ಲಂಡನ್: ಕಳೆದ ವರ್ಷದ ಜುಲೈ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಸೋಮವಾರ ಒಬ್ಬರೂ ಕೂಡ ಕೋವಿಡ್ಗೆ ಬಲಿಯಾಗಿಲ್ಲ.
ಯುಕೆ ಆರೋಗ್ಯ ಅಧಿಕಾರಿಗಳ ಪ್ರಕಾರ, ಯುನೈಟೆಡ್ ಕಿಂಗ್ಡಮ್ನಲ್ಲಿ ಮೇ 10 ರಂದು 2,357 ಹೊಸ ಪ್ರಕರಣಗಳು ಮತ್ತು 4 ಸಾವುಗಳು ವರದಿಯಾಗಿವೆ. ಮೃತಪಟ್ಟ ಈ ನಾಲ್ಕೂ ಸೋಂಕಿತರು ವೇಲ್ಸ್ನವರು. ಆದರೆ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
ಯುನೈಟೆಡ್ ಕಿಂಗ್ಡಮ್ನಲ್ಲಿ ಕೊರೊನಾ ಸಾವು-ನೋವಿನಲ್ಲಿ ಭಾರಿ ಇಳಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿರುವ ಇಂಗ್ಲೆಂಡ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಪ್ರೊಫೆಸರ್ ಕ್ರಿಸ್ ವಿಟ್ಟಿ, ಸಾರ್ವಜನಿಕರು, ಅಧಿಕಾರಿಗಳು ಮತ್ತು ವ್ಯಾಕ್ಸಿನೇಷನ್ ಕಾರ್ಯಕ್ರಮದ ಪ್ರಯತ್ನಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ವೈದ್ಯಕೀಯ ಮೂಲಸೌಕರ್ಯ ಕೊರತೆ; ಯಾವ ರಾಜ್ಯದ ಸ್ಥಿತಿ ಹೇಗಿದೆ?
"ವೈರಸ್ ಪ್ರಮಾಣ ಹೆಚ್ಚುತ್ತಿಲ್ಲ, ಆದರೂ ಅದು ನಮ್ಮೊಂದಿಗೆ ಇದೆ. ಜಾಗತಿಕ ಸಾಂಕ್ರಾಮಿಕವಾಗಿ ಉಳಿದಿದೆ". ಹೀಗಾಗಿ ಇದೇ ಜಾಗರೂಕತೆ ಮುಂದುವರೆಸುವಂತೆ ದೇಶದ ಜನತೆಗೆ ಕ್ರಿಸ್ ವಿಟ್ಟಿ ಕರೆ ನೀಡಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರ, ಯುಕೆನಲ್ಲಿ ಈವರೆಗೆ 44,50,578 ಪ್ರಕರಣಗಳು ಹಾಗೂ 1,27,865 ಸಾವು ದಾಖಲಾಗಿದೆ. 35 ಮಿಲಿಯನ್ ಜನರು ವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದು, 18 ಮಿಲಿಯನ್ ಮಂದಿ ಎರಡೂ ಡೋಸ್ಗಳನ್ನು ಹಾಕಿಸಿಕೊಂಡಿದ್ದಾರೆ.