ETV Bharat / international

ಯುಎಸ್​ ಕೇಂದ್ರಿಯ ಬ್ಯಾಂಕ್​​​ನಲ್ಲಿದ್ದ ಅಫ್ಘನ್​ ಹಣ ತಾಲಿಬಾನ್​​ಗೆ ನೀಡಲು ಸಾಧ್ಯವಿಲ್ಲ : ಬೈಡನ್ ಸರ್ಕಾರ ಸ್ಪಷ್ಟನೆ

author img

By

Published : Aug 20, 2021, 5:25 PM IST

ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿದ ಬಳಿಕ ಸರ್ಕಾರದ ಸಚಿವರು ಪಲಾಯಾನ ಮಾಡಿದ್ದಾರೆ. ಈ ವೇಳೆ ದೇಶ ತೊರೆದ ಅಫ್ಘನ್​ನ ಮಾಜಿ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಅಜ್ಮಲ್ ಅಹ್ಮಾಡಿ, ಡಾ ಅಫ್ಘಾನಿಸ್ತಾನ ಬ್ಯಾಂಕ್​ನಲ್ಲಿ ಸುಮಾರು 9 ಬಿಲಿಯನ್ ಮೀಸಲು ಹಣವಿದೆ ಎಂದಿದ್ದರು..

us-will-not-be-made-any-assets-available-to-the-taliban
ಯುಎಸ್​ ಕೇಂದ್ರಿಯ ಬ್ಯಾಂಕ್​​​ನಲ್ಲಿದ್ದ ಅಫ್ಘನ್​ ಹಣ ತಾಲಿಬಾನ್​​ಗೆ ನೀಡಲು ಸಾಧ್ಯವಿಲ್ಲ

ನ್ಯೂಯಾರ್ಕ್​​​​​ (ಯುಎಸ್​​) : ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದೆ. ಈಗಾಗಲೇ ಕಾಬೂಲ್​​​ನಿಂದ ಹಿಡಿದು ಎಲ್ಲಾ ಸರ್ಕಾರಿ ಕಚೇರಿಗಳು ಸಹ ಅವರ ಹಿಡಿತದಲ್ಲಿದ್ದು, ಪಾರುಪತ್ಯ ಮೆರೆಯುತ್ತಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನ್​​ಗೆ ಸಿಗುತ್ತಿದ್ದ ಸೌಲಭ್ಯಗಳಿಗೆ ಕತ್ತರಿ ಬಿದ್ದಿದೆ. ಐಎಂಎಫ್​​ ಸಹ ಆರ್ಥಿಕ ನೆರವು ನೀಡುವುದಿಲ್ಲ ಎಂದು ಘೋಷಿಸಿದೆ.

ಈ ನಡುವೆ ಅಮೆರಿಕದ ಕೇಂದ್ರೀಯ ಬ್ಯಾಂಕ್​ನಲ್ಲಿ ಅಘ್ಫನ್ ಸರ್ಕಾರ ಹೊಂದಿದ್ದ ಸ್ವತ್ತುಗಳು ತಾಲಿಬಾನ್​​​ಗೆ ಲಭ್ಯವಾಗುವುದಿಲ್ಲ ಎಂದು ಬೈಡನ್ ಸರ್ಕಾರದ ಅಧಿಕಾರಿಯೊಬ್ಬರು ಬಿಬಿಸಿ ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ. ಡಾ. ಅಫ್ಘಾನಿಸ್ತಾನ ಬ್ಯಾಂಕ್ (DAB) ಸುಮಾರು 9 ಬಿಲಿಯನ್ ಡಾಲರ್ ನಷ್ಟು ಮೀಸಲುಗಳನ್ನು ಹೊಂದಿದೆ, ಅದರಲ್ಲಿ ಹೆಚ್ಚಿನವು ಅಮೆರಿಕದಲ್ಲಿವೆ.

ಆದರೆ, ಡಾಲರ್ ಬದಲಾವಣೆ, ಅಂತಾರಾಷ್ಟ್ರೀಯ ಸಾಲ ಮತ್ತು ಅನುದಾನ ಸಹ ತಾಲಿಬಾನ್​​​ಗೆ ಸಿಗುವುದು ಅನುಮಾನ ಎಂದಿದ್ದಾರೆ. ಅಲ್ಲದೆ ಅಫ್ಘನ್​ ಆರ್ಥಿಕತೆಗೆ ಮೂಗುದಾರ ಹಾಕಬೇಕಿದೆ ಎಂದು ಡಾ. ಅಫ್ಘಾನಿಸ್ತಾನ ಬ್ಯಾಂಕ್​​ನ ಮಾಜಿ ಗವರ್ನರ್ ಎಚ್ಚರಿಸಿದ್ದಾರೆ.

ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿದ ಬಳಿಕ ಸರ್ಕಾರದ ಸಚಿವರು ಪಲಾಯಾನ ಮಾಡಿದ್ದಾರೆ. ಈ ವೇಳೆ ದೇಶ ತೊರೆದ ಅಫ್ಘನ್​ನ ಮಾಜಿ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಅಜ್ಮಲ್ ಅಹ್ಮಾಡಿ, ಡಾ ಅಫ್ಘಾನಿಸ್ತಾನ ಬ್ಯಾಂಕ್​ನಲ್ಲಿ ಸುಮಾರು 9 ಬಿಲಿಯನ್ ಮೀಸಲು ಹಣವಿದೆ ಎಂದಿದ್ದರು.

ಇದು ತಾಲಿಬಾನ್​​​​ಗೆ ನೀಡುವುದು ಅಂತಾರಾಷ್ಟ್ರೀಯ ನಿಯಮದಲ್ಲಿಲ್ಲ. ಅಲ್ಲದೆ ಇಂತಹ ಹಣವನ್ನು ಬಹುತೇಕ ತಡೆ ಹಿಡಿಯಲಾಗುತ್ತದೆ. ಆದರೆ, ತಾಲಿಬಾನ್​​ಗೆ ಶೇ.0.1-0.2ರಷ್ಟು ಮಾತ್ರ ಹಣ ಮಾತ್ರ ಬಳಕೆಗೆ ನೀಡಬಹುದಿದೆ ಎಂದಿದ್ದಾರೆ. ಯುಎಸ್ ಅನುಮೋದನೆಯಿಲ್ಲದೆ, ಯಾವುದೇ ದಾನಿಗಳು ತಾಲಿಬಾನ್ ಸರ್ಕಾರವನ್ನು ಬೆಂಬಲಿಸುವ ಸಾಧ್ಯತೆಯೂ ಇಲ್ಲ ಎಂದಿದ್ದಾರೆ. ಈ ನಡುವೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಡಿಎಬಿಗೆ ನೀಡಲು ಇಚ್ಛಿಸಿದ್ದ 450 ಮಿಲಿಯನ್ ಸಾಲವನ್ನು ನೀಡದಿರಲು ಈಗಾಗಲೇ ನಿರ್ಧರಿಸಿದೆ.

ಓದಿ: ಭಾರತೀಯ ಕಾನ್ಸುಲೇಟ್​ ಕಚೇರಿಗಳಿಗೆ ನುಗ್ಗಿ ಕಾರುಗಳನ್ನ ಹೊತ್ತೊಯ್ದ ತಾಲಿಬಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.