ಕಾಬೂಲ್: ತಾಲಿಬಾನ್‌ಗಳು ಅಫ್ಘಾನಿಸ್ತಾವನ್ನು ವಶಕ್ಕೆ ಪಡೆದ ಮೂರು ವಾರಗಳ ಬಳಿಕ ಇದೀಗ ಅಲ್ಲಿನ ಪ್ರಜೆಗಳು ಬೀದಿಗಿಳಿದಿದ್ದು, ಅಫ್ಘಾನಿಸ್ತಾನದ ವ್ಯವಹಾರಗಳಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿರುವುದನ್ನು ವಿರೋಧಿಸಿ ಸಾವಿರಾರು ಮಂದಿ ಪಾಕ್ ರಾಯಭಾರ ಕಚೇರಿ ಬಳಿಕ ಪ್ರತಿಭಟನೆ ನಡೆಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಫ್ಘನ್ ಪ್ರತಿಭಟನಾಕರರು ಪಾಕಿಸ್ತಾನದ ಸಹವಾಸ ನಮಗೆ ಬೇಡ, ನಾವು ಪಾಕ್ ಕೈಗೊಂಬೆ ಆಗುವುದು ಬೇಡ, ಆಫ್ಘನ್‌ನಿಂದ ಪಾಕಿಸ್ತಾನಿಗಳೇ ತೊಲಗಿರಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ತಾಲಿಬಾನ್‌ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI), ಭಾರತದ ವಿರುದ್ಧ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸಲು ಕುಖ್ಯಾತವಾಗಿದೆ. ತಾಲಿಬಾನ್‌ನೊಂದಿಗೆ ಕೆಲಸ ಮಾಡುತ್ತಿದೆ. ಇದೀಗ ಅಮೆರಿಕ ನೇತೃತ್ವದ ಒಕ್ಕೂಟವು 20 ವರ್ಷಗಳ ಕಾಲ ಯುದ್ಧ ಮಾಡಿದ ದೇಶದಲ್ಲಿ ಹೊಸ ಸರ್ಕಾರಕ್ಕೆ ಅಡಿಪಾಯ ಹಾಕುತ್ತಿದೆ ಎನ್ನಲಾಗಿದೆ.
ಐಎಸ್‌ಐ ಅನ್ನು ದೂರವಿರಿಸಿ ಎಂಬ ಭಿತ್ತಿಪತ್ರವನ್ನು ಪ್ರತಿಭಟನಾನಿರತ ಮಹಿಳೆಯೊಬ್ಬರು ಪ್ರದರ್ಶಿಸಿದರು. ಇಸ್ಲಾಮಿಕ್ ಸರ್ಕಾರವು ನಮ್ಮ ಬಡ ಜನರ ಮೇಲೆ ಗುಂಡು ಹಾರಿಸುತ್ತಿದೆ ಎಂದು ಹೇಳಿರುವ ಮಹಿಳೆಯೊಬ್ಬರು ಬೀದಿಯಲ್ಲಿ ಗುಂಡಿನ ಸದ್ದು ಕೇಳಿಸುತ್ತಿರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಜನರು (ತಾಲಿಬಾನ್) ತುಂಬಾ ಕ್ರೂರಿಗಳು, ಅವರು ಮನುಷ್ಯರಲ್ಲ ಎಂದಿದ್ದಾರೆ.
-
سلګونه کسانو نن په کابل کې د پاکستان سفارت مخې ته لاریون کړی او د پاکستان خلاف شعارونه یې ورکړي.#طلوعنیوز pic.twitter.com/0EgDK6PYTc
— TOLOnews (@TOLOnews) September 7, 2021 " class="align-text-top noRightClick twitterSection" data="
">سلګونه کسانو نن په کابل کې د پاکستان سفارت مخې ته لاریون کړی او د پاکستان خلاف شعارونه یې ورکړي.#طلوعنیوز pic.twitter.com/0EgDK6PYTc
— TOLOnews (@TOLOnews) September 7, 2021سلګونه کسانو نن په کابل کې د پاکستان سفارت مخې ته لاریون کړی او د پاکستان خلاف شعارونه یې ورکړي.#طلوعنیوز pic.twitter.com/0EgDK6PYTc
— TOLOnews (@TOLOnews) September 7, 2021
ಕೆಲ ಮೂಲಗಳ ಪ್ರಕಾರ ಪ್ರತಿಭಟನೆಗಳ ವರದಿ ಮಾಡುವ ಕೆಲವು ಪತ್ರಕರ್ತರನ್ನು ಬಂಧಿಸಲಾಗಿದೆ. ಪ್ರತಿಭಟನೆಯ ಚಿತ್ರೀಕರಣಕ್ಕಾಗಿ ತನ್ನ ಸಹೋದ್ಯೋಗಿ ವಹೀದ್ ಅಹ್ಮದಿಯನ್ನು ಕಾಬೂಲ್‌ನಲ್ಲಿ ತಾಲಿಬಾನ್ ಬಂಧಿಸಿದೆ ಎಂದು ಟೊಲೊ ನ್ಯೂಸ್ ಮುಖ್ಯಸ್ಥ ಲೊತ್‌ಫುಲ್ಲಾ ನಜಾಫಿಜಾಡಾ ಹೇಳಿದ್ದಾರೆ. ನಮ್ಮ ಸಹೋದ್ಯೋಗಿಯನ್ನು ಬಿಡುಗಡೆ ಮಾಡುವಂತೆ ನಾನು ತಾಲಿಬಾನ್‌ಗಳಿಗೆ ಕರೆ ನೀಡುತ್ತೇನೆ ಎಂದು ನಜಾಫಿಜಾಡಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಾಕ್ ಐಎಸ್‌ಐ ಮುಖ್ಯಸ್ಥನಿಂದ ಮುಲ್ಲಾ ಬರದಾರ್ ಭೇಟಿ: ದೃಢಪಡಿಸಿದ ತಾಲಿಬಾನ್