರಾಳಿ ದೇಶದ ರಾಕೆಟ್, ಕ್ಷಿಪಣಿ
ಇಸ್ರೇಲ್ನ ಜೆರುಸಲೇಂನಲ್ಲಿರುವ ಅಲ್-ಅಕ್ಸಾ ಮಸೀದಿಯು ಮುಸ್ಲಿಂರು ಹಾಗೂ ಯಹೂದಿಗಳಿಗೆ ಪವಿತ್ರವಾದ ಸ್ಥಳವಾಗಿದ್ದು, ಮಸೀದಿ ಜಾರಿ ವಿಚಾರವಾಗಿ ಅನೇಕ ವರ್ಷಗಳಿಂದ ಉಭಯ ರಾಷ್ಟ್ರಗಳ ನಡುವೆ ಗಲಾಟೆ ನಡೆಯುತ್ತಲೇ ಬಂದಿದೆ. ಈದ್ ಹಬ್ಬದ ಸಂದರ್ಭದಲ್ಲೀಗ ಇದೇ ವಿಚಾರ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ಯುದ್ಧರೂಪ ಪಡೆಯುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೇ 14ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಸಂಬಂಧ ತುರ್ತು ಸಭೆ ನಡೆಸಲಿದೆ.