ಲಂಡನ್/ಯುಕೆ : ಬ್ರಿಟನ್ನಲ್ಲಿ ಗುರುವಾರ ಒಟ್ಟು 13,494 ಜನರಲ್ಲಿ ಕೋವಿಡ್ ಸೋಂಕು ಪ್ರಕರಣ ದೃಢಪಟ್ಟಿವೆ. ಒಟ್ಟು ಸೋಂಕಿತರ ಸಂಖ್ಯೆ 3,998,655 ಆಗಿದೆ. ಹಾಗೆಯೇ 678 ಜನ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಈವರೆಗೆ ಕೊರೊನಾ ವೈರಸ್ನಿಂದ ಸತ್ತವರ ಸಂಖ್ಯೆ 115,529ಕ್ಕೇರಿದೆ. ಈ ಸಾವಿನ ಸಂಖ್ಯೆ ಕೇವಲ ಪಾಸಿಟಿವ್ ದೃಢಪಟ್ಟ 28 ದಿನಗಳೊಳಗೆ ಮೃತಪಟ್ಟವರನ್ನು ಮಾತ್ರ ಒಳಗೊಂಡಿದೆ ಎಂದು ನ್ಯೂಸ್ ಏಜೆನ್ಸಿಯೊಂದು ತಿಳಿಸಿದೆ.
ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ಸೋಂಕಿತರ ಸಂಖ್ಯೆ ಕೊಂಚ ಇಳಿಮುಖವಾಗುತ್ತಿದೆ ಎಂಬ ಸಮಾಧಾನಕರ ಸಂಗತಿಯೊಂದು ಲಭ್ಯವಿರುವ ಡೇಟಾದಿಂದ ಹೊರ ಬಿದ್ದಿದೆ. ಪಿಹೆಚ್ಇ( Public Health England ) ಬಿಡುಗಡೆ ಮಾಡಿದ ವಾರದ ವರದಿ ಪ್ರಕಾರ ವೆಸ್ಟ್ ಮಿಡ್ಲ್ಯಾಂಡ್ಸ್ನಲ್ಲಿ ಅತೀ ಹೆಚ್ಚು ಜನ ಸೋಂಕಿಗೆ ಒಳಗಾಗಿದ್ದಾರೆ. 7 ದಿನಗಳಲ್ಲಿ 100,000ರಷ್ಟು ಜನರಲ್ಲಿ ಸೋಂಕು ತಗುಲುವಿಕೆಯ ಪ್ರಮಾಣ 237.6 ಆಗಿದೆ.
ಕಳೆದ ವಾರ ಈ ಪ್ರಮಾಣ 326.8 ರಷ್ಟಿತ್ತು. 30-39 ವರ್ಷದವರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಬಾಧಿಸಿದೆ. ಪಿಎಚ್ಇ, ಸೋಂಕು ತಗುಲುವಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದೆ. ಕೊರೊನಾ ನಿಯಂತ್ರಿಸಲು ವ್ಯಾಕ್ಸಿನ್ ನೀಡುವ ಪ್ರಕ್ರಿಯೆಯನ್ನ ದೇಶಾದ್ಯಂತ ಚುರುಕುಗೊಳಿಸಲಾಗುತ್ತಿದೆ. ಈಗಾಗಲೇ ಬ್ರಿಟನ್ನಲ್ಲಿ 13.5 ದಶಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ.
ಮೂಲಗಳ ಪ್ರಕಾರ ಫೆಬ್ರವರಿ ಮಧ್ಯದ ವೇಳೆಗೆ 15 ಮಿಲಿಯನ್ ಜನರನ್ನು ವ್ಯಾಕ್ಸಿನೇಷನ್ಗೆ ಒಳಪಡಿಸುವ ಗುರಿಯನ್ನು ಯುಕೆ ಹೊಂದಿದೆ. ಮೊದಲ ಹಂತದಲ್ಲಿ 50 ವರ್ಷಕ್ಕಿಂತ ಹೆಚ್ಚಿನ ವಯಸ್ಕರಿಗೆ ಲಸಿಕೆ ನೀಡಲಾಗುತ್ತಿದೆ. ಚಳಿಗಾಲದ ವೇಳೆಗೆ ಎಲ್ಲಾ ವಯಸ್ಕರಿಗೆ ಕೊರೊನಾ ಲಸಿಕೆ ನೀಡುವ ಯೋಜನೆ ಹಾಕಿಕೊಂಡಿದೆ. ಸದ್ಯ ಇಂಗ್ಲೆಂಡ್ನಲ್ಲಿ 3 ನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು, ಸ್ಕಾಟ್ಲ್ಯಾಂಡ್, ವೇಲ್ಸ್ ಮತ್ತು ನಾರ್ಥನ್ ಐಲ್ಯಾಂಡ್ನಲ್ಲಿ ಕೊರೊನಾ ನಿರ್ಬಂಧಗಳು ಮುಂದುವರಿಯುತ್ತಿವೆ.
ಇದನ್ನೂ ಓದಿ:ರಾಯಚೂರಲ್ಲಿ ಮದ್ಯ ನಿಷೇಧ ಆಂದೋಲನ: ಮಹಿಳಾ ಹೋರಾಟಗಾರರ ಜತೆ ಪೊಲೀಸರ ವಾಗ್ವಾದ