ಕಾಬೂಲ್ : ಕಳೆದ 6 ತಿಂಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಆಫ್ಘನ್ ನಿರಾಶ್ರಿತರು ದೇಶಕ್ಕೆ ಮರಳಿದ್ದಾರೆ ಎಂದು ತಾಲಿಬಾನ್ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಟೋರ್ಕಮ್ ಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ನಿರಾಶ್ರಿತರ ಮತ್ತು ವಾಪಸಾತಿ ಸಚಿವಾಲಯದ (ಎಂಆರ್‌ಆರ್) ಉಪ ಸಚಿವ ಮೊಹಮ್ಮದ್ ಅರ್ಸಲಾ ಖರೋಟೈ, ವಿದೇಶದಲ್ಲಿ ಬಂಧನದಲ್ಲಿರುವ ಆಫ್ಘನ್ನರ ಬಿಡುಗಡೆಗೆ ಅನುಕೂಲವಾಗುವಂತೆ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಸುಮಾರು 5,50,000 ಜನರು ನಮ್ಮೊಂದಿಗೆ ನೋಂದಾಯಿಸಿಕೊಂಡಿದ್ದಾರೆ. ಆದರೆ, ಅವರಲ್ಲಿ ಕೆಲವರು ನೋಂದಾಯಿಸದೆ ಇರುವುದರಿಂದ ಸಂಖ್ಯೆ ಹೆಚ್ಚಿರಬಹುದು ಎಂದು ಅವರು ಹೇಳಿದರು.
ಆಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯವನ್ನು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದೊಂದಿಗೆ ಸಂಪರ್ಕಿಸುವ ಗಡಿಯಲ್ಲಿ ಸಮಸ್ಯೆಗಳ ಬಗ್ಗೆ ನಾಗರಿಕರು ದೂರು ನೀಡಿದ ನಂತರ ಸಚಿವ ಮೊಹಮ್ಮದ್ ಅರ್ಸಲಾ ಖರೋಟೈ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಸಮಾಧಿಯಂತಾದ ಉಕ್ರೇನ್ಗೆ ಚೀನಾ ಸಹಾಯ ಮಾಡಲು ಸಿದ್ಧ : ಪ್ರಧಾನಿ ಲಿ ಕೆಕಿಯಾಂಗ್