ವಾಷಿಂಗ್ಟನ್: ಹೊಸ ಪರಿಹಾರ ಪ್ಯಾಕೇಜ್ ಬಗ್ಗೆ ಒಪ್ಪಂದ ಮಾಡಿಕೊಳ್ಳದ ಡೆಮೋಕ್ರಾಟ್‌ಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯನಿರ್ವಾಹಕ ಕ್ರಮಗಳ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ಕೋವಿಡ್-19 ಮಸೂದೆಗೆ ಸಂಬಂಧಿಸಿದಂತೆ ಕಳೆದ ಒಂದು ವಾರಗಳ ಕಾಲ ನಡೆದ ಸಭೆಯ ನಂತರ ಇಂತಹ ಕ್ರಮಕ್ಕೆ ಟ್ರಂಪ್ ಮುಂದಾಗಿದ್ದಾರೆ ಎನ್ನಲಾಗಿದೆ.
ಮಂಗಳವಾರ ಆಫರ್‌ಗಳ ವಿನಿಮಯವನ್ನು ಮಾಡಲಾಯಿತು ಮತ್ತು ಬುಧವಾರ ಅಮೆರಿಕ ಅಂಚೆ ಸೇವೆಗೆ ಮೀಸಲಿಟ್ಟ ಸಭೆಯು ಸುದೀರ್ಘವಾಗಿ ನಡೆಯಿತು. ರಾಜ್ಯಗಳು ಮತ್ತು ಸ್ಥಳೀಯ ಸರ್ಕಾರಗಳು ಮತ್ತು ನಿರುದ್ಯೋಗ ವಿಮಾ ಸೌಲಭ್ಯಗಳ ನೆರವು ಕುರಿತು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ನಿರ್ದೇಶನದಲ್ಲಿ ಶ್ವೇತಭವನ ಕೆಲವು ಸಲಹೆಗಳನ್ನು ನೀಡುತ್ತಿದೆ.
ಪೆಲೋಸಿ, ವಾರಕ್ಕೆ 600 ಡಾಲರ್ ಪೂರಕ ಸಾಂಕ್ರಾಮಿಕ ಫೆಡರಲ್ ನಿರುದ್ಯೋಗ ಪ್ರಯೋಜನವನ್ನು ವಿಸ್ತರಿಸುವಲ್ಲಿ ಕಠಿಣ ಮಾರ್ಗವನ್ನು ತೋರಿಸುತ್ತಿದ್ದಾರೆ. ಆದರೆ ರಿಪಬ್ಲಿಕನ್ನರು ಈ ಪ್ರಯೋಜನವನ್ನು ಡಿಸೆಂಬರ್‌ಗೆ ವಿಸ್ತರಿಸಲು ಮತ್ತು ಅದನ್ನು 400 ಡಾಲರ್ಗೆ ಇಳಿಸಲು ಮುಂದಾಗಿದ್ದಾರೆಂದು ವರದಿಯಾಗಿದೆ.
ಕೊರೊನಾವೈರಸ್, ಆರ್ಥಿಕತೆಯ ಮೇಲೆ ಮಾಡಿರುವ ಹಾನಿಯಿಂದ ಆದಾಯ ನಷ್ಟವನ್ನು ನಿವಾರಿಸಲು ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳಿಗೆ ಸಹಾಯ ಮಾಡಲು ಶ್ವೇತಭವನವು ಡೆಮೋಕ್ರಟ್ಗಳಿಗೆ 150 ಬಿಲಿಯನ್ ಹೊಸ ವಿನಿಯೋಗವನ್ನು ನೀಡಿದೆ. ಮಾರ್ಚ್ನಲ್ಲಿ ಅಂಗೀಕರಿಸಿದ 2 ಟ್ರಿಲಿಯನ್ ಕೊರೊನಾ ವೈರಸ್ ಮಸೂದೆಯ ಮಾತುಕತೆಯ ಸಮಯದಲ್ಲಿ ತೆರೆಮರೆಯಲ್ಲಿ ನಡೆದ ಮುಸುಕಿನ ಗುದ್ದಾಟ ನಡೆದಿತ್ತು. ಈ ನಡುವೆ ಇನ್ನೂ ಹೆಚ್ಚಿನ ನೆರವನ್ನು ಪೆಲೋಸಿ ಕೇಳುತ್ತಿದ್ದಾರೆ. ಹೆಚ್ಚುವರಿಯಾಗಿ 1 ಟ್ರಿಲಿಯನ್ ಪರಿಹಾರ ಪ್ಯಾಕೇಜ್ಗೆ ಅವರು ಒತ್ತಾಯಿಸಿದ್ದಾರೆ.