ಟೋಕಿಯೊ (ಜಪಾನ್): ಕೊರೊನಾ ವೈರಸ್ನ ಹೊಸ ರೂಪಾಂತರಿ ಆಗಿರುವ 'ಒಮಿಕ್ರೋನ್' ಬಗ್ಗೆ ಜಗತ್ತಿನಾದ್ಯಂತ ಭೀತಿ ಎದುರಾಗಿದ್ದು, ಇದೀಗ ಜಪಾನ್ ಕೂಡ ಮೊದಲ ಪ್ರಕರಣವನ್ನು ದೃಢಪಡಿಸಿದೆ.
B.1.1.529 ಎಂದು ಕರೆಯಲ್ಪಡುವ ಹೊಸ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದು, ವಿಶ್ವಸಂಸ್ಥೆ ಅದಕ್ಕೆ 'ಒಮಿಕ್ರೋನ್' ಎಂದು ಹೆಸರಿಟ್ಟಿದೆ. ಬಳಿಕ ಈ ರೂಪಾಂತರಿ ಕೇಸ್ಗಳು ಆಸ್ಟ್ರೇಲಿಯಾ, ಇಟಲಿ, ಜರ್ಮನಿ, ನೆದರ್ಲ್ಯಾಂಡ್ಸ್, ,ಸ್ವಿಜರ್ಲ್ಯಾಂಡ್, ಕೆನಡಾ, ಬೆಲ್ಜಿಯಂ, ಬೋಟ್ಸ್ವಾನಾ, ಹಾಂಕಾಂಗ್, ಇಸ್ರೇಲ್ ಮತ್ತು ಬ್ರಿಟನ್ನಲ್ಲಿ ವರದಿಯಾಗಿವೆ. ಇದೀಗ ನಂಬಿಯಾದಿಂದ ಜಪಾನ್ನ ಟೋಕಿಯೋಗೆ ಬಂದಿದ್ದ 30 ವರ್ಷದ ವ್ಯಕ್ತಿಗೆ ಒಮಿಕ್ರೋನ್ ಅಂಟಿರುವುದು ತಿಳಿದು ಬಂದಿದೆ.
ಇದನ್ನೂ ಓದಿ: Omicron Scare: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ
ಒಮಿಕ್ರೋನ್, ಇದು ಮರುಸೋಂಕು, ಅಂದರೆ ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ. ಬಹಳ ವೇಗವಾಗಿ ಹರಡಬಹುದು ಹಾಗೂ ಎರಡು ಬಾರಿ ಲಸಿಕೆ ಹಾಕಿಸಿಕೊಂಡವರಿಗೂ ಅಂಟಬಹುದು ಎಂದು ಹೇಳಲಾಗಿದ್ದು, ಇದರ ವಿರುದ್ಧ ಪ್ರಸ್ತುತ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿಯೇ ಎಂದು ಸಂಶೋಧನೆ ನಡೆಸಲಾಗುತ್ತಿದೆ.