ETV Bharat / international

ಬ್ರಿಟನ್‌ನಲ್ಲಿ ಮತ್ತೆ ಕೊರೊನಾ ಅಲೆ: 22,915 ಜನರಿಗೆ ಪಾಸಿಟಿವ್​, 501 ಮಂದಿ ಬಲಿ

ಯುಕೆಯಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತ ಸಾಗುತ್ತಿದೆ. ಹೊಸದಾಗಿ 22,915 ಜನರಲ್ಲಿ ಕೋವಿಡ್​ ಪಾಸಿಟಿವ್​ ಕಂಡುಬಂದಿದೆ.

uk-records-another-22915-coronavirus-cases-with-501-deaths
ಬ್ರಿಟನ್‌ನಲ್ಲಿ ಮತ್ತೆ ಕೊರೊನಾ ಅಲೆ
author img

By

Published : Nov 20, 2020, 5:06 AM IST

ಲಂಡನ್ : ಬ್ರಿಟನ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತ ಸಾಗುತ್ತಿದೆ. ಗುರುವಾರ 22,915 ಜನರಲ್ಲಿ ಕೋವಿಡ್​ ಪಾಸಿಟಿವ್​ ದೃಢಪಟ್ಟಿದ್ದು, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,453,256ಕ್ಕೆ ಏರಿಕೆಯಾಗಿದೆ.

ಅಲ್ಲದೆ ವೈರಸ್​ನಿಂದ 501 ಜನರು ಸಾವಿಗೀಡಾಗಿದ್ದು, ಒಟ್ಟೂ ಸಾವಿನ ಸಂಖ್ಯೆ 53,775ಕ್ಕೆ ತಲುಪಿದೆ ಎಂದು ಡೇಟಾ ತೋರಿಸಿದೆ. ಪ್ರಕರಣಗಳು ಜಾಸ್ತಿಯಾಗಲು ಸೂಪರ್ಮಾರ್ಕೆಟ್​ಗಳು ಪ್ರಮುಖ ಕಾರಣವಾಗಿದೆ ಎಂಬುದು ಇಂಗ್ಲೆಂಡ್​ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ದೇಶದಲ್ಲಿ ಡಿ. 2ರವರೆಗೆ ಒಂದು ತಿಂಗಳ ಲಾಕ್​ಡೌನ್​ ಜಾರಿಯಲ್ಲಿದೆ. ಕೊರೊನಾ ವೈರಸ್​ ಬಂದ ಮೇಲೆ ಎರಡನೇ ಬಾರಿಗೆ ಲಾಕ್​ಡೌನ್​ ಮಾಡಲಾಗಿದೆ. ಈ ಸಮಯದಲ್ಲಿ, ಸೂಪರ್‌ಮಾರ್ಕೆಟ್‌ಗಳು ಮತ್ತು ಶಾಲೆಗಳು ತೆರೆದಿರಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.