ಬ್ರಿಟನ್: ಮಹಾಮಾರಿ ಕೊರೊನಾ ವೈರಸ್ ಹಾವಳಿ ಪ್ರಪಂಚದಲ್ಲಿ ಕಡಿಮೆಯಾಗುವ ಯಾವುದೇ ಮುನ್ಸೂಚನೆ ಕಾಣಿಸುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಬ್ರಿಟನ್ನಲ್ಲಿ ಹೊಸದಾಗಿ ದಾಖಲೆಯ 88,376 ಪ್ರಕರಣ ದಾಖಲಾಗಿವೆ.
ಬ್ರಿಟಿಷ್ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಇದೀಗ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 11.1 ಮಿಲಿಯನ್ಗೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 88,376 ಕೋವಿಡ್ ಪ್ರಕರಣ ಕಾಣಿಸಿಕೊಂಡಿವೆ ಎಂದು ತಿಳಿಸಿದೆ. ಇದರ ಜೊತೆಗೆ ಒಂದೇ ದಿನದಲ್ಲಿ 147 ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಅಮೆರಿಕ, ಇಂಗ್ಲೆಂಡ್ನಲ್ಲಿ ಒಮಿಕ್ರಾನ್ ಭೀತಿ
ಈಗಾಗಲೇ 77ಕ್ಕೂ ಅಧಿಕ ದೇಶಗಳಲ್ಲಿ ಕೋವಿಡ್ನ ರೂಪಾಂತರ ಸೋಂಕು ಒಮಿಕ್ರಾನ್ ದೃಢಗೊಂಡಿದ್ದು, ಅಮೆರಿಕ ಹಾಗೂ ಇಂಗ್ಲೆಂಡ್ನಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ. ಅಮೆರಿಕದ 36 ರಾಜ್ಯಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಪ್ರಮುಖವಾಗಿ ನ್ಯೂ ಹ್ಯಾಂಪ್ಶೈರ್, ಮಿಚಿಗನ್, ಮಿನೆಸೊಟಾಗಳಲ್ಲಿ ಅಧಿಕ ಪ್ರಕರಣ ದಾಖಲಾಗಿವೆ. ಇಂಗ್ಲೆಂಡ್ನಲ್ಲೂ ಒಮಿಕ್ರಾನ್ ಸೋಂಕಿತ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅಲ್ಲಿನ ಸರ್ಕಾರದ ನಿದ್ದೆಗೆಡಿಸಿದೆ.