ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಅಕಾಲಿಕ ವಿಜಯಗಳನ್ನು ಘೋಷಿಸುತ್ತಿರುವ ಯುಎಸ್ ಅಧ್ಯಕ್ಷ ಟ್ರಂಪ್ ಬೆಂಬಲಿಗರ ವಿರುದ್ಧ ಟಿಕ್‌ಟಾಕ್ ಕ್ರಮಕೈಗೊಂಡಿದ್ದು, ರಿಪಬ್ಲಿಕನ್ ಬೆಂಬಲಿತ ಎರಡು ಖಾತೆಗಳಾದ ರಿಪಬ್ಲಿಕನ್ ಹೈಪ್ ಹೌಸ್ ಮತ್ತು ರಿಪಬ್ಲಿಕನ್ ಬಾಯ್ಸ್ನಿಂದ ಚುನಾವಣಾ ತಪ್ಪು ಮಾಹಿತಿ ಹರಡುವ ವಿಡಿಯೋಗಳನ್ನು ತೆಗೆದಿದೆ.
ರಿಪಬ್ಲಿಕನ್ ಹೈಪ್ ಹೌಸ್ ಮತ್ತು ರಿಪಬ್ಲಿಕನ್ ಬಾಯ್ಸ್ ವಿಡಿಯೋಗಳು ಮತ ಎಣಿಕೆ ನಡೆಯುತ್ತಿರುವಾಗಲೇ ಚುನಾವಣೆಯ ಕುರಿತು ಸುಳ್ಳು ಮಾಹಿತಿಗಳನ್ನು ಹರಡಿಸುತ್ತಿತ್ತು.
"ತಪ್ಪುದಾರಿಗೆಳೆಯುವ ಮಾಹಿತಿಯ ಕುರಿತು ನಮ್ಮ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ವಿಡಿಯೋಗಳನ್ನು ತೆಗೆದುಹಾಕಲಾಗಿದೆ" ಎಂದು ಟಿಕ್‌ಟಾಕ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.
ತಪ್ಪುದಾರಿಗೆಳೆಯುವ ಮಾಹಿತಿ ವಿರುದ್ಧ ತನ್ನ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಶ್ನಾರ್ಹ ವಿಡಿಯೋಗಳನ್ನು ತೆಗೆದುಹಾಕಿದೆ ಎಂದು ಟಿಕ್‌ಟಾಕ್ ಸಮರ್ಥಿಸಿಕೊಂಡಿದೆ.