ETV Bharat / international

ಅಮೆರಿಕದಲ್ಲಿ ಕೊರೊನಾ ಬಾಧಿತರಿಗೆ ಪರಿಹಾರ ನೀಡುವ ಮಹತ್ವದ ಮಸೂದೆಗೆ ಟ್ರಂಪ್ ಸಹಿ - ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ಕೊವಿಡ್​ನಿಂದ ಬಳಲುತ್ತಿರುವವರು ಅಥವಾ ಕೊವಿಡ್ ಸೋಂಕಿತರನ್ನು ಆರೈಕೆ ಮಾಡುತ್ತಿರುವವರಿಗೆ ಉಚಿತ ಚಿಕಿತ್ಸೆ, ವಿಮೆ ಮತ್ತು ಸಂಬಳ ಸಹಿತ ರಜೆ ಮುಂತಾದ ಸೌಲಭ್ಯಗಳನ್ನು ಅಮೆರಿಕ ಸರ್ಕಾರ ನೀಡಲು ತೀರ್ಮಾನಿಸಿದೆ.

Emergency $100 bn coronavirus relief bill clears US Congress
ತುರ್ತು ಕೊರೊನಾ ಪರಿಹಾರ ಬಿಲ್​ಗೆ ಟ್ರಂಪ್ ಸಹಿ
author img

By

Published : Mar 19, 2020, 12:43 PM IST

ವಾಷಿಂಗ್ಟನ್ ಡಿಸಿ: ಕೊರೊನಾ ವೈರಸ್ ಬಾಧಿತರಿಗೆ ಪರಿಹಾರ ನೀಡುವ ಬಹು ಬಿಲಿಯನ್ ಡಾಲರ್ ಮೊತ್ತದ ತುರ್ತು ಕೊರೊನಾ ವೈರಸ್ ಪರಿಹಾರ ಮಸೂದೆ (Coronavirus relief bill) ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಇದಕ್ಕೂ ಮೊದಲು ಮಹತ್ವದ ಮಸೂದೆಗೆ ಅಮೆರಿಕ ಸಂಸತ್ ಅನುಮೋದನೆ ನೀಡಿತ್ತು.

'ದಿ ಫ್ಯಾಮಿಲೀಸ್ ಫಸ್ಟ್' ಕೊರೊನಾ ವೈರಸ್ ರೆಸ್ಪಾನ್ಸ್ ಆ್ಯಕ್ಟ್ ಹೆಸರಿನ ಕಾನೂನು ಅಮೆರಿಕ ಸಂಸತ್​ನಲ್ಲಿ 90-8 ಮತಗಳಿಂದ ಅಂಗೀಕಾರ ಪಡೆದಿದೆ. ಈ ಕಾನೂನಿನನ್ವಯ ಕೊವಿಡ್​ನಿಂದ ಬಳಲುತ್ತಿರುವವರು ಅಥವಾ ಕೊವಿಡ್ ಸೋಂಕಿತರನ್ನು ಆರೈಕೆ ಮಾಡುತ್ತಿರುವವರಿಗೆ ಉಚಿತ ಚಿಕಿತ್ಸೆ, ವಿಮೆ, ಸಂಬಳ ಸಹಿತ ರಜೆ ಮುಂತಾದ ಸೌಲಭ್ಯಗಳನ್ನು ಅಮೆರಿಕ ಒದಗಿಸಲಿದೆ.

ಕೊರೊನಾ ವೈರಸ್​ನಿಂದ ಉಂಟಾಗಿರುವ ಪರಿಸ್ಥಿತಿಯಿಂದ ಅಮೆರಿಕ ಜನತೆ ಚೇತರಿಸಿಕೊಳ್ಳುವಂತಾಗಲು ಈ ತುರ್ತು ಕಾನೂನು ಸಹಾಯ ಮಾಡಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಮಾರಣಾಂತಿಕ ವೈರಸ್​ಗೆ ಸಂಬಂಧಿಸಿದಂತೆ ಅಮೆರಿಕ ಜಾರಿಗೆ ತಂದಿರುವ ಎರಡನೇ ಪರಿಹಾರಾತ್ಮಕ ಕಾಯ್ದೆ ಇದಾಗಿದೆ. ವೈರಸ್ ಹಾವಳಿಯಿಂದ ಅಮೆರಿಕದಲ್ಲಿ 100 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆ 8,000ದ ಗಡಿ ದಾಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.