ವಾಷಿಂಗ್ಟನ್: ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್, ನಾನು ಯಾವಾಗಲೂ ಭಾರತೀಯ ಅಮೆರಿಕನ್ ಸಮುದಾಯದೊಂದಿಗೆ ಆಳವಾಗಿ ಸಂಪರ್ಕ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಇಂಡಿಯಾವೆಸ್ಟ್‌ನ ಆಪ್-ಎಡ್‌ನಲ್ಲಿ ಮಾತನಾಡಿದ ಅವರು, ನನ್ನ ಮೌಲ್ಯಗಳಿಂದಾಗಿ ಭಾರತೀಯ ಅಮೆರಿಕನ್ ಸಮುದಾಯದೊಂದಿಗೆ ಆಳವಾಗಿ ಸಂಪರ್ಕ ಹೊಂದಿದ್ದೇನೆ ಎಂದು ಭಾವಿಸುತ್ತೇನೆ. ಈ ಮೌಲ್ಯಗಳನ್ನು ಅಮೆರಿಕದಲ್ಲಿ ಉತ್ತಮ ಜೀವನಕ್ಕಾಗಿ ಎಲ್ಲವನ್ನೂ ಪಣಕ್ಕಿಟ್ಟ ನನ್ನ ಐರಿಶ್ ಪೂರ್ವಜರಿಂದ ಪಡೆದಿದ್ದೇನೆ. ಅವರು ನನ್ನನ್ನು ಉತ್ತಮ ಮಗ, ಸಹೋದರ, ಗಂಡ, ತಂದೆ, ಅಜ್ಜ ಮತ್ತು ನಂಬಿಕೆಯ ವ್ಯಕ್ತಿ ಮತ್ತು ಜೀವಮಾನದ ಸಾರ್ವಜನಿಕ ಸೇವಕರಾಗಿ ರೂಪಿಸಿದ್ದಾರೆ ಎಂದು ಹೇಳಿದರು.
ಕಮಲಾ ಹ್ಯಾರಿಸ್ ಬಗ್ಗೆ ಮಾತನಾಡುತ್ತಾ, ಕಮಲಾ ಅವರ ತುಂಬಾ ಸ್ಫೂರ್ತಿದಾಯಕವಾಗಿಸುವ ಇನ್ನೊಂದು ವಿಷಯವೆಂದರೆ, ಅವರ ತಾಯಿ ಶ್ಯಾಮಲಾ ಗೋಪಾಲನ್. ಜೊತೆಗೆ, ಚೆನ್ನೈನಿಂದ ಬಂದಿರುವ ಆಕೆಯ ತಂದೆ, ಅಜ್ಜ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೂಷಿಸಿದ ಅವರು, ಮಾರಣಾಂತಿಕ ಕೊರೊನಾ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಡೊನಾಲ್ಡ್ ಟ್ರಂಪ್ ಭಯಭೀತರಾಗಿದ್ದಾರೆ. ಅವರು ವಿಜ್ಞಾನವನ್ನು ನಂಬುವುದಿಲ್ಲ ಅಥವಾ ಡಾ.ಫೌಸಿಯಂತಹ ತಜ್ಞರನ್ನು ನಂಬುವುದಿಲ್ಲ. ಅವರ ನಿರ್ಲಕ್ಷ್ಯದಿಂದ ಅಮೆರಿಕದಲ್ಲಿ ಜೀವನ ಮತ್ತು ಜೀವನೋಪಾಯಗಳು ಹಾಳಾಗುತ್ತಿವೆ ಎಂದಿದ್ದಾರೆ.
ಟ್ರಂಪ್ ಮತ್ತು ಬೈಡನ್ ನಡುವಿನ ಅಂತಿಮ ಚರ್ಚೆ ಟೆನ್ನೆಸ್ಸೀಯ ನ್ಯಾಶ್‌ವಿಲ್ಲೆಯಲ್ಲಿರುವ ಬೆಲ್ಮಾಂಟ್ ವಿಶ್ವವಿದ್ಯಾಲಯದ ಕರ್ಬ್ ಈವೆಂಟ್ ಕೇಂದ್ರದಲ್ಲಿ ಶುಕ್ರವಾರ ನಡೆಯಿತು. ನವೆಂಬರ್ 3 ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.