ETV Bharat / international

ಮಾಂತ್ರಿಕ ತಯಾರಿಸಿದ 'ಕೋವಿಡ್ ಲಸಿಕೆ' ಸೇವಿಸಿ ಕೊರೊನಾ ಸೋಂಕಿಗೊಳಗಾದ ಲಂಕಾ ಸಚಿವೆ! - ಶ್ರೀಲಂಕಾದಲ್ಲಿ ಮಾಂತ್ರಿಕ ಕೊರೊನಾ ಲಸಿಕೆ

ಶ್ರೀಲಂಕಾದಲ್ಲಿ ಮಾಂತ್ರಿಕನೋರ್ವ ತಯಾರು ಮಾಡಿದ್ದ ಕೋವಿಡ್ ಲಸಿಕೆ ಸೇವನೆ ಮಾಡಿದ್ದ ಆರೋಗ್ಯ ಸಚಿವೆ ಪವಿತ್ರಾ ವನ್ನಿಯಾರಾಚಿ ತೆಗೆದುಕೊಂಡಿದ್ದರು.

Sri Lanka’s Health Minister
Sri Lanka’s Health Minister
author img

By

Published : Jan 24, 2021, 2:30 AM IST

ಕೊಲಂಬೊ: ಕೊರೊನಾ ವೈರಸ್​ಗೋಸ್ಕರ ಮಾಂತ್ರಿಕನೋರ್ವ ತಯಾರಿಸಿದ ಕೋವಿಡ್ ಲಸಿಕೆ ತೆಗೆದುಕೊಂಡಿರುವ ಶ್ರೀಲಂಕಾ ಆರೋಗ್ಯ ಸಚಿವೆ ಇದೀಗ ಸೋಂಕಿಗೊಳಗಾಗಿರುವ ಘಟನೆ ನಡೆದಿದೆ. ಇದರ ವಿರುದ್ಧ ಅನೇಕ ಟೀಕೆಗಳು ಕೇಳಿ ಬರುತ್ತಿವೆ.

ಓದಿ: ಲಡಾಕ್​ ಗಡಿ ವಿವಾದ: ಭಾರತ-ಚೀನಾ ನಡುವೆ ಇಂದು 9ನೇ ಸುತ್ತಿನ ಮಾತುಕತೆ!

ಶ್ರೀಲಂಕಾ ರಾಜಧಾನಿ ಕೊಲಂಬೊದ ಈಶಾನ್ಯ ಕೆಗಾಲೆ ಪಟ್ಟಣದಲ್ಲಿ ಡಿಸೆಂಬರ್ ತಿಂಗಳಲ್ಲಿ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ಈ ಲಸಿಕೆ ತೆಗೆದುಕೊಂಡಿದ್ದು, ಇದರ ಜತೆಗೆ ಅನೇಕ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕವಾಗಿ ಸೇವನೆ ಮಾಡಿದ್ದರು.

ಅಲ್ಲಿನ ಮಾಂತ್ರಿಕನೋರ್ವ ಗಿಡಮೂಲಿಕೆಯಿಂದ ಸಿರಪ್​ ತಯಾರಿಸಿದ್ದರು. ಇದನ್ನ ಅಲ್ಲಿನ ಆರೋಗ್ಯ ಸಚಿವೆ ಪವಿತ್ರಾ ವನ್ನಿಯಾರಾಚಿ ತೆಗೆದುಕೊಂಡಿದ್ದರು. ಆದರೆ ಇದೀಗ ಕೋವಿಡ್​-19 ಸೋಂಕಿಗೊಳಗಾಗಿದ್ದಾರೆ. ಜಾಜಿಕಾಯಿ ಹಾಗೂ ಜೇನುತುಪ್ಪ ಬಳಕೆ ಮಾಡಿ ಈ ಲಸಿಕೆ ಕಂಡು ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಭಾರತದಲ್ಲಿ ತಯಾರುಗೊಂಡಿರುವ ಕೊವಿಶೀಲ್ಡ್ ಲಸಿಕೆ ಶ್ರೀಲಂಕಾಗೆ ಜನವರಿ 27ರಂದು ತಲುಪಲಿದೆ.

ಲಂಕಾದಲ್ಲಿ 278 ಸಾವುಗಳೊಂದಿಗೆ 52,964 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.