ವಾಷಿಂಗ್ಟನ್: ಶ್ವೇತಭವನದಲ್ಲಿ ಪ್ರತಿ ವರ್ಷ ನಡೆಯುವ ವಾರ್ಷಿಕ ಸಾಂಪ್ರದಾಯಿಕ ಥ್ಯಾಂಕ್ಸ್ ಗಿವಿಂಗ್ ಸಮಾರಂಭ ಈ ವರ್ಷವೂ ನೆರವೇರಿತು. ಈ ಸಮಾರಂಭವನ್ನು ಟರ್ಕಿ ಹಕ್ಕಿಗಳಿಗೆ ಕ್ಷಮೆ ಕೇಳುವ ದಿನವಾಗಿಯೂ ಆಚರಿಸಲಾಗುತ್ತಿದೆ. ಸಂಪ್ರದಾಯದಂತೆ ಈ ವರ್ಷವೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟರ್ಕಿ ಕ್ಷಮಾದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಟರ್ಕಿ ಒಕ್ಕೂಟವು ಶ್ವೇತಭವನದಲ್ಲಿ ಕಾರ್ನ್ ಮತ್ತು ಕಾಬ್ ಎಂಬ ಎರಡು ಟರ್ಕಿ ಪಕ್ಷಿಗಳನ್ನು ಹಾಜರುಪಡಿಸಿತ್ತು. ಅದರಲ್ಲಿ ಕಾರ್ನ್ ಅನ್ನು ರಾಷ್ಟ್ರೀಯ ಥ್ಯಾಂಕ್ಸ್ ಗಿವಿಂಗ್ ಟರ್ಕಿ ಎಂದು ಘೋಷಿಸಲಾಯಿತು.
ಕೋವಿಡ್ ಸಾಂಕ್ರಾಮಿಕ ರೋಗವನ್ನು ಶೀಘ್ರದಲ್ಲೇ ಕೊನೆಗೊಳಿಸುವ ಲಸಿಕೆಗಳು ಮತ್ತು ಚಿಕಿತ್ಸೆಗಳಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ, ಎಂದು ಈ ಸಂದರ್ಭದಲ್ಲಿ ಟ್ರಂಪ್ ಹೇಳಿದರು.
ಚುನಾಯಿತ ಅಧ್ಯಕ್ಷ ಜೋ ಬಿಡೆನ್ ತಮ್ಮ ರಾಷ್ಟ್ರೀಯ ಭದ್ರತಾ ತಂಡವನ್ನು ಘೋಷಿಸಿ, ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುವ ಅಗತ್ಯ ಹೇಳಿದ ಕೆಲವೇ ಗಂಟೆಗಳ ಬಳಿಕ ಟರ್ಕಿ ಕ್ಷಮಾದಾನ ಸಮಾರಂಭವು ನಡೆದಿದ್ದು ವಿಶೇಷವಾಗಿತ್ತು.
ಕಳೆದ ವರ್ಷ ಅವರ ವಿರುದ್ಧದ ದೋಷಾರೋಪ ವಿಚಾರಣೆ ಸಂದರ್ಭದಲ್ಲಿ ಟ್ರಂಪ್ ಗೇಲಿ ಮಾಡುವ ಮೂಲಕ ತಮ್ಮ ವಿರುದ್ಧ ಆರೋಪಗಳನ್ನ ನಿರಾಕರಿಸಿದ್ದರು. ಆದರೆ ಈ ಬಾರಿ ಸಮಾರಂಭದಲ್ಲಿ ಅವರು ಮಾಡಿದ ಗೇಲಿಯನ್ನ ನೆನಪಿಸುವಂತೆ ಇತ್ತು.
ಏನಿದು ಥ್ಯಾಂಕ್ಸ್ ಗಿವಿಂಗ್ ಟರ್ಕಿ ಪ್ರಡಾನ್ ಸಮಾರಂಭ
ಅಮೆರಿಕದ ಶ್ವೇತಭವನದಲ್ಲಿ ಪ್ರತಿ ವರ್ಷ ನಡೆಯುವ ಕಾರ್ಯಕ್ರಮವಿದು. 1940ರಿಂದ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ನಾಷನಲ್ ಟರ್ಕಿ ಫಡರೇಷನ್ (ಎನ್ಟಿಎಫ್) ಈ ಕಾರ್ಯಕ್ರಮ ನಡೆಸಿಕೊಡುತ್ತದೆ. ಜಾರ್ಜ್ ಎಚ್ ಡಬ್ಯ್ಲೂ ಬುಷ್ ಕಾಲದಲ್ಲಿ ಈ ಕಾರ್ಯಕ್ರಮ ಸಂಪ್ರದಾಯಬದ್ದಗೊಳಿಸಲಾಯಿತು.