ETV Bharat / international

ಟ್ರಂಪ್ ಟ್ವಿಟರ್ ಖಾತೆ ಶಾಶ್ವತ ಅಮಾನತು !

ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಅಪಾಯದಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ.

Twitter permanently suspends Trump from its platform
ಟ್ರಂಪ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದ ಟ್ವಿಟರ್
author img

By

Published : Jan 9, 2021, 6:34 AM IST

ವಾಷಿಂಗ್ಟನ್: ಟ್ರಂಪ್ ಪರ ನಿಂತ ಸಾವಿರಾರು ಜನರು ಅಮೆರಿಕ ಕ್ಯಾಪಿಟಲ್​ಗೆ ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಅಪಾಯವನ್ನು ಉಲ್ಲೇಖಿಸಿ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದೆ.

"@RealDonaldTrump ಖಾತೆಯಿಂದ ಇತ್ತೀಚಿನ ಟ್ವೀಟ್‌ಗಳನ್ನು ಮತ್ತು ಅವುಗಳ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ನಿರ್ದಿಷ್ಟವಾಗಿ ಅವುಗಳನ್ನು ಟ್ವಿಟರ್‌ನಲ್ಲಿ ಮತ್ತು ಹೊರಗೆ ಹೇಗೆ ಸ್ವೀಕರಿಸಲಾಗುತ್ತಿದೆ ಮತ್ತು ವ್ಯಾಖ್ಯಾನಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಿದ್ದೇವೆ. ಹೀಗಾಗಿ ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಅಪಾಯದಿಂದಾಗಿ ನಾವು ಈ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದ್ದೇವೆ" ಎಂದು ಟ್ವಿಟರ್ ತಿಳಿಸಿದೆ.

  • After close review of recent tweets from Trump's account and the context around them — specifically how they are being received and interpreted on and off Twitter — we have permanently suspended the account due to the risk of further incitement of violence: Twitter https://t.co/eg5ovKvkxb pic.twitter.com/bLK94TlWYI

    — ANI (@ANI) January 8, 2021 " class="align-text-top noRightClick twitterSection" data=" ">

"ಈ ವಾರ ನಡೆದ ಭಯಾನಕ ಘಟನೆಗಳ ಹಿನ್ನೆಲೆಯಲ್ಲಿ, ಮತ್ತಷ್ಟು ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಇಂಥದೊಂದು ಕ್ರಮ ಕೈಗೊಳ್ಳಬೇಕಾಗಬಹುದು ಎಂದು ಈ ಮೊದಲೇ ನಾವು ತಿಳಿಸಿದ್ದೆವು. ಸಾಮಾನ್ಯ ನಾಗರಿಕರು ತಮ್ಮ ಚುನಾಯಿತ ಸದಸ್ಯರು ಮತ್ತು ವಿಶ್ವ ನಾಯಕರ ಮಾತುಗಳನ್ನು ನೇರವಾಗಿ ಆಲಿಸಲಿ ಎಂಬ ಉದ್ದೇಶಕ್ಕಾಗಿ ಈ ವೇದಿಕೆ ಅಸ್ತಿತ್ವದಲ್ಲಿದೆ." ಎಂದು ಟ್ವಿಟರ್ ಹೇಳಿದೆ.

ಇನ್ನು ಮುಂದೆಯೂ ತನ್ನ ನೀತಿ ನಿಯಮಗಳು ಹಾಗೂ ಅವುಗಳ ಜಾರಿಗೊಳಿಸುವಿಕೆಯಲ್ಲಿ ಟ್ವಿಟರ್ ಸಂಪೂರ್ಣ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.

ವಾಷಿಂಗ್ಟನ್‌ನಲ್ಲಿ ಪ್ರತಿಭಟನೆ ಹಿಂಸಾಚಾರದ ರೂಪ ಪಡೆದ ನಂತರ ಟ್ರಂಪ್ ಅವರ ಖಾತೆಯನ್ನು ಟ್ವಿಟರ್ ನಿರ್ಬಂಧಿಸಿತ್ತು. ಗುರುವಾರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನೂ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.