ಸ್ಯಾನ್ ಫ್ರಾನ್ಸಿಸ್ಕೋ: ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ ಅವರು 2023ರ ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ರಾಕೆಟ್‌ನಲ್ಲಿ ತನ್ನೊಂದಿಗೆ ಉಚಿತ ಬಾಹ್ಯಾಕಾಶ ಪ್ರಯಾಣ ಮಾಡಲು ಯಾರಾದರೂ ಎಂಟು ಜನ ಬರಬಹುದೆಂದು ವಿಡಿಯೋ ಮೂಲಕ ಆಹ್ವಾನ ನೀಡಿದ್ದಾರೆ.
"ಈ ಚಂದ್ರಯಾನದಲ್ಲಿ ಒಟ್ಟು 10 ರಿಂದ 12 ಜನರಿರುತ್ತಾರೆ. ನಾನು 8 ಜನರನ್ನು ಈ ಪ್ರಯಾಣಕ್ಕೆ ಆಹ್ವಾನಿಸುತ್ತಿದ್ದೇನೆ " ಎಂದು ಅವರು ಹೇಳಿದ್ದಾರೆ. ಜಪಾನಿನ ಈ ಬಿಲಿಯನೇರ್ ಇದಕ್ಕಾಗಿ ಸಾರ್ವಜನಿಕರಿಗೆ ಸ್ಪರ್ಧೆ ಏರ್ಪಡಿಸಿದ್ದಾರೆ. ಈ ಒಂದು ಸ್ಪರ್ಧೆಗೆ ನೋಂದಾಯಿಸಿಕೊಂಡ ಪ್ರತಿಯೊಬ್ಬರಿಗೂ ಆಯ್ಕೆಯ ಬಗ್ಗೆ ಇ-ಮೇಲ್ ಮಾಡಲಾಗುತ್ತದೆ.
ಮೇಜಾವಾ ಅವರು ಇಡೀ ಪ್ರಯಾಣಕ್ಕೆ ಹಣ ನೀಡುವುದಾಗಿ ಹೇಳಿದ್ದು, ಎಂಟು ಜನರನ್ನು ಉಚಿತವಾಗಿ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದಾರೆ. "ನಾನು ಸಂಪೂರ್ಣ ಪ್ರಯಾಣಕ್ಕೆ ಹಣ ನೀಡುತ್ತೇನೆ, ಎಲ್ಲಾ ಆಸನಗಳನ್ನು ಖರೀದಿಸಿದ್ದೇನೆ. ಆದ್ದರಿಂದ ಇದು ಖಾಸಗಿ ಸವಾರಿಯಾಗಿದೆ" ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಾಗತಿಕ - ಪ್ರಾದೇಶಿಕ ಸವಾಲುಗಳ ಸಹಕಾರ: ಅಮೆರಿಕ - ಆಸ್ಟ್ರೇಲಿಯಾ ಚರ್ಚೆ
'ಡಿಯರ್ ಮೂನ್' ಎಂದು ಕರೆಯಲ್ಪಡುವ ಈ ಮಿಷನ್ 2023 ರಲ್ಲಿ ಹಾರಾಟ ನಡೆಸಲಿದೆ. ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು 2018 ರಲ್ಲಿ ಸ್ಟಾರ್‌ಶಿಪ್ ರಾಕೆಟ್‌ನಲ್ಲಿ ಚಂದ್ರಯಾನ ಕೈಗೊಳ್ಳುವ ಮೊದಲ ಪ್ರಯಾಣಿಕ ಎಂದು ಘೋಷಿಸಿದ್ದರು.
ಮಾನವನನ್ನು ರೆಡ್ ಪ್ಲಾನೆಟ್‌ಗೆ ಕರೆದೊಯ್ಯುವ ಸ್ಪೇಸ್‌ಎಕ್ಸ್‌ನ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ನೌಕೆ ಸ್ಟಾರ್‌ಶಿಪ್ ಆಗಿದೆ. ಟೆಕ್ ಉದ್ಯಮಿ ಜೇರೆಡ್ ಐಸಾಕ್ಮನ್ ನೇತೃತ್ವದಲ್ಲಿ ಇನ್ಸ್‌ಪಿರೇಷನ್ 4 ಎಂಬ ಚಾರಿಟಿ ಮಿಷನ್‌ನಲ್ಲಿ 2021 ರ ಕೊನೆಯಲ್ಲಿ ಬಾಹ್ಯಾಕಾಶಕ್ಕೆ ವಿಶ್ವದ ಮೊದಲ ಎಲ್ಲ ನಾಗರಿಕ ಕಾರ್ಯಾಚರಣೆಯನ್ನು ಸ್ಪೇಸ್‌ಎಕ್ಸ್ ಘೋಷಿಸಿದೆ.