ದಲ್ಲಾಸ್ (ಟೆಕ್ಸಾಸ್): ಅಮೆರಿಕ ಕ್ಯಾಪಿಟಲ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಎನ್ನಲಾಗದ ಟೆಕ್ಸಾಸ್ ಮೂಲದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಎಫ್‌ಬಿಐ ತಿಳಿಸಿದೆ.
30 ವರ್ಷದ ನಿಕೋಲಸ್ ಡಿಕಾರ್ಲೊ ಎಂಬಾತ ಕ್ಯಾಪಿಟಲ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದು, ನಿರ್ಬಂಧಿತ ಕಟ್ಟಡ ಪ್ರವೇಶಿಸಲು ಯತ್ನಿಸಿದ ಆರೋಪದಡಿ ಈತನನ್ನು ಬಂಧಿಸಲಾಗಿದೆ.
ಜನವರಿ 6 ರಂದು ಡಿಕಾರ್ಲೊ, ಸಿಗರೇಟ್ ಸೇದುತ್ತಿರುವ ಫೋಟೋಗಳು ಸಿಕ್ಕಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ನಿಯೋಫ್ಯಾಸಿಸ್ಟ್ ಗುಂಪಿನ ಪ್ರೌಡ್ ಬಾಯ್ಸ್ ಹವಾಯಿಯ ಸಂಸ್ಥಾಪಕರಲ್ಲಿ ಒಬ್ಬರಾದ ನಿಕೋಲಸ್ ಓಚ್ಸ್ ಅವರೊಂದಿಗೂ ಡಿಕಾರ್ಲೊ ಕಾಣಿಸಿಕೊಂಡಿದ್ದ. ನಿರ್ಬಂಧಿತ ಕಟ್ಟಡಗಳಿಗೆ ಕಾನೂನು ಬಾಹಿರವಾಗಿ ಪ್ರವೇಶಿಸಿದ ಆರೋಪದಡಿ ಓಚ್ಸ್ನನ್ನೂ ಬಂಧಿಸಲಾಗಿದೆ.
ನ್ಯೂಯಾರ್ಕ್‌ನ ಡೆಮಾಕ್ರಟಿಕ್ ರೆಪ್ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಹತ್ಯೆಗೆ ಜಾಲತಾಣಗಳಲ್ಲಿ ಕರೆ ನೀಡಿದ ಆರೋಪದಡಿ 34 ವರ್ಷದ ಮಿಲ್ಲರ್‌ನನ್ನು ಕಳೆದ ವಾರ ಬಂಧಿಸಲಾಗಿತ್ತು ಎಂದು ಎಫ್‌ಬಿಐ ತಿಳಿಸಿದೆ.
ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ರೆಬೆಕಾ ರುದರ್ ಫೋರ್ಡ್, ಮಿಲ್ಲರ್‌ನನ್ನು ಫೆಡರಲ್ ಕಸ್ಟಡಿಯಲ್ಲಿ ಉಳಿಯುವಂತೆ ಆದೇಶಿಸಿದ್ದಾರೆ.