ETV Bharat / international

ವಿಶ್ವ ಪರಿಸರ ದಿನ.. ಈ ವರ್ಷದ ಆತಿಥೇಯ ರಾಷ್ಟ್ರ ಪಾಕ್​..! - ವಿಶ್ವ ಪರಿಸರ ದಿನದ ಮಹತ್ವ

ಪ್ರಕೃತಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಪ್ರತಿ ವರ್ಷ ಜೂನ್ 5 ರಂದು ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ. 1974 ರಲ್ಲಿ ಅಮೆರಿಕದಲ್ಲಿ ‘ಓನ್ಲಿ ಒನ್ ಅರ್ಥ್’ (ಒಂದೇ ಒಂದು ಭೂಮಿ) ಎಂಬ ಧ್ಯೇಯ ವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ ಜಗತ್ತಿನ ಬಹುತೇಕ ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತಾ ಬರುತ್ತಿವೆ.

ಈ ವರ್ಷದ ಅತಿಥೇಯ ರಾಷ್ಟ್ರ ಪಾಕ್
ಈ ವರ್ಷದ ಅತಿಥೇಯ ರಾಷ್ಟ್ರ ಪಾಕ್
author img

By

Published : Jun 5, 2021, 6:06 AM IST

ಪ್ರಕೃತಿಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು, ಪರಿಸರ ರಕ್ಷಣೆಯಲ್ಲಿ ಸರ್ಕಾರಗಳನ್ನು, ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಸಲುವಾಗಿ ಜೂನ್ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ಕೋವಿಡ್ ಇಡೀ ಜಗತ್ತನ್ನೇ ಆವರಿಸಿಕೊಂಡಿರುವಾಗ ಭೂಮಿಯು ತನ್ನ ಸ್ವತ್ತನ್ನು ಮರಳಿ ಪಡೆಯಲು ಯತ್ನಿಸುತ್ತಿದೆ.

‘ಈ ವರ್ಷದ ಗುರಿ’

2021ರ ಪರಿಸರ ದಿನಾಚರಣೆಯಲ್ಲಿ ‘ಪರಿಸರ ವ್ಯವಸ್ಥೆಯನ್ನು ಪುನರ್​ಸ್ಥಾಪಿಸುವುದು’. ಅಂದರೆ, ಮಾನವನ ಅತಿಯಾಸೆಗೆ ಅರಣ್ಯಗಳು ಅಳಿವಿನಂಚಿನಲ್ಲಿವೆ. ಹಾಗಾಗಿ ಎಲ್ಲರೂ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಕೈ ಜೋಡಿಸಬೇಕಿದೆ. 2021ರಲ್ಲಿ ಪಾಕಿಸ್ತಾನವನ್ನು ವಿಶ್ವ ಪರಿಸರ ದಿನದ ಆತಿಥೇಯ ರಾಷ್ಟ್ರವೆಂದು ಪರಿಗಣಿಸಲಾಗಿದೆ. ಹಾನಿಗೊಳಗಾಗಿರುವ ಪರಿಸರವನ್ನು ಪುನರುಜ್ಜೀವನಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಪಾಕ್ ಕರೆ ನೀಡಿದೆ.

ವಿಶ್ವ ಪರಿಸರ ದಿನದ ಇತಿಹಾಸ

ಪ್ರಕೃತಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಪ್ರತಿ ವರ್ಷ ಜೂನ್ 5 ರಂದು ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ. 1974 ರಲ್ಲಿ ಅಮೆರಿಕದಲ್ಲಿ ‘ಓನ್ಲಿ ಒನ್ ಅರ್ಥ್’ (ಒಂದೇ ಒಂದು ಭೂಮಿ) ಎಂಬ ಧ್ಯೇಯ ವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ ಜಗತ್ತಿನ ಬಹುತೇಕ ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತಿವೆ.

ಈ ದಿನದ ಮಹತ್ವ

ಪರಿಸರ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಪ್ರಕೃತಿಯನ್ನು ಯಾರೂ ಲಘುವಾಗಿ ಪರಿಗಣಿಸಬಾರದು ಎಂದು ಜನರಿಗೆ ನೆನಪಿಸುವುದು ಇದರ ಉದ್ದೇಶ.

ವಿಶ್ವ ಸಂಸ್ಥೆಯ ಪ್ರಕಾರ, ಪರಿಸರವನ್ನು ಸಂರಕ್ಷಿಸುವಲ್ಲಿ ಜನರ ಅಭಿಪ್ರಾಯ ಮತ್ತು ಜವಾಬ್ದಾರಿಯುತ ನಡವಳಿಕೆ ಮುಖ್ಯ. ಪ್ರಕೃತಿ ನೀಡಿರುವ ಪ್ರತಿಯೊಂದನ್ನು ಗೌರವಿಸುವುದು, ರಕ್ಷಿಸುವುದು ನಮ್ಮ ಹೊಣೆ.

ಪರಿಸರ ವ್ಯವಸ್ಥೆ ಪುನಃಸ್ಥಾಪನೆ ಎಂದರೇನು?

ಅವನತಿ ಹೊಂದಿದ ಅಥವಾ ನಾಶವಾದ ಪರಿಸರದ ಚೇತರಿಕೆಗೆ ಸಹಾಯ ಮಾಡುವುದೇ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ. ಗಿಡಗಳನ್ನು ನೆಡುವುದು, ಈಗಾಗಲೇ ನೆಟ್ಟಿರುವ ಸಸಿಗಳಿಗೆ ನೀರೆರೆಯುವುದು ಇದರ ಒಂದು ಭಾಗ.

ಜಾಗತಿಕವಾಗಿ 2030 ರೊಳಗೆ ಅಂದಾಜು 350 ದಶಲಕ್ಷ ಹೆಕ್ಟೇರ್ ಪರಿಸರ ಪುನರ್​​ ನಿರ್ಮಿಸುವುದು ವಿಶ್ವಸಂಸ್ಥೆಯ ಪ್ರಮುಖ ಉದ್ದೇಶ. ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯಿಂದ ಜನರಿಗೆ ಉದ್ಯೋಗ ದೊರೆಯುವುದರ ಜತೆಗೆ ಆಹಾರ, ಶುದ್ಧನೀರು, ಗಾಳಿಯೂ ಲಭಿಸುತ್ತದೆ. ಪರಿಸರ ಪುನಃಸ್ಥಾಪನೆಗೆ ಹೂಡಿಕೆ ಮಾಡಿದ ಪ್ರತಿ ಡಾಲರ್‌ಗೆ ಕನಿಷ್ಠ 7 ರಿಂದ 30 ಡಾಲರ್ ಆದಾಯವನ್ನು ನಿರೀಕ್ಷಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.