ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಸಂಸ್ಥಾಪಕ ಅಲ್ ಬಗ್ದಾದಿ ಹತ್ಯೆಯಾಗಿದ್ದು, ಅವನ ಜಾಗಕ್ಕೆ ವಾರದೊಳಗೆ ಮತ್ತೊಬ್ಬ ನಾಯಕ ಬರಲಿದ್ದಾನೆ ಎಂದು ಅಮೆರಿಕದ ಅಧಿಕಾರಿಗಳು ಭವಿಷ್ಯ ನುಡಿದಿದ್ದಾರೆ.
ವಾರಾಂತ್ಯದ ಅಮೆರಿಕದ ಮಿಲಿಟರಿ ದಾಳಿ ವೇಳೆ ಬಗ್ದಾದಿ ಸಿರಿಯಾದಲ್ಲಿ ತನ್ನನ್ನು ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಐಸಿಸ್‍ನ ಮುಖ್ಯ ನಾಯಕನ ಸ್ಥಾನಕ್ಕೆ ವಾರದೊಳಗೆ ಮತ್ತೊಬ್ಬ ಬಂದು ಸೇರಿಕೊಳ್ಳಲಿದ್ದಾನೆ ಎಂದು ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಕಾರ್ಯಕಾರಿ ನಿರ್ದೇಶಕ ರಸ್ ಟ್ರಾವರ್ಸ್ ಹೇಳಿದ್ದಾರೆ. ಆದರೆ, ಉಗ್ರ ಯಾರು ಎಂಬುದನ್ನು ಅವರು ಖಚಿತಪಡಿಸಿಲ್ಲ.
ಸಿರಿಯಾ ಮತ್ತು ಇರಾಕ್‌ನಾದ್ಯಂತ ಚದುರಿಹೋದ ಸುಮಾರು 14,000 ಐಸಿಸ್ ಪಡೆಗೆ ಸಮರ್ಥವಾಗಿ ನಿರ್ದೇಶನ ನೀಡಿ ಅದರ ಚುಕ್ಕಾಣಿ ಹಿಡಿಯುವ ಹಲವು ನಾಯಕರಿದ್ದಾರೆ ಎಂದರು.
ಇರಾಕಿನ ಮಾಜಿ ಅಧ್ಯಕ್ಷ, ಸರ್ವಾಧಿಕಾರಿ ಸದ್ದಾಂ ಹುಸೇನ್ ಸೈನ್ಯದಲ್ಲಿ ಅಧಿಕಾರಿ ಆಗಿದ್ದ ಅಬ್ದುಲ್ಲಾ ಖರ್ಡಾಶ್ ನೇಮಕಗೊಂಡಿದ್ದಾನೆ. ಪ್ರಾಧ್ಯಾಪಕನೆಂದು ಕರೆಯಲಾಗುತ್ತಿದ ಇತ, ಐಸಿಸ್‍ನ ದಿನನಿತ್ಯದ ಕಾರ್ಯವನ್ನು ನಿಯಂತ್ರಿಸುತ್ತಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಅಮೆರಿಕದ ಅಧಿಕಾರಿಗಳು ಮಾತ್ರ ವಾರದೊಳಗೆ ಇನ್ನೋರ್ವ ಲೀಡರ್ ಬರಲಿದ್ದಾರೆ ಎಂದು ಹೇಳುತ್ತಿದ್ದಾರೆ.