ನ್ಯೂಯಾರ್ಕ್(ಯುಎಸ್): ಮತ್ತೊಂದು ಶಂಕಿತ ದ್ವೇಷ ಅಪರಾಧ ಪ್ರಕರಣದಲ್ಲಿ ಭಾರತೀಯ ಮೂಲಕ ಸಿಖ್ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಸಿಖ್ ಚಾಲಕನ ಮೇಲೆ ದೈಹಿಕ ದೌರ್ಜನ್ಯ ನಡೆಸಿ, ತಲೆಯಲ್ಲಿದ್ದ ಟರ್ಬನ್ ತೆಗೆದು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಘಟನೆ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ಕುರಿತ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಜನವರಿ 4 ರಂದು ನವಜೋತ್ ಪಾಲ್ ಕೌರ್ ಎಂಬ ಮಹಿಳೆ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವ್ಯಕ್ತಿಯೊಬ್ಬ ಏರ್‌ಪೋರ್ಟ್ ಹೊರಭಾಗದಲ್ಲಿ ಸಿಖ್ ಧರ್ಮೀಯ ಟ್ಯಾಕ್ಸಿ ಚಾಲಕನ ಮೇಲೆ ಮನಬಂದಂತೆ ಹಲ್ಲೆ ಮಾಡುತ್ತಿರುವುದು ವೀಡಿಯೊದಲ್ಲಿದೆ. ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಘಟನೆಯನ್ನು ಸೆರೆ ಹಿಡಿದಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.
-
Another Sikh cab driver assaulted. This one at JFK Airport in NYC.
— Simran Jeet Singh (@simran) January 5, 2022 " class="align-text-top noRightClick twitterSection" data="
So upsetting to see. But it’s crucial that we don’t look away.pic.twitter.com/43s0jXMLSt
">Another Sikh cab driver assaulted. This one at JFK Airport in NYC.
— Simran Jeet Singh (@simran) January 5, 2022
So upsetting to see. But it’s crucial that we don’t look away.pic.twitter.com/43s0jXMLStAnother Sikh cab driver assaulted. This one at JFK Airport in NYC.
— Simran Jeet Singh (@simran) January 5, 2022
So upsetting to see. But it’s crucial that we don’t look away.pic.twitter.com/43s0jXMLSt
ಈ ಘಟನೆಗೆ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿ ಕಳವಳ ವ್ಯಕ್ತಪಡಿಸಿದೆ. ಈ ಪ್ರಕರಣದ ಬಗ್ಗೆ ಯುಎಸ್ ಅಧಿಕಾರಿಗಳಲ್ಲಿ ಮಾತನಾಡಿದ್ದು, ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದೇವೆ ಎಂದು ಟ್ವೀಟ್ ಮಾಡಿದೆ. ಇದೇ ವೇಳೆ ಅಮೆರಿಕದಲ್ಲಿರುವ ಸಿಖ್ ಸಮುದಾಯದಿಂದಲೂ ಘಟನೆಗೆ ಆಕ್ರೋಶ ವ್ಯಕ್ತವಾಗಿದೆ.
-
The assault against a Sikh taxi driver in New York is deeply disturbing. We have taken up the matter with US authorities and urged them to investigate this violent incident.@PMOIndia @MEAIndia @DrSJaishankar @IndianEmbassyUS @NYCMayor @NYCMayorsOffice
— India in New York (@IndiainNewYork) January 8, 2022 " class="align-text-top noRightClick twitterSection" data="
">The assault against a Sikh taxi driver in New York is deeply disturbing. We have taken up the matter with US authorities and urged them to investigate this violent incident.@PMOIndia @MEAIndia @DrSJaishankar @IndianEmbassyUS @NYCMayor @NYCMayorsOffice
— India in New York (@IndiainNewYork) January 8, 2022The assault against a Sikh taxi driver in New York is deeply disturbing. We have taken up the matter with US authorities and urged them to investigate this violent incident.@PMOIndia @MEAIndia @DrSJaishankar @IndianEmbassyUS @NYCMayor @NYCMayorsOffice
— India in New York (@IndiainNewYork) January 8, 2022
ಅಮೆರಿಕದಲ್ಲಿ ಇಂಥ ದ್ವೇಷಪೂರಿತ ಘಟನೆ, ಹಿಂಸಾಚಾರಗಳು ಆಗಿಂದ್ದಾಗ್ಗೆ ನಡೆಯುತ್ತಿವೆ. 2019ರಲ್ಲಿ ಭಾರತೀಯ ಮೂಲದ ಅಮೆರಿಕದ ಸಿಖ್ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ, ಜನಾಂಗೀಯವಾಗಿ ನಿಂದಿಸಲಾಗಿತ್ತು. 2017ರಲ್ಲೂ ನ್ಯೂಯಾರ್ಕ್‌ನಲ್ಲಿ ಸಿಖ್ ಚಾಲಕನ ಮೇಲೆ ಹಲ್ಲೆ ನಡೆಸಿ ಟರ್ಬನ್ ತೆಗೆದು ಹಾಕಿ ಅವಮಾನ ಮಾಡಿದ್ದರು.